ಪ್ರತಿ 100 ವರ್ಷಗಳಿಗೊಮ್ಮೆ ಬರುತ್ತಂತೆ coronavirus ನಂತಹ ಮಹಾಮಾರಿ.. ! ಇಲ್ಲಿವೆ ಅಂಕಿ-ಅಂಶಗಳು

ಪ್ರತಿ 100 ವರ್ಷಗಳಿಗೊಮ್ಮೆ ವಿಶ್ವ ಕೊರೊನಾ ವೈರಸ್ ನಂತಹ ಮಹಾಮಾರಿಯನ್ನು ಎದುರಿಸುತ್ತದೆ ಎಂದರೆ ನೀವು ನಂಬುತ್ತೀರಾ? ಹೋದು, ಇದು ಕಳೆದ 400 ವರ್ಷಗಳಿಂದ ನಡೆಯುತ್ತಾ ಬಂದಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ.

Last Updated : Apr 3, 2020, 03:20 PM IST
ಪ್ರತಿ 100 ವರ್ಷಗಳಿಗೊಮ್ಮೆ ಬರುತ್ತಂತೆ coronavirus ನಂತಹ ಮಹಾಮಾರಿ.. ! ಇಲ್ಲಿವೆ ಅಂಕಿ-ಅಂಶಗಳು title=

ನವದೆಹಲಿ: ಸದ್ಯ ಇಡೀ ವಿಶ್ವ ಕೊರೊನಾ ವೈರಸ್ ಸಂಕಷ್ಟ ಎದುರಿಸುತ್ತಿದೆ. ಮೊದಲು ಚೀನಾ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಈ ವೈರಸ್ ಬಳಿಕ ಇಟಲಿ, ಅಮೇರಿಕಾ ಹಾಗೂ ಭಾರತ ಸೇರಿದಂತೆ ಭಾರತದಂತಹ ಹಲವು ದೇಶಗಳಲ್ಲಿ ತನ್ನ ಪ್ರಕೋಪ ಮುಂದುವರೆಸಿದೆ. ಈ ದೇಶಗಳ ಸರ್ಕಾರಗಳೂ ಕೂಡ ಈ ಮಾರಕ ವೈರಸ್ ದಾಳಿಯಿಂದ ತಮ್ಮ ತಮ್ಮ ದೇಶದ ನಾಗರಿಕರ ಪ್ರಾಣ ರಕ್ಷಿಸಲು ಎಲ್ಲಿಲ್ಲದ ಹರಸಾಹಸ ಮಾಡುತ್ತಿವೆ. ಆದರೆ, ಸದ್ಯದ ಮಟ್ಟಿಗೆ ಈ ಮಹಾಮಾರಿಯಿಂದ ಬಚಾವಾಗಲು ಕೇವಲ ಒಂದೇ ಒಂದು ಉಪಾಯವಿದ್ದು, ಅದೆಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ. ಆದರೆ, ವಿಶ್ವದಲ್ಲಿ ಕೊರೊನಾದಂತಹ ಪ್ರಕೋಪ ಸೃಷ್ಟಿಯಾಗಿರುವುದು ಇದೇ ಮೊದಲ ಬಾರಿಯಲ್ಲ ಎಂಬುದು ಬಹುತೇಕರಿಗೆ ತಿಳಿಯದ ವಿಷಯ. ಇದನ್ನು ಪ್ರಕೃತಿಯ ತನ್ನದೇ ಆದ ವಿಧಾನ ಅಂದುಕೊಳ್ಳಿ ಅಥವಾ ಬೇರೆ ಇನ್ನೇನೋ.. ಆದರೆ, ಪ್ರತಿ 100 ವರ್ಷಗಳಿಗೊಮ್ಮೆ ನಾಗರಿಕರು ಕೊರೊನಾವೈರಸ್ ನಂತಹ ಮಹಾಮಾರಿಯನ್ನು ಈ ಹಿಂದೆಯೂ ಕೂಡ ಎದುರಿಸಿದ್ದು, ಕಳೆದ ಸುಮಾರು 400 ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಹಾಗಾದರೆ ಬನ್ನಿ ಕಳೆದ 400 ವರ್ಷಗಳಿಂದ ಜನರು ಯಾವಯಾವ ಮಹಾಮಾರಿಗಳನ್ನು ಎದುರಿಸಿದ್ದಾರೆ ಎಂಬುದನ್ನು ಒಮ್ಮೆ ತಿಳಿದುಕೊಳ್ಳೋಣ..

ಪ್ಲೇಗ್
1720 ರಲ್ಲಿ ಫ್ರಾನ್ಸ್ ನ ಮೊಸಾಯಿಲ್ ಹೆಸರಿನ ಚಿಕ್ಕ ನಗರದಲ್ಲಿ ಹರಡಿದ್ದ ಪ್ಲೇಗ್ ಮಹಾಮಾರಿ ಒಂದು ಲಕ್ಷಕ್ಕೂ ಅಧಿಕ ಜನರ ಬಲಿ ಪಡೆದುಕೊಂಡಿತ್ತು. ಈ ವ್ಯಾಧಿ ಹರಡಿದ ಕೆಲವೇ ತಿಂಗಳುಗಳಲ್ಲಿ 50 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಉಳಿದ 50 ಸಾವಿರ ಜನರು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ. ಈ ನಿಘೂಡ ಕಾಯಿಲೆಯ ಮಾಹಿತಿ ಇಲ್ಲದೆ ಕಾರಣ ಈ ಕಾಯಿಲೆ ಹಲವು ಪಟ್ಟಣಗಳು ಹಾಗೂ ಪ್ರಾಂತ್ಯಗಳಿಗೆ ವ್ಯಾಪಿಸಿತ್ತು ಹಾಗೂ ಜನರನ್ನು ತನ್ನ ತೆಕ್ಕೆಗೆ ಬಾಚಿಕೊಳ್ಳಲಾರಂಭಿಸಿತ್ತು. ಬಳಿಕ ಈ ವ್ಯಾಧಿ ನಿಧಾನಕ್ಕೆ ಇತರ ದೇಶಗಳಿಗೂ ಸಹ ಪಸರಿಸಿತ್ತು. ಈ ಮಹಾಮಾರಿಯ ತೀವ್ರತೆ ಎಷ್ಟಿತ್ತೆಂದರೆ ಕವಲ 10000 ಸಂಖ್ಯೆಯುಳ್ಳ ಡ್ರೆಸ್ಟೇಡ್ ಪಟ್ಟಣ ಒಂದರೆಲ್ಲಿಯೇ ಸುಮಾರು 4,397 ಜನರ ಬಲಿ ಪಡೆದುಕೊಂಡಿತ್ತು.

ಪ್ಲೇಗ್ ಭಾರತದ ಮೇಲೆಯೂ ಕೂಡ ದಾಳಿ ನಡೆಸಿತ್ತು. ಈ ರೋಗದಿಂದ ಸಂಪೂರ್ಣ ಭಾರತದಲ್ಲಿ ಭೀತಿಯ ವಾತಾವರಣ ಪಸರಿಸಿತ್ತು. ಮೊದಲು ಪಾಲಿಯಲ್ಲಿ ಕಾಣಿಸಿಕೊಂಡ ಈ ವ್ಯಾಧಿ ಬಳಿಕ ಮೆವಾಡ್ ವರೆಗೆ ಹರಡಿ ಅಲ್ಲಿ ತಾಂಡವವನ್ನೇ ಸೃಷ್ಟಿಸಿತ್ತು. ಇಲಿಗಳಿಂದ ಹರಡುವ ಈ ವ್ಯಾಧಿಯಿಂದ ಬಳಲುತ್ತಿದ್ದ ಜನರು ಆಸ್ಪತ್ರೆ ತಲುಪುವ ಮೊದಲೇ ತಮ್ಮ ಕೊನೆಯುಸಿರೆಳೆಯುತ್ತಿದ್ದರು.

ಕಾಲರಾ
ಪ್ಲೇಗ್ ಮಹಾಮಾರಿಯ ಬರೋಬ್ಬರಿ 100 ವರ್ಷಗಳ ಬಳಿಕ ಅಂದರೆ 1820ರಲ್ಲಿ ಕಾಲರಾ ವ್ಯಾಧಿ ಮಹಾಮಾರಿಯ ರೂಪಪಡೆದುಕೊಂಡಿತ್ತು. ಜಪಾನ್, ಭಾರತ, ಬ್ಯಾಂಕಾಕ್, ಮನೀಲಾ, ಒಮಾನ್, ಚೀನಾ, ಸೀರಿಯಾ ಸೇರಿದಂತೆ ಬಹುತೇಕ ಅಷ್ಯಾ ರಾಷ್ಟ್ರಗಳನ್ನು ಈ ವ್ಯಾಧಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಅದರಲ್ಲೂ ಕೇವಲ ಜಾವಾ ದ್ವೀಪವೊಂದರಲ್ಲಿಯೇ ಈ ಮಹಾಮಾರಿ ಒಂದು ಲಕ್ಷಕ್ಕೂ ಅಧಿಕ ಜನರ ಬಲಿ ಪಡೆದುಕೊಂಡಿತ್ತು. ಥೈಲ್ಯಾಂಡ್, ಇಂಡೊನೆಷ್ಯಾ ಹಾಗೂ ಫಿಲಿಪ್ಪೀನ್ಸ್ ನಲ್ಲಿ ಈ ವ್ಯಾಧಿಗೆ ಅತಿ ಹೆಚ್ಚು ಜನರು ಬಲಿಯಾಗಿದ್ದರು.

ಸ್ಪ್ಯಾನಿಷ ಫ್ಲೂ
ಕಾಲರಾ ಮಹಾಮಾರಿಯ 100 ವರ್ಷಗಳ ಬಳಿಕ ಅಂದರೆ 1920ರಲ್ಲಿ ಸ್ಪ್ಯಾನಿಷ್ ಫ್ಲೂ ವಿಶ್ವಾದ್ಯಂತ ತನ್ನ ಪಾದ ಪಸರಿಸಿತ್ತು. ವಿಶ್ವಾದ್ಯಂತ ಸುಮಾರು 1.70 ರಿಂದ 5 ಕೋಟಿ ಜನರು ಈ ಮಾರಕ ಕಾಯಿಲೆಗೆ ಬಲಿಯಾಗಿದ್ದರು ಎಂದು ಹೇಳಲಾಗುತ್ತದೆ. ಈ ವೈರಸ್ ಅಮೇರಿಕಾದಿಂದ ಹರಡಿತ್ತು ಎನ್ನಲಾಗುತ್ತದೆ. ವಿಶ್ವಯುದ್ಧದ ಅಂದಿನ ಸಂದರ್ಭದಲ್ಲಿ ಈ ವ್ಯಾಧಿ ಅಮೆರಿಕಾದ ಸೈನಿಕರಿಂದ ಯುರೋಪ್ ನಲ್ಲಿ ಪಸರಿಸಿತ್ತು ಎನ್ನಲಾಗುತ್ತದೆ. ಈ ವ್ಯಾಧಿಗೆ ಭಾರತದಲ್ಲಿ ಬಾಂಬೆ ಫೀವರ್ ಎಂದು ಹೆಸರಿಸಲಾಗಿತ್ತು. ಭಾರತದಲ್ಲಿ ಈ ಕಾಯಿಲೆಗೆ ಸುಮಾರು 1-2 ಕೋಟಿ ಜನರು ಬಲಿಯಾಗಿದ್ದರು ಎಂದು ಅಂದಾಜಿಸಲಾಗಿದೆ. ಅಂದಿನ ದಿನಗಳಲ್ಲಿಯೂ ಕೂಡ ಈ ವೈರಸ್ ಗೆ ಲಸಿಕೆ ಇಲ್ಲದ ಕಾರಣ ಲಾಕ್ ಡೌನ್ ಹಾಗೂ ಐಸೋಲೆಶನ್ ನಡೆಸುವ ಮೂಲಕ ಸರ್ಕಾರ ಈ ಕಾಯಿಲೆಯನ್ನು ನಿಯಂತ್ರಿಸಿತ್ತು ಎನ್ನಲಾಗುತ್ತದೆ.

ಕೊರೊನಾ ವೈರಸ್
ಇದೀಗ ಮತ್ತೆ 100 ವರ್ಷಗಳ ಬಳಿಕ ಅಂದರೆ 2020ರಲ್ಲಿ ಇತಿಹಾಸ ಮತ್ತೊಮ್ಮೆ ಮರುಕಳಿಸಿದೆ.,2020 ರಲ್ಲಿ ಕೊರೊನಾ ವೈರಸ್ ಭಾರತ ಹಾಗೂ ವಿಶ್ವದ ಇತರೆ ದೇಶಗಳಲ್ಲಿ ತನ್ನ ಜಾಲ ಪಸರಿಸಿದ್ದು, ಇದುವರೆಗೆ ಸುಮಾರು 51 ಸಾವಿರಕ್ಕೂ ಅಧಿಕ ಜನರನ್ನು ಬಲಿ ಪಡೆದುಕೊಂಡಿದೆ. ವಿಶ್ವದ ಸುಮಾರು 188 ರಾಷ್ಟ್ರಗಳಲ್ಲಿನ ಸುಮಾರು 10,00,036 ಜನರು ಈ ಮಾರಕ ವೈರಸ್ ನ ಸೋಂಕಿಗೆ ಗುರಿಯಾಗಿದ್ದಾರೆ. ಚೀನಾದಿಂದ ಪಸರಿಸಿರುವ ಈ ವೈರಸ್, ಇಟಲಿ ಬಳಿಕ ಅಮೆರಿಕಾವನ್ನು ಹೆಚ್ಚು ಪ್ರಭಾವಿತಗೊಳಿಸಿದ್ದು,  ಇಲ್ಲಿ ಒಂದು ದಿನಕ್ಕೆ ಅತಿ ಹೆಚ್ಚು ಅಂದೆ 1169 ಜನರು ಸಾವನ್ನಪ್ಪುತ್ತಿದ್ದು, ಅಲ್ಲಿ ಈ ಮಾರಕ ಕಾಯಿಲೆಗೆ ಬಲಿಯಾದವರ ಸಂಖ್ಯೆ 6000 ಗಡಿ ದಾಟಿದೆ.

Trending News