ನಮಗೆ ಹಸಿವಾದಾಗ ಏನು ಸಿಕ್ಕರೂ ಅದನ್ನ ತಿಂದು ಬಿಡುತ್ತೇವೆ ಆದರೆ ಹೀಗೆ ತಿನ್ನುವುದು ತಪ್ಪು. ಯಾಕೆ ಅಂದ್ರೆ ಪ್ರತಿಯೊಂದು ಆಹಾರ ತಿನ್ನಲು ಅದರದ್ದೇ ಆದ ಸರಿಯಾದ ಸಮಯವಿದೆ ಎಂಬುದನ್ನು ನೆನಪಿನಲ್ಲಿಡಬೇಡಿ. ನೀವು ಇದನ್ನೂ ಒಪ್ಪದಿರಬಹುದು. ಒಂದು ವೇಳೆ ತಿಂದಿದ್ದೆ ಆದರೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಎದುರಾಗುವ ಸಮಸ್ಯೆಗಳೆಂದರೆ ಎದೆಯುರಿ, ಹೊಟ್ಟೆ ನೋವು, ಮಲಬದ್ಧತೆ, ಗ್ಯಾಸ್, ವಾಂತಿ ಇತ್ಯಾದಿ. ಕೆಳಗಿನ 8 ವಿಷಯಗಳನ್ನು ತಿನ್ನಲು ಸರಿಯಾದ ಸಮಯ ಯಾವುದು ಇಲ್ಲಿದೆ ನೋಡಿ..
1. ಅನ್ನ ಸೇವಿಸಲು ಉತ್ತಮ ಸಮಯ
ಡಯಟೀಶಿಯನ್ ಕನ್ಸಲ್ಟೆಂಟ್ ಡಾ.ರಂಜನಾ ಸಿಂಗ್ ಪ್ರಕಾರ, ಅನ್ನವನ್ನು(Rice) ಹಗಲು ರಾತ್ರಿ ಎನ್ನದೆ ಸೇವಿಸುತ್ತಾರೆ. ಆದರೆ ಹಗಲಿನಲ್ಲಿ ನಿಮ್ಮ ಚಯಾಪಚಯವು ವೇಗವಾಗಿರುತ್ತದೆ, ಆದ್ದರಿಂದ ಮಧ್ಯಾಹ್ನ ಅನ್ನವನ್ನು ಸೇವಿಸುವುದು ಉತ್ತಮ. ನೀವು ರಾತ್ರಿ ಅನ್ನ ಸೇವಿಸುವುದಾದರೆ, ಮಲಗುವ 2 ಗಂಟೆಗಳ ಮೊದಲು ಅನ್ನ ಸೇವಿಸಿ.
ಇದನ್ನೂ ಓದಿ : Breakfast Tips: ರೋಗಗಳಿಂದ ದೂರವಿರಲು ಬೆಳಗಿನ ಉಪಹಾರದಲ್ಲಿ ಈ 2 ಆಹಾರವನ್ನು ತಪ್ಪದೇ ಸೇವಿಸಿ
2. ಬಾಳೆಹಣ್ಣು ತಿನ್ನಲು ಸರಿಯಾದ ಸಮಯ
ನೀವು ಬಾಳೆಹಣ್ಣು ತಿನ್ನಲು ಬಯಸಿದರೆ, ಮಧ್ಯಾಹ್ನ ಬಾಳೆಹಣ್ಣು(Banana) ತಿನ್ನುವುದು ತುಂಬಾ ಪ್ರಯೋಜನಕಾರಿ. ಏಕೆಂದರೆ, ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಎದೆಯುರಿ ಸಮಸ್ಯೆಯನ್ನು ತಡೆಯುತ್ತದೆ. ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದರಿಂದ ಹೊಟ್ಟೆ ನೋವು ಉಂಟಾಗುತ್ತದೆ, ರಾತ್ರಿ ಬಾಳೆಹಣ್ಣು ತಿನ್ನುವುದರಿಂದ ಕೆಮ್ಮು ಮತ್ತು ನೆಗಡಿ ಉಂಟಾಗಬಹುದು.
3. ವಾಲ್ನಟ್ಸ್ ಸೇವಿಸಲು ಉತ್ತಮ ಸಮಯ
ವಾಲ್ನಟ್ಸ್(Walnuts) ಮೆದುಳಿಗೆ ತುಂಬಾ ಪ್ರಯೋಜನಕಾರಿ. ಏಕೆಂದರೆ, ಇದರಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳಿವೆ. ಆದರೆ ವಾಲ್ ನಟ್ ಗಳನ್ನು ಸಂಜೆ ತಿನ್ನುವುದು ಉತ್ತಮ. ಬೆಳಿಗ್ಗೆ, ಮಧ್ಯಾಹ್ನ ಅಥವಾ ರಾತ್ರಿ ತಿನ್ನುವುದರ ಮೇಲೆ ಪರಿಣಾಮ ಬೀರಬಹುದು.
ಇದನ್ನೂ ಓದಿ : Skin Care: ಕೊತ್ತಂಬರಿ ಸೊಪ್ಪನ್ನು ಈ ರೀತಿ ಬಳಸಿ ಪಿಂಪಲ್ಸ್ ಸಮಸ್ಯೆಗೆ ಹೇಳಿ ಬೈ! ಬೈ!
4. ಹಾಲು ಕುಡಿಯಲು ಉತ್ತಮ ಸಮಯ
ಜನರು ಹೆಚ್ಚಾಗಿ ಬೆಳಿಗ್ಗೆ ಹಾಲು(Milk) ಕುಡಿಯುತ್ತಾರೆ. ಆದರೆ ರಾತ್ರಿ ಹಾಲು ಕುಡಿಯುವುದು ಹೆಚ್ಚು ಪ್ರಯೋಜನಕಾರಿ. ಇದು ದೇಹವು ವಿಶ್ರಾಂತಿ ಪಡೆಯಲು, ಚೇತರಿಸಿಕೊಳ್ಳಲು ಮತ್ತು ಆಳವಾದ ನಿದ್ರೆಯನ್ನು ತರಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಹಾಲು ಕುಡಿಯುವುದರಿಂದ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.
5. ಮೊಳಕೆ ಕಾಳು ಯಾವಾಗ ಸೇವಿಸಬೇಕು?
ತೂಕ ಇಳಿಸಿಕೊಳ್ಳಲು ಜನರು ಮೊಳಕೆ ಕಾಳುಗಳನ್ನ(Sprouts) ಸೇವಿಸುತ್ತಾರೆ. ಆದರೆ ಇದನ್ನು ರಾತ್ರಿ ತಿನ್ನಬೇಕು. ಏಕೆಂದರೆ, ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ದೇಹಕ್ಕೆ ಪೋಷಣೆಯನ್ನು ಒದಗಿಸುತ್ತದೆ. ಬೆಳಿಗ್ಗೆ ಮೊಳಕೆ ಕಾಳುಗಳನ್ನ ತಿನ್ನುವುದರಿಂದ ನಿಮಗೆ ಬೇಗನೆ ಹಸಿವಾಗುತ್ತದೆ. ಅದರಿಂದಾಗಿ ನಿಮ್ಮ ಅನಾರೋಗ್ಯಕರ ಆಹಾರ ಸೇವಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ಇದನ್ನೂ ಓದಿ : ಶ್ರಾವಣ ಮಾಸದ ನಂತರ ತಿನ್ನಬೇಕು ಈ ಆಹಾರಗಳನ್ನು , ತಜ್ಞರ ಸಲಹೆ ಏನಿದೆ ನೋಡಿ
6. ಮೊಸರನ್ನು ಯಾವಾಗ ಸೇವಿಸಬೇಕು?
ತಜ್ಞರ ಪ್ರಕಾರ, ಮೊಸರನ್ನು ಹಗಲಿನಲ್ಲಿ ತಿನ್ನಬೇಕು. ನೀವು ಇದನ್ನು ಊಟದ ಜೊತೆ ಅಥವಾ 3-4 ಗಂಟೆಯ ನಡುವೆ ತಿನ್ನಬಹುದು. ಮೊಸರು ಸೇವನೆ(Eat Curd)ಯು ಜೀರ್ಣಕ್ರಿಯೆಯನ್ನು ಹೆಚ್ಚಿಸುವುದು, ಜೀರ್ಣಾಂಗ ವ್ಯವಸ್ಥೆಯನ್ನು ಸಡಿಲಗೊಳಿಸುವುದು, ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾದ ಬೆಳವಣಿಗೆ, ಇತ್ಯಾದಿ ಪ್ರಯೋಜನಗಳನ್ನು ನೀಡುತ್ತದೆ. ರಾತ್ರಿ ಸಮಯದಲ್ಲಿ ಮೊಸರನ್ನು ಸೇವಿಸುವುದರಿಂದ ಲೋಳೆಯ ಸಮಸ್ಯೆಗಳು ಉಂಟಾಗಬಹುದು.
7. ಸೇಬು ಹಣ್ಣು ಸೇವಿಸಲು ಉತ್ತಮ ಸಮಯ
ಸೇಬು ಹಣ್ಣುಗಳನ್ನು ತಿನ್ನುವುದು ರೋಗ ನಿರೋಧಕ ಶಕ್ತಿ(Immunity Boosting)ಯನ್ನು ಬಲಪಡಿಸಲು ಪ್ರಯೋಜನಕಾರಿ. ಆಪಲ್ ಸಿಪ್ಪೆಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪದಾರ್ಥಗಳಿವೆ. ಆದರೆ ರಾತ್ರಿ ಸೇಬು ತಿನ್ನುವುದರಿಂದ ಎದೆಯುರಿ ಅಥವಾ ಅಸಿಡಿಟಿ ಉಂಟಾಗಬಹುದು. ನೀವು ಬೆಳಿಗ್ಗೆ ಅಥವಾ ಮಧ್ಯಾಹ್ನ ಸೇಬು ಸೇವಿಸಬಹುದು.
ಇದನ್ನೂ ಓದಿ : Coronavirus 3rd Wave: 'ಕೋರೋನಾ ಮೂರನೇ ಅಲೆ ಇಲ್ಲಕ್ಕೆ ಸಮಾನ, ಅಕ್ಟೋಬರ್ ವರೆಗೆ ಮಹಾಮಾರಿಯಿಂದ ಮುಕ್ತಿ'
8. ಮಾಂಸವನ್ನು ಯಾವಾಗ ಸೇವಿಸಬೇಕು?
ಮಾಂಸ(Meat)ವನ್ನು ತಿನ್ನಲು ಸರಿಯಾದ ಸಮಯ ಹಗಲು. ಏಕೆಂದರೆ, ಮಾಂಸದಲ್ಲಿ ಪ್ರೋಟೀನ್ ತುಂಬಾ ಹೆಚ್ಚಾಗಿದೆ. ಇದು ದೈಹಿಕ ಸಾಮರ್ಥ್ಯ ಮತ್ತು ಏಕಾಗ್ರತೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ರಾತ್ರಿಯಲ್ಲಿ ಮಾಂಸ ತಿನ್ನುವುದರಿಂದ ಹೊಟ್ಟೆಯಲ್ಲಿ ಭಾರ ಅಥವಾ ಹೊಟ್ಟೆ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.