ಬೆಂಗಳೂರು : ತಲೆ ತುಂಬಾ ಕೂದಲಿದ್ದರೆ ಮುಖದ ಸೌಂದರ್ಯ ಹೆಚ್ಚುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಸಾಮಾನ್ಯವಾಗಿ ಬಹುತೇಕರು ಎದುರಿಸುವ ಸಮಸ್ಯೆ. ಕೂದಲು ಉದುರುವುದಕ್ಕೆ ನಾನಾ ಕಾರಣಗಳಿವೆ. ನಾವು ಸೇವಿಸುವ ಆಹಾರ, ಅನುಸರಿಸುವ ಲೈಫ್ ಸ್ಟೈಲ್, ಫ್ಯಾಷನ್ ಹಿಂದೆ ಬಿದ್ದು ಉಪಯೋಗಿಸುವ ಶಾಂಪೂ, ಸಾಬೂನು, ಸ್ಪ್ರೇ, ಜೆಲ್ ಇವುಗಳೆಲ್ಲವೂ ಇದಕ್ಕೆ ಕಾರಣ. ಒಮ್ಮೆ ಕೂದಲು ಉದುರಲು ಆರಂಭಿಸಿದರೆ ಅದನ್ನು ನಿಯಂತ್ರಿಸುವುದು ಬಹಳ ಕಷ್ಟ. ಕೂದಲು ಉದುರುವುದು ನಿಯಂತ್ರಿಸುವುದು ಮಾತ್ರವಲ್ಲ ಆ ಜಾಗದಲ್ಲಿ ಕೂದಲು ಬೆಳೆಯುವಂತೆಯೂ ನೋಡಿಕೊಳ್ಳಬೇಕಾಗುತ್ತದೆ.
ಕೂದಲು ಉದುರದಂತೆ ತಡೆಯಲು ಮತ್ತು ದಟ್ಟವಾಗಿ ಕೂದಲು ಬೆಳೆಯಲು ಇಲ್ಲಿದೆ ಕೆಲವು ಮನೆ ಮದ್ದು :
ತೆಂಗಿನ ಎಣ್ಣೆ ಮತ್ತು ಈರುಳ್ಳಿ ರಸ :
ತೆಂಗಿನ ಎಣ್ಣೆ ವಿಟಮಿನ್ ಇಯಲ್ಲಿ ಸಮೃದ್ದವಾಗಿದೆ. ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸಲು ತೆಂಗಿನೆಣ್ಣೆ ಸಹಾಯ ಮಾಡುತ್ತದೆ. ಮಾತ್ರವಲ್ಲ ಇದು ಕೂದಲಿಗೆ ವಿಶೇಷ ಹೊಳಪು ನೀಡುತ್ತದೆ. ಇನ್ನು ಈರುಳ್ಳಿ ಎಣ್ಣೆ ಕೂದಲು ಉದುರುವುದನ್ನು ತಡೆಯುವುದಲ್ಲದೆ ಕೂದಲಿನ ಬೆಳೆವಣಿಗೆಗೆ ಸಹಾಯ ಮಾಡುತ್ತದೆ.ಹೀಗಾಗಿ ಈರುಳ್ಳಿ ರಸವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿದರೆ ಕೂದಲು ಉದುರುವುದು ಕಡಿಮೆಯಾಗುವುದು ಮಾತ್ರವಲ್ಲ ಆ ಜಾಗದಲ್ಲಿ ಮತ್ತೆ ಕೂದಲು ಬೆಳೆಯಲು ಕೂಡಾ ಸಹಾಯವಾಗುತ್ತದೆ.
ಇದನ್ನೂ ಓದಿ : ನೀವೂ ಕೂಡ ಕೇವಲ ಟೇಸ್ಟ್ ನೋಡಿ ಟೂತ್‌ಪೇಸ್ಟ್ ಖರೀದಿಸುತ್ತೀರಾ?
ಇದನ್ನು ಕೂದಲಿಗೆ ಹಚ್ಚುವುದು ಹೇಗೆ ? :
1. ಮೊದಲು ಈರುಳ್ಳಿಯನ್ನು ಮಿಕ್ಸಿಗೆ ಹಾಕಿ ಈರುಳ್ಳಿ ರಸವನ್ನು ತೆಗೆದುಕೊಳ್ಳಿ.
2. ನಂತರ ಒಂದು ಬಾಣಲೆಗೆ ಸ್ವಲ್ಪ ತೆಂಗಿನ ಎಣ್ಣೆ ಹಾಕಿ ಆ ಎಣ್ಣೆಗೆ ಈರುಳ್ಳಿ ರಸ ಸೇರಿಸಿ ಬಿಸಿ ಮಾಡಿಕೊಳ್ಳಿ.
3. ಹೀಗೆ ಬಿಸಿ ಮಾಡಿದ ಎಣ್ಣೆಯನ್ನು ತಣ್ಣಗಾಗಲು ಬಿಡಿ.
4. ತಣ್ಣಗಾದ ಮೇಲೆ ತೆಂಗಿನೆಣ್ಣೆ ಮತ್ತು ಈರುಳ್ಳಿ ರಸದ ಮಿಶ್ರಣವನ್ನು ನೆತ್ತಿ ಹಾಗೂ ಕೂದಲುಗಳ ಬುಡಕ್ಕೆ ಹಚ್ಚಿ.
5. ನಿತ್ಯವೂ ಹೀಗೆ ಮಾಡುತ್ತಾ ಬಂದರೆ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಖಂಡಿತವಾಗಿಯೂ ಸಿಗುವುದು.
ಅಲೋವೆರಾ ಮತ್ತು ತೆಂಗಿನೆಣ್ಣೆ :
ಅಲೋವೆರಾವನ್ನು ಸೌಂದರ್ಯ ವರ್ಧಕವಾಗಿ ಬಳಸಲಾಗುತ್ತದೆ. ಇದು ಕೂದಲು ಹಾಗೂ ಚರ್ಮದ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೋಂಕು, ಫಂಗಸ್ ಮುಂತಾದ ಸಮಸ್ಯೆಯಿಂದ ಕೂದಲು ಉದುರುತ್ತಿದ್ದರೆ ಆಲೋವಿರಾ ಅದರ ನಿಯಂತ್ರಣಕ್ಕೆ ಬಹಳ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.
ಇದನ್ನೂ ಓದಿ : Neera Health Benefits: ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ನೈಸರ್ಗಿಕ ಜ್ಯೂಸ್!
ಕೂದಲಿಗೆ ಹಚ್ಚುವುದು ಹೇಗೆ? :
ಅಲೋವೆರಾದ ಜೆಲ್ ಅನ್ನು ಎಲೆಯಿಂದ ಬಿಡಿಸಿಕೊಂಡು ಹಾಗೆಯೇ ನೇರವಾಗಿ ಕೂದಲಿನ ಬುಡಕ್ಕೆ ಮತ್ತು ಕೂದಲಿಗೆ ಹಚ್ಚಿದರೂ ಬಹಳ ಪರಿಣಾಮಕಾರಿಯಾಗಿರುತ್ತದೆ. ಅಲ್ಲದೆ, ಆಲೋವಿರಾ ಜೆಲ್ ಅನ್ನು ತೆಂಗಿನೆಣ್ಣೆ ಜೊತೆ ಬೆರೆಸಿ ಕೂದಲಿಗೆ ಹಚ್ಚಿದರೂ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ.
- ಇದಕ್ಕಾಗಿ ಒಂದು ಬೌಲ್ ನಲ್ಲಿ ತೆಂಗಿನೆಣ್ಣೆಯನ್ನು ತೆಗೆದುಕೊಳ್ಳಿ.
-ಈ ಎಣ್ಣೆಗೆ ಆಲೋವಿರಾ ಜೆಲ್ ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿಕೊಳ್ಳಿ.
- ಚೆನ್ನಾಗಿ ಮಿಕ್ಸ್ ಆದ ನಂತರ ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಅಥವಾ ಕೂದಲಿಗೆ ಹಚ್ಚಿ.
ನಿಯಮಿತವಾಗಿ ಹೀಗೆ ಮಾಡುತ್ತಾ ಬಂದರೆ ಕೂದಲು ಉದುರುವುದು ನಿಯಂತ್ರಣಕ್ಕೆ ಬರುತ್ತದೆ. ಮಾತ್ರವಲ್ಲ ಹೊಸ ಕೂದಲು ಬೆಳೆಯಲು ಕೂಡಾ ಸಹಾಯ ಮಾಡುತ್ತದೆ.
( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.