ನವದೆಹಲಿ: ಕ್ಯಾನ್ಸರ್(Cancer) ವಿರುದ್ಧದ ಹೋರಾಟದಲ್ಲಿ ಒಂದಾಗಲು ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನ(World Cancer Day)ವನ್ನು ಆಚರಿಸಲಾಗುತ್ತದೆ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಇದರ ಮೂಲ ಉದ್ದೇಶ. 1933 ರಲ್ಲಿ, ಅಂತರರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಸಂಘವು ವಿಶ್ವ ಕ್ಯಾನ್ಸರ್ ದಿನವನ್ನು ಮೊದಲ ಬಾರಿಗೆ ಸ್ವಿಟ್ಜರ್ಲೆಂಡ್ನ ಜಿನೀವಾದಲ್ಲಿ ಆಚರಿಸಿತು.
ಜಗತ್ತಿನಾದ್ಯಂತ ಕ್ಯಾನ್ಸರ್ ಕಾಯಿಲೆಯಿಂದಾಗಿ ಅಧಿಕ ಜನರು ಸಾವನ್ನಪ್ಪುತ್ತಿದ್ದಾರೆ. ಇದು ದೇಹದ ಜೀವಕೋಶಗಳಲ್ಲಿ ವೇಗವಾಗಿ ಹರಡುವ ರೋಗ. ಅಂಕಿಅಂಶಗಳ ಪ್ರಕಾರ, ಪ್ರತಿವರ್ಷ ವಿಶ್ವಾದ್ಯಂತ 76 ಲಕ್ಷ ಜನರು ಕ್ಯಾನ್ಸರ್ ನಿಂದ ಸಾಯುತ್ತಾರೆ. 30-69 ವರ್ಷದೊಳಗಿನ 40 ಲಕ್ಷಕ್ಕೂ ಹೆಚ್ಚು ಜನರು ಕ್ಯಾನ್ಸರ್ ನಿಂದ ಸಾವನ್ನಪಿದವರಾಗಿದ್ದಾರೆ. ಒಂದು ಅಂದಾಜಿನ ಪ್ರಕಾರ, 2025 ರ ಹೊತ್ತಿಗೆ, ಕ್ಯಾನ್ಸರ್ ನಿಂದ ಅಕಾಲಿಕ ಮರಣದ ಸಂಖ್ಯೆ ವರ್ಷಕ್ಕೆ 60 ಲಕ್ಷಕ್ಕೆ ಹೆಚ್ಚಾಗುತ್ತದೆ.
ಚಹಾ ಕುಡಿಯುವುದರಿಂದ ಕ್ಯಾನ್ಸರ್ ಅಪಾಯ ಕಡಿಮೆ:
ಯುಎಸ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ಚಹಾ ಕುಡಿಯುವುದು, ವಿಶೇಷವಾಗಿ ಕಪ್ಪು ಮತ್ತು ಹಸಿರು ಚಹಾವು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಅವುಗಳು 'ಆಂಟಿ-ಆಕ್ಸಿಡೆಂಟ್' ಅಂಶಗಳನ್ನು ಒಳಗೊಂಡಿರುತ್ತವೆ. ಚಹಾವು ವಿಶ್ವದಾದ್ಯಂತ ಜನಪ್ರಿಯ ಪಾನೀಯವಾಗಿದೆ ಮತ್ತು ಇದು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಕಂಡುಹಿಡಿಯಲಾಗಿದೆ ಎಂದು ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಸಂಶೋಧಕ ಹಸನ್ ಮುಖ್ತಾರ್ ಹೇಳಿದ್ದಾರೆ.
ಹಸನ್ ಮುಖ್ತಾರ್ ಅವರ ಪ್ರಕಾರ, ಚಹಾ ಕುಡಿಯುವುದು ಕ್ಯಾನ್ಸರ್ ಮಾತ್ರವಲ್ಲದೆ ಮಧುಮೇಹ ಮತ್ತು ಹೃದ್ರೋಗಗಳಿಗೂ ಉಪಯುಕ್ತವಾಗಿದೆ. ನಿಯಮಿತವಾಗಿ ಚಹಾ ಕುಡಿಯುವ ಜನರು ಅನೇಕ ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತಾರೆ ಎಂದು ವಿವಿಧ ಅಧ್ಯಯನಗಳು ಸೂಚಿಸುತ್ತವೆ ಎಂದು ಮುಖ್ತಾರ್ ಹೇಳಿದರು. ಚಹಾದಲ್ಲಿ 'ಆಂಟಿ-ಆಕ್ಸಿಡೆಂಟ್' ಅಂಶ ಇರುವುದು ಮಾನವ ದೇಹದಲ್ಲಿನ ಕ್ಯಾನ್ಸರ್ ಉಂಟುಮಾಡುವ ಕೋಶಗಳನ್ನು ನಿಲ್ಲಿಸುತ್ತದೆ ಎಂದು ಅವರು ಹೇಳಿದರು.
ಕ್ಯಾನ್ಸರ್ಗೆ ಇವು ಮುಖ್ಯ ಕಾರಣ:
- ವ್ಯಾಯಾಮದಿಂದ ಕ್ಯಾನ್ಸರ್ ಅನ್ನು ತಪ್ಪಿಸಬಹುದು ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ, ಇದರಲ್ಲಿ ಸ್ತನ ಕ್ಯಾನ್ಸರ್ ಪ್ರಮುಖವಾಗಿದೆ.
- ಅಧಿಕ ತೂಕವು ಕ್ಯಾನ್ಸರ್ ಅಪಾಯವನ್ನುಂಟುಮಾಡುತ್ತದೆ. ಅಧಿಕ ತೂಕದಿಂದಾಗಿ, ಪ್ರಾಸ್ಟೇಟ್, ಮೇದೋಜ್ಜೀರಕ ಗ್ರಂಥಿ, ಗರ್ಭಾಶಯ, ಅಂಡಾಶಯದ ಕ್ಯಾನ್ಸರ್ ಬರುವ ಅಪಾಯವಿದೆ. ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿದೆ.
- ಧೂಮಪಾನವು ಬಾಯಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
- ಸೂರ್ಯನ ಅಲ್ಟ್ರಾ ವೈಲೆಟ್ (ಯುವಿ) ಕಿರಣಗಳು ಚರ್ಮದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವುದರಿಂದ ಬಿಸಿ ಸೂರ್ಯನ ಕಿರಣಗಳನ್ನು ತಪ್ಪಿಸಿ.
- ಚರ್ಮದಲ್ಲಿ ಏನಾದರೂ ಬದಲಾವಣೆಗಳಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಇದು ಕ್ಯಾನ್ಸರ್ ರೋಗಲಕ್ಷಣವೂ ಆಗಿರಬಹುದು.