ನವದೆಹಲಿ: ಕೊರೊನಾ ವ್ಯಾಕ್ಸಿನ ವಿಷಯದಲ್ಲಿ ಭಾರತ ವೇಗವಾಗಿ ಮುಂದಕ್ಕೆ ಸಾಗುತ್ತಿದೆ. ಆದರೆ ಇದುವರೆಗೆ ಯಾವುದೇ ವ್ಯಾಕಿನ್ಸ್ ನ ತುರ್ತು ಬಳಕೆಗೆ ಭಾರತದಲ್ಲಿ ಅನುಮತಿ ದೊರೆತಿಲ್ಲ. ಆದರೆ ಈ ವಿಷಯದಲ್ಲಿ ಒಳ್ಳೆ ಸುದ್ದಿಯೊಂದು ಪ್ರಕಟಗೊಂಡಿದೆ. ವರದಿಗಳ ಪ್ರಕಾರ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಝೇಶನ್ (CDSCO)ನ ತಜ್ಞರ ಸಮೀತಿ ಈ ವಾರ ಆಕ್ಸ್ಫರ್ಡ್ ವ್ಯಾಕ್ಸಿನ್ ನ ತುರ್ತು ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸರ್ಕಾರದ ಮೂಲಗಳು ಈ ಮಾಹಿತಿ ನೀಡಿವೆ.
ಪುಣೆ ಮೂಲದ ಸಿರಮ್ ಇನ್ಸ್ಟಿಟ್ಯೂಟ್ ಆಕ್ಸ್ಫರ್ಡ್ ನ ಅಸ್ಟ್ರಾಜೆನಿಕಾ ವ್ಯಾಕ್ಸಿನ್ ನ ಉತ್ಪಾದನೆ ಹಾಗೂ ಪರೀಕ್ಷೆ ನಡೆಸುತ್ತಿದೆ. ಕಳೆದ ವಾರವಷ್ಟೇ ರಾಷ್ಟ್ರೀಯ ಔಷಧಿ ಪ್ರಾಧಿಕಾರಕ್ಕೆ ಸಿರಮ್ ಇನ್ಸ್ಟಿಟ್ಯೂಟ್ (SII) ಹೆಚ್ಚುವರಿ ಮಾಹಿತಿಯನ್ನು ಒದಗಿಸಿದೆ ಎನ್ನಲಾಗಿದೆ.
ಇದನ್ನು ಓದಿ- Serum Institute Corona ಲಸಿಕೆಗೆ ಸರಕಾರ ಅನುಮತಿ ನೀಡಿಲ್ಲವೆ? ಇಲ್ಲಿದೆ ವಾಸ್ತವಿಕತೆ
ಹೆಸರನ್ನು ಉಲ್ಲೇಖಿಸದಿರಲು ಸೂಚನೆ ನೀಡಿ ಈ ಕುರಿತು ಮಾಹಿತಿ ನೀಡಿರುವ ಸರ್ಕಾರಿ ಅಧಿಕಾರಿಯೊಬ್ಬರು, "ಈ ವಾರ ವಿಷಯ ತಜ್ಞರ ಸಮಿತಿ ಸಭೆ ಕರೆಯುವ ಸಾಧ್ಯತೆ ಇದೆ. ಏಕೆಂದರೆ ಫೈಜರ್ ತನ್ನ ಕೊವಿಡ್-19 ವಿರೋಧಿ ಲಸಿಕೆಗಾಗಿ ಯುರೋಪಿಯನ್ ಒಕ್ಕೂಟಕ್ಕೆ ಅರ್ಜಿ ಸಲ್ಲಿಸಿ ಹೊಸ ದಿನಾಂಕ ಕೋರಿದೆ. ಸಮೀತಿ ಅದೇ ದಿನಾಂಕದಂದು ಅವರಿಗೆ ಗಡುವು ನೀಡುವ ಸಾಧ್ಯತೆ ಇದೆ" ಎಂದಿದ್ದಾರೆ.
ಇದನ್ನು ಓದಿ-Corona Vaccine ತುರ್ತು ಬಳಕೆಗಾಗಿ ಅನುಮತಿ ಕೋರಿದ ಮೊದಲ ಭಾರತೀಯ ಕಂಪನಿ
ಯುಕೆ ಮೆಡಿಸಿನ್ ಮತ್ತು ಹೆಲ್ತ್ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ (MHRA) ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಗಾಗಿ ಇಯುಎ ದತ್ತಾಂಶಗಳನ್ನು ಸಹ ಪರಿಗಣಿಸುತ್ತಿದೆ. ಭಾರತದಲ್ಲಿ ಅನುಮೋದನೆ ಪಡೆದು ಅಭ್ಯರ್ಥಿಗಳಿಗೆ ನೀಡಲು ಇದು ಹೆಚ್ಚುವರಿ ಲಾಭ ನೀಡಲಿದೆ.
ಹೀಗಾಗಿ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಪಡೆಯುವ ಮೊದಲ ವ್ಯಾಕ್ಸಿನ್ ಆಕ್ಸ್ಫರ್ಡ್ ನ ಅಸ್ಟ್ರಾಜೆನಿಕಾ ಆಗುವ ಸಾಧ್ಯತೆ ಇದೆ.
ಇದನ್ನು ಓದಿ-Side Effect ಆರೋಪ, Serum Instituteನಿಂದ 100 ಕೋಟಿ ರೂ.ಮಾನಹಾನಿ ಬೆದರಿಕೆ
"ಭಾರತೀಯ ಜನರ ಮೇಲೆ ವ್ಯಾಕ್ಸಿನ್ ನ ಪ್ರಭಾವದ ಅಧ್ಯಯನ ನಡೆಸಲು ಸಮಿತಿ Pfizerಗೆ ಸೂಚಿಸುವ ಸಾಧ್ಯತೆ ಇದೆ. ಏಕೆಂದರೆ ಭಾರತದಲ್ಲಿ ಫೈಜರ್ ತನ್ನ ಲಸಿಕೆಯ ಪರೀಕ್ಷೆಯನ್ನು ನಡೆಸಿಲ್ಲ. ಹೀಗಾಗಿ ಈ ಕಾರ್ಯ ಮೊದಲು ಮಾಡಲು ಹೇಳಿ, ಪರೀಕ್ಷೆಗೆ ಅನುಮತಿ ಸಿಗುವ ಸಾಧ್ಯತೆ ಇದೆ" ಎಂದು ಅವರು ಹೇಳಿದ್ದಾರೆ.