ಹುರುಳಿ ಹಿಟ್ಟಿನಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

Health Tips : ನಮ್ಮ ಪೂರ್ವಜರ ಆಹಾರ ಪದ್ದತಿ ಎಷ್ಟು ಆರೋಗ್ಯಕರವಾಗಿದೆ ಅಂದರೇ ರೋಗಗಳು ನಮ್ಮ ಹತ್ತಿರ ಸುಳಿಯದಂತೆ ಮಾಡುವ ಎಲ್ಲಾ ಗುಣಗಳು ಅವರ ಆಹಾರ ಪದ್ದತಿಗಿತ್ತು. ನಮ್ಮ ಪೂರ್ವಜರು ನೂರು ವರ್ಷಕ್ಕಿಂತಲೂ ಹೆಚ್ಚು ಬದುಕಿರುವುದನ್ನು ನಾವು ಕೇಳಿರುತ್ತೇವೆ, ನೋಡಿರುತ್ತೇವೆ ಕೂಡ. ಅದಕ್ಕೆಲ್ಲಾ ಕಾರಣ ಅವರು ಸೇವಿಸಿರುವ ಪೌಷ್ಠಿಕ ಆಹಾರ ಎಂದು ಹೇಳಲಾಗುತ್ತದೆ. 

Written by - Zee Kannada News Desk | Last Updated : Mar 6, 2023, 07:24 PM IST
  • ಈಗಿನ ಕಾಲದ ಊಟದಲ್ಲಿ ರುಚಿ ಹೆಚ್ಚಿದ್ದರು ಪೌಷ್ಠಿಕಾಂಶಗಳಿರುವುದು ಕಡಿಮೆಯೇ..
  • ಅದರಲ್ಲಿ ಕೆಲವು ರೋಗಗಳನ್ನು ಕ್ರಮೇಣವಾಗಿ ನಿವಾರಿಸುವ ಗುಣವಿದೆ ಎಂದೂ ಸಹ ಹೇಳಲಾಗುತ್ತದೆ.
  • ಇದು ಮನೆಮದ್ದಾದರು ವೇಗವಾಗಿ ಕೆಲಸಮಾಡುವುದರ ಜೊತೆಗೆ ದೇಹದ ಆರೋಗ್ಯಕ್ಕೆ ಒಳಿತು
ಹುರುಳಿ ಹಿಟ್ಟಿನಿಂದ  ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?  title=

Health Tips : ಈಗಿನ ಕಾಲದ ಊಟದಲ್ಲಿ ರುಚಿ ಹೆಚ್ಚಿದ್ದರು ಪೌಷ್ಠಿಕಾಂಶಗಳಿರುವುದು ಕಡಿಮೆಯೇ.. ಇಂತಹ ಸಂದರ್ಭದಲ್ಲಿ ನಮ್ಮ ಆರೋಗ್ಯವನ್ನು ನಾವು ಕಾಯ್ದುಕೊಳ್ಳುವುದು ಒಳಿತು ಅದು ನಮ್ಮ ಜವಾಬ್ದಾರಿ ಕೂಡ. ನಗಡಿ ಕೆಮ್ಮು ಇವು ಮನುಷ್ಯರಿಗೆ ಸಾಮಾನ್ಯವಾಗಿ ಬರುವ ಕಾಯಿಲೆಗಳು.

ಇವುಗಳಿಗೆ ಕೇವಲ ಆಸ್ಪತ್ರೆಯೇ ಪರಿಹಾರವಲ್ಲ, ಪದೇ ಪದೇ ಮಾತ್ರೆಯನ್ನು ತಿನ್ನುವುದರಿಂದ ಕಿಡ್ನಿ ಸಂಭಂದಿತ ಸಮಸ್ಯೆಗಳು ಉದ್ಭವವಾಗುವ ಸಂಭವನೀಯತೆಗಳಿರುತ್ತವೆ. ನಾವು ಹೆಚ್ಚು ಹೆಚ್ಚು ಫಾರೀನ್‌ ಕಲ್ಚರ್‌ ಫುಡ್‌ ಸೇವನೆಯನ್ನು ಅಳವಡಿಸಿಕೊಂಡಿದ್ದೇವೆ. ಅದರಲ್ಲಿ ರುಚಿಯ ಹೊರತು ಯಾವದೇ ಆರೋಗ್ಯಕರ ಅಂಶಗಳಿರುವುದಿಲ್ಲ ಅವು ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುವ ಸಾಧ್ಯತೆಗಳಿರುತ್ತವೆ. 

ಹುರುಳಿ ರೋಗನಿರೋಧಕ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತೆ. ಅದರಲ್ಲಿ ಕೆಲವು ರೋಗಗಳನ್ನು ಕ್ರಮೇಣವಾಗಿ ನಿವಾರಿಸುವ ಗುಣವಿದೆ ಎಂದೂ ಸಹ ಹೇಳಲಾಗುತ್ತದೆ. ಹುರುಳಿಗಂಜಿಯನ್ನು ಬೆಲ್ಲದಿಂದ ಸಿದ್ದಪಡಿಸಿ ಸೇವಿಸಿದರೇ ನೆಗಡಿ ಕೆಮ್ಮಿನಂತಹ ರೋಗಗಳಿಗೆ ತಾತ್ಕಾಲಿಕವಾಗಿ ಪರಿಹಾರ ಪಡೆಯಬಹುದು. ಹಾಗಾದರೆ ಹುರುಳಿ ಸಂಗಟಿಯನ್ನು ಸಿದ್ದ ಮಾಡುವ ವಿಧಾನವನ್ನು ನೀವೇ ನೋಡಿ... 

ಇದನ್ನೂ ಓದಿ-Yuva : ʼಯುವʼರಾಜ್‌ಕುಮಾರ್‌ ಚೊಚ್ಚಲ ಸಿನಿಮಾದಲ್ಲಿ ಕಾಂತಾರ ಸುಂದರಿ ʼಸಪ್ತಮಿʼ..! 

ಹುರುಳಿ ಹಿಟ್ಟನ್ನು ಕುದಿಯುವ ಬೆಲ್ಲದ ನೀರಿನಲ್ಲಿ ಹಾಕಿ ಗಂಜಿಯನ್ನು ತಿರುಚುವ ರೀತಿಯಲ್ಲಿ ತಿರುಚಿದರೆ ಹುರುಳಿ ಸಂಗಟಿ ಸೇವಿಸಲು ಸಿದ್ದ್ವಾಗುತ್ತದೆ. ಇದು ಮನೆಮದ್ದಾದರು ವೇಗವಾಗಿ ಕೆಲಸಮಾಡುವುದರ ಜೊತೆಗೆ ದೇಹದ ಆರೋಗ್ಯಕ್ಕೆ ಒಳಿತು . ಮತ್ತು ಈ ಹುರುಳಿಯು ಗ್ಯಾಸ್‌ ಅಜೀರ್ಣದಂತಹ ಸಮಸ್ಯೆಗಳನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತದೆ. 

ಇದನ್ನೂ ಓದಿ-Tiger Nageswara Rao : ಅಂತಿಮ ಹಂತ ತಲಪಿದ 'ಟೈಗರ್ ನಾಗೇಶ್ವರ ರಾವ್' ಶೂಟಿಂಗ್‌..! ಕುಖ್ಯಾತ ಕಳ್ಳನ ಕಥೆಯಲ್ಲಿ ʼರವಿತೇಜʼ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News