ಡಯಾಬಿಟೀಸ್ ರೋಗಿಗಳು ಈ 8 ವಸ್ತುಗಳನ್ನು ತಮ್ಮ ಡಯೆಟ್ ನಲ್ಲಿ ಸೇರಿಸಿಕೊಂಡರೆ ನಿಯಂತ್ರಣದಲ್ಲಿರುತ್ತದೆ ರಕ್ತದಲ್ಲಿನ ಸಕ್ಕರೆ ಮಟ್ಟ

 ಮಧುಮೇಹವು ಇತರ ಅನೇಕ ಕಾಯಿಲೆಗಳ ಮೂಲವಾಗಿದೆ.  ಆದ್ದರಿಂದ ಈ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Written by - Ranjitha R K | Last Updated : Feb 9, 2022, 12:08 PM IST
  • ಮಧುಮೇಹವನ್ನು ನಿಯಂತ್ರಿಸಲು ಸುಲಭ ಉಪಾಯ
  • ಮಧುಮೇಹ ರೋಗಿಗಳು ಅನುಸರಿಸಬೇಕಾದ ಆಹಾರ ಪದ್ದತಿ
  • ನಿತ್ಯ ಈ ಆರೋಗ್ಯಕರ ಆಹಾರವನ್ನು ಸೇವಿಸಿ
 ಡಯಾಬಿಟೀಸ್ ರೋಗಿಗಳು ಈ 8 ವಸ್ತುಗಳನ್ನು ತಮ್ಮ ಡಯೆಟ್ ನಲ್ಲಿ ಸೇರಿಸಿಕೊಂಡರೆ ನಿಯಂತ್ರಣದಲ್ಲಿರುತ್ತದೆ ರಕ್ತದಲ್ಲಿನ ಸಕ್ಕರೆ ಮಟ್ಟ  title=
ಮಧುಮೇಹವನ್ನು ನಿಯಂತ್ರಿಸಲು ಸುಲಭ ಉಪಾಯ (file photo)

ನವದೆಹಲಿ : ಭಾರತದಲ್ಲಿ ಎಲ್ಲಾ ವಯಸ್ಸಿನ ಜನರು ಮಧುಮೇಹದಿಂದ (Diabetes) ಬಳಲುತ್ತಿದ್ದಾರೆ. ಅನಾರೋಗ್ಯಕರ ಆಹಾರ ಮತ್ತು ಬಿಡುವಿಲ್ಲದ ಜೀವನಶೈಲಿಯಿಂದಾಗಿ (Busy lifestyle), ಈ ರೋಗದ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಮಧುಮೇಹವು ಇತರ ಅನೇಕ ಕಾಯಿಲೆಗಳ ಮೂಲವಾಗಿದೆ.  ಆದ್ದರಿಂದ ಈ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಡಯಾಬಿಟೀಸ್ ಇದ್ದರೆ ಸೇವಿಸಿ ಈ 8 ಆಹಾರಗಳನ್ನು :
ಮಧುಮೇಹ ರೋಗಿಗಳು (Diabetes) ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಧುಮೇಹಿಗಳು ತಮ್ಮ ಆಹಾರದಲ್ಲಿ ಆರೋಗ್ಯಕರ ಮತ್ತು ನೈಸರ್ಗಿಕ ಆಹಾರವನ್ನು ಸೇರಿಸಿಕೊಳ್ಳಬೇಕು.  ಹಾಗಿದ್ದರೆ ಮಧುಮೇಹಿಗಳು ಯಾವ ಆಹಾರ ಪದಾರ್ಥಗಳನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ (blood sugar level) ಕಡಿಮೆಯಾಗಲಿದೆ ನೋಡೋಣ. 

ಇದನ್ನೂ ಓದಿ :  ಕೋಪದ ಮೇಲೆ ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ ಈ ಮೂರು ಆಹಾರ

1. ದಾಲ್ಚಿನ್ನಿ
ದಾಲ್ಚಿನ್ನಿ (Cinnamon) ಇನ್ಸುಲಿನ್ ಚಟುವಟಿಕೆಯನ್ನು (Insulin Activity) ಪ್ರಚೋದಿಸುತ್ತದೆ ಮತ್ತು ಅದನ್ನು ಸುಧಾರಿಸಲು ಸಹಾಯ ಮಾಡುತ್ತದೆ.

2. ಬೇವು
ಬೇವಿನಲ್ಲಿ (Neem) ಗ್ಲೈಕೋಸೈಡ್‌ಗಳು (Glycosides) ಮತ್ತು ಟ್ರೈಟರ್‌ಪೆನಾಯ್ಡ್‌ಗಳಿವೆ (Triterpenoids). ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ.

3. ಅರಿಶಿನ
ಅರಿಶಿನವು (Turmeric)  ಕರ್ಕ್ಯುಮಿನ್ ಆಂಟಿಆಕ್ಸಿಡೆಂಟ್ (Curcumin Antioxidant) ಅನ್ನು ಹೊಂದಿರುತ್ತದೆ. ಇದು ಮಧುಮೇಹಕ್ಕೆ (Diabetes) ಪ್ರಯೋಜನಕಾರಿಯಾಗಿದೆ.

4. ಹಾಗಲಕಾಯಿ
ಹಾಗಲಕಾಯಿ (Bitter Gourd) ತಿನ್ನಲು ಬಹಳ ಕಹಿಯಾಗಿರುತ್ತದೆ. ಆದರೆ ಇದರಲ್ಲಿರುವ ಕೆರಾಟಿನ್ ಮತ್ತು ಮೊಮೊರ್ಡಿಸಿನ್ ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದನ್ನು ತಡೆಯುತ್ತದೆ.

ಇದನ್ನೂ ಓದಿ :  Flax Seeds : ಮಹಿಳೆಯರೆ 'ಅಗಸೆ ಬೀಜ' ಸೇವಿಸುವ ಮುನ್ನ ಎಚ್ಚರ : ಹೇಗೆ ಸೇವಿಸಬೇಕು ಇಲ್ಲಿ ತಿಳಿಯಿರಿ

5. ಶುಂಠಿ
 ಇನ್ಸುಲಿನ್ ಸ್ರವಿಸುವಿಕೆಯನ್ನು (Insulin Secretion) ನಿಯಂತ್ರಿಸುವಲ್ಲಿ ಶುಂಠಿಯನ್ನು (Ginger) ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

6. ಟೊಮ್ಯಾಟೊ
ಟೊಮೆಟೊವು (Tomato) ವಿಟಮಿನ್ ಸಿ (Vitamin C) ಯ ಸಮೃದ್ಧ ಮೂಲವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯಕವಾಗಿದೆ.

7. ನೇರಳೆ  ಹಣ್ಣು
 ನೇರಳೆ ಹಣ್ಣಿನ ಬೀಜದಲ್ಲಿ ಜಾಂಬುಲಿನ್ ಅತ್ಯಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

8. ಮೆಂತ್ಯ ಬೀಜಗಳು
ಮೆಂತ್ಯದಲ್ಲಿ (Fenugreek) ಕರಗುವ ಫೈಬರ್  ಕಂಡುಬರುತ್ತದೆ. ಇದು ದೇಹದಲ್ಲಿನ  ಗ್ಲೂಕೋಸ್ ಮಟ್ಟವನ್ನು ಸುಧಾರಿಸುತ್ತದೆ.

ಇದನ್ನೂ ಓದಿ :  Milk-Almonds : ಆರೋಗ್ಯಕ್ಕೆ ಬೇಕು ಬಾದಾಮಿ ಹಾಲು : ಇದರಿಂದ ಎಷ್ಟು ಲಾಭ ಇದೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News