coronavirus alert: ಚೀನಾದಿಂದ ಹೊರಬಂದಿರುವ ಕೊರೊನಾ ವೈರಸ್ ಇದೀಗ ವಿಶ್ವದ ಹಲವಾರು ದೇಶಗಳಲ್ಲಿ ಆತಂಕ ಸೃಷ್ಟಿಸಿದೆ. ಭಾರತದಲ್ಲಿಯೂ ಕೂಡ ಈ ರೋಗದ ಹಲವು ಪ್ರಕರಣಗಳು ಪಾಸಿಟಿವ್ ಆಗಿ ಪತ್ತೆಯಾಗಿವೆ. ಇತಹುದರಲ್ಲಿ ಕೊರೊನಾ ವೈರಸ್ ಕುರಿತು ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ.
ಈ ವೈರಸ್ ನ ಸೋಂಕು ಹೇಗೆ ಪಸರಿರುತ್ತದೆ ಎಂಬುದು ಜನರಿಗೆ ತಿಳಿಯುತ್ತಿಲ್ಲ. ಭೂಮಿಯ ಮೇಲ್ಮೈಯಿಂದ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ, ಸೆಕ್ಸ್ ನಿಂದ ಅಥವಾ ಉಸಿರಾಟದಿಂದ ಯಾವುದರಿಂದ ಈ ಸೋಂಕು ಪಸರಿಸುತ್ತಿದೆ ಎಂಬುದು ಜನರಿಗೆ ತಿಳಿಯುತ್ತಿಲ್ಲ. ಹಾಗಾದರೆ ಬನ್ನಿ ಈ ಕುರಿತು ಹೇಗೆ ಎಚ್ಚರಿಕೆ ವಹಿಸಬೇಕು ಅರಿಯೋಣ.
ಸೋಂಕಿತ ವ್ಯಕ್ತಿಯ ಹತ್ತಿರದಿಂದ ಸುಳಿದರೆ ಈ ರೋಗ ಪಸರಿಸುತ್ತದೆಯೇ?
ಇಲ್ಲಿ ನಾಲ್ಕು ವಿಚಾರಗಳನ್ನು ಗಮನದಲ್ಲಿರಿಸಬೇಕು. ಸೋಂಕಿತ ವ್ಯಕ್ತಿಯ ಎಷ್ಟು ಹತ್ತಿರ ನೀವಿರುವಿರಿ. ಎಷ್ಟು ಹೊತ್ತು ನೀವು ಆತನ ಹತ್ತಿರದಲ್ಲಿದ್ದಿರಿ, ಆತನ ಸೀತ ನಿಮಗೆ ತಗುಲಿದೆಯೇ? ಮತ್ತು ಎಷ್ಟು ಹೊತ್ತು ನೀವು ನಿಮ್ಮ ಮುಖವನ್ನು ಸ್ಪರ್ಶಿಸಿದ್ದಿರಿ ಎಂಬುದು ಅರಿಯಿರಿ.
ನಮ್ಮ ಅಕ್ಕ ಪಕ್ಕ ಯಾರಾದರು ಸೀನಿದರೆ ಏನು ಮಾಡಬೇಕು?
ಮೊದಲನೆಯದಾಗಿ ಮಾಸ್ಕ್ ಧರಿಸಿ ರಕ್ಷಿಸಿಕೊಳ್ಳಿ. ಯಾವುದೇ ರೀತಿಯಲ್ಲಿ ಆ ವ್ಯಕ್ತಿಯ ಉಗುಳು ನಿಮ್ಮ ಶರೀರ ಪ್ರವೇಶಿಸದಂತೆ ಗಮನಹರಿಸಿ. ಸಾಮಾನ್ಯವಾಗಿ ಸೋಂಕಿತ ವ್ಯಕ್ತಿಯ ಸೀನು, ಕಫ ಹಾಗೂ ನಗುವಿನ ವೇಳೆ ಪಸರಿಸುವ ನೆಗಡಿಯಿಂದ ಪಸರಿಸುತ್ತದೆ. ಮುಖ ಹಾಗೂ ಮೂಗಿನ ಮೂಲಕ ಇದು ನಿಮ್ಮ ದೇಹವನ್ನು ಪ್ರವೇಶಿಸುತ್ತದೆ ನೆನಪಿಡಿ.
ಮಾತನಾಡುವಾಗ ಎಷ್ಟು ಅಂತರ ಕಾಯ್ದುಕೊಳ್ಳಬೇಕು?
ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಹೇಳಿಕೆ ಪ್ರಕಾರ, ಯಾವುದೇ ರೋಗಿಯ ಜೊತೆ ಮಾತನಾಡುವಾಗ ಕನಿಷ್ಠ 3 ಅಡಿ ಅಂತರ ಕಾಯ್ದುಕೊಳ್ಳಬೇಕು. 6 ಅಡಿ ಅಂತರ ಕಾಯ್ದುಕೊಳ್ಳುವುದು ಉತ್ತಮ.
ಸೋಂಕಿತ ವ್ಯಕ್ತಿಯನ್ನು ಹೇಗೆ ಪತ್ತೆ ಹಚ್ಚಬೇಕು?
ಈ ವೈರಸ್ ನ ಹೆಚ್ಚಿನ ಲಕ್ಷಣಗಳು ಸೀತ ಹಾಗೂ ನೆಗಡಿಗೆ ಸಂಬಂಧಪಟ್ಟಿವೆ. ಹೀಗಾಗಿ ಯಾರಿಗೆ ಈ ಸೋಂಕು ತಗುಲಿದೆ ಎಂಬುದು ಪತ್ತೆ ಹಚ್ಚುವುದು ಸ್ವಲ್ಪ ಕಷ್ಟ. ಹಲವು ಬಾರಿ ಸೋಂಕಿತ ವ್ಯಕ್ತಿಯಲ್ಲಿ ಈ ಲಕ್ಷಣಗಳು ಕಾಣಿಸಿಯೇ ಇಲ್ಲ. ಹೀಗಾಗಿ ನಿಮ್ಮ ಅಕ್ಕ ಪಕ್ಕ ಯಾರಿಗಾದರು ಸೀತ, ನೆಗಡಿ, ಕೆಮ್ಮು ಅಥವಾ ಉಸಿರಾಟ ತೊಂದರೆಗಳಂತಹ ಲಕ್ಷಣಗಳು ಕಂಡುಬಂದರೆ ಎಚ್ಚೆತ್ತುಕೊಳ್ಳಿ.
ಈ ವೈರಸ್ ಭೂಮಿಯ ಮೇಲ್ಮೈ ಮೇಲೆ ಇರುವ ಯಾವುದೇ ವಸ್ತುವಿನಲ್ಲಿ ವಾಸಿಸುತ್ತದೆಯೇ?
ಹೌದು, ಹೀಗಾಗುವ ಸಾಧ್ಯತೆ ಇದೆ. ಏಕೆಂದರೆ ಈ ಸೋಂಕು ತಗುಲಿದ ವ್ಯಕ್ತಿ ಯಾವುದಾದರೊಂದು ವಸ್ತುವನ್ನು ಸ್ಪರ್ಶಿಸಿದರೆ ಈ ವೈರಸ್ ಅಲ್ಲಿ ಆಶ್ರಯ ಪಡೆಯಲ್ಲೂ ಆರಂಭಿಸುತ್ತದೆ. ಬಳಿಕ ಆ ವಸ್ತುವನ್ನು ಸ್ಪರ್ಶಿಸುವ ಪ್ರತಿಯೊಬ್ಬರಿಗೂ ಈ ಸೋಂಕು ಪಸರಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅಧ್ಯಯನವೊಂದು ನಡೆಸಲಾಗಿದ್ದು, ಈ ವೈರಸ್ ಮೆಟಲ್, ಗಾಜು ಹಾಗೂ ಪ್ಲಾಸ್ಟಿಕ್ ವಸ್ತುಗಳ ಮೇಲೆ 2 ಗಂಟೆಯಿಂದ 9 ದಿನಗಳವರೆಗೆ ಜೀವಿಸಬಹುದು ಎನ್ನಲಾಗಿದೆ.
ಸಾಬೂನು ಬಳಕೆಯಿಂದ ವ್ಯತ್ಯಾಸ ಬೀಳುವ ಸಾಧ್ಯತೆ ಇದೆಯೇ?
ಖಂಡಿತ ಇಲ್ಲ
ಕೈಗಳನ್ನು ಸತತವಾಗಿ ತೊಳೆದುಕೊಳ್ಳುವುದರಿಂದ ಲಾಭವಾಗುವುದೇ?
ನಿಯಮಿತವಾಗಿ ನೀವು ನಿಮ್ಮ ಕೈಗಳನ್ನು ಶುಚಿಗೊಳಿಸಿ ಈ ವೈರಸ್ ನ ಸಂಪರ್ಕದಿಂದ ನೀವು ದೂರವಿರಬಹುದು. ಕನಿಷ್ಠ 20 ಸೆಕೆಂಡ್ ಗಳ ವರೆಗೆ ನೀವು ಕೈಗಳನ್ನು ಶುಚಿಗೊಳಿಸಬೇಕು. ಕೈಗಳನ್ನು ತೊಳೆದುಕೊಳ್ಳುವಾಗ ಉಗುರು, ಕೈಗಳ ಎರಡೂ ಬದಿ ಹಾಗೂ ಬೆರಳುಗಳ ಮಧ್ಯೆಯೂ ಕೂಡ ಶುಚಿಗೊಳಿಸಿ.
ನಮ್ಮ ನೆರೆಹೊರೆಯವರು ಸೀನಿದಾಗ ನಾವು ಹೆದರಬೇಕೇ?
ಈ ವೈರಸ್ ಮನೆಯ ಗೋಡೆಗಳ ಮೂಲಕ ಮನೆಯನ್ನು ಪ್ರವೇಶಿಸುತ್ತದೆ ಎಂಬುದಕ್ಕೆ ಇದುವರೆಗೆ ಯಾವುದೇ ಪುರಾವೆಗಳು ದೊರತಿಲ್ಲ. ಜನಸಂದಣಿಯ ಪ್ರದೇಶಗಳಲ್ಲಿ ಭೀತಿ ಇದೆ.
ಸೆಕ್ಸ್ ನಿಂದ ಇದು ಹರಡುತ್ತದೆಯೇ?
ಮುತ್ತು ನೀಡುವುದರಿಂದ ಈ ವೈರಸ್ ಹರಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಆದರೆ, ಇದು ಸೆಕ್ಸ್ ಮೂಲಕ ಪಸರಿಸುವ ಕಾಯಿಲೆ ಅಲ್ಲ. ಹೀಗಾಗಿ ಸೆಕ್ಸ್ ಮೂಲಕ ಇದು ಶರೀರವನ್ನು ಸೇರುವುದಿಲ್ಲ.
ಸೋಂಕಿತ ವ್ಯಕ್ತಿಯ ಜೊತೆ ಕುಳಿತು ಊಟ ಮಾಡಿದರೆ ಇದು ಪಸರಿಸುತ್ತದೆಯೇ?
ಯಾವುದೇ ಒಂದು ಔತಣಕೂಟದಲ್ಲಿ ನೀವು ಭಾಗವಹಿಸಿದ್ದರೆ ಹಾಗೂ ಸೋಂಕಿತ ವ್ಯಕ್ತಿ ಕೂಡ ಆ ಔತಣಕೂಟದಲ್ಲಿ ಶಾಮೀಲಾಗಿದ್ದರೆ, ನೀವು ಅಪಾಯದ ವಾತಾವರಣದಲ್ಲಿರುವುದು ಖಚಿತ. ಆದ್ರೆ, ಆಹಾರ ಬಿಸಿ ಮಾಡಿದಾಗ ಈ ವೈರಸ್ ಮರಣಹೊಂದುತ್ತದೆ ಎಂಬುದು ಸಿದ್ಧವಾಗಿದೆ.