Ginger Benefits: ಶುಂಠಿಯು ಅನೇಕ ಔಷಧಿಯ ಗುಣಗಳನ್ನು ಹೊಂದಿದ್ದು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯನ್ನು ನಿವಾರುಸಲು ಬಹಳ ಹಿಂದಿನಿಂದಲೂ ಬಳಸಲಾಗುತ್ತದೆ. ಶುಂಠಿಯನ್ನು ಅನಾದಿಕಾಲದಿಂದಲೂ ಆಯುರ್ವೇದದ ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ.
ಇಮ್ಯೂನ್ ಸಿಸ್ಟಮ್ ಗೆ ಬೆಂಬಲ ನೀಡುವ ಗುಣಲಕ್ಷಣ ಹೊಂದಿರುವ ಶುಂಠಿಯಲ್ಲಿ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳು ಹೇರಳವಾಗಿವೆ. ಎಲ್ಲಾ ಋತುಮಾನಗಳಲ್ಲೂ ಶುಂಠಿ ಬಳಕೆ ಆರೋಗ್ಯಕ್ಕೆ ಲಾಭದಾಯಕವೇ ಆಗಿದೆ. ಅದರಲ್ಲೂ ಚಳಿಗಾಲದಲ್ಲಿ ನಿತ್ಯ ಶುಂಠಿ ಬಳಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು.
ಚಳಿಗಾಲದಲ್ಲಿ ಶುಂಠಿ ಬಳಕೆಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂದು ನೋಡುವುದಾದರೆ...
ಹೃದಯ ರಕ್ತನಾಳದ ಸಮಸ್ಯೆಗೆ ಪರಿಹಾರ:
ಹೃದಯ ರಕ್ತನಾಳದ ಆರೋಗ್ಯಕ್ಕೆ ಶುಂಠಿ ಗಮನಾರ್ಹ ಪ್ರಯೋಜನಗಳನ್ನು ನೀಡುತ್ತದೆ.ಇದು ರಕ್ತಪರಿಚಲನೆಯನ್ನು ಉತ್ತೇಜಿಸುವ ಮತ್ತು ರಕ್ತನಾಳಗಳಿಗೆ ವಿಶ್ರಾಂತಿ ಕೊಡುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಆಗಿದೆ.
ಇದನ್ನೂ ಓದಿ- ಬಾರೆ ಹಣ್ಣಿನಲ್ಲಿ ಅಡಗಿದೆ ಅಪಾರ ಆರೋಗ್ಯದ ಗುಟ್ಟು
ಉಸಿರಾಟದ ಸೋಂಕಿಗೆ ಉತ್ತಮ ಮನೆಮದ್ದು:
ಉಸಿರಾಟದ ಸೋಂಕಿನ ಸಮಸ್ಯೆ ಇರುವವರು ನಿತ್ಯ ಒಂದು ಕಪ್ ಶುಂಠಿ ಚಹಾ ಕುಡಿಯುವುದರಿಂದ ಪರಿಹಾರ ಪಡೆಯಬಹುದು. ಶುಂಠಿ ಪ್ರತಿ ರಕ್ಷಣಾ ಕಾರ್ಯವನ್ನು ಹೆಚ್ಚಿಸುವ ಮೂಲಕ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮುಖಾಂತರ ಒಟ್ಟಾರೆ ಉಸಿರಾಟದ ಯೋಗಕ್ಷೇಮವನ್ನು ಬೆಂಬಲಿಸುತ್ತದೆ, ಶ್ವಾಸಕೋಶದ ಆರೋಗ್ಯಕ್ಕೆ ಶುಂಠಿ ನೈಸರ್ಗಿಕ ಪರಿಹಾರವಾಗಿದೆ.
ಕೆಮ್ಮು ನಿವಾರಣೆಗೆ ಶುಂಠಿ ರಾಮಬಾಣ:
ಶುಂಠಿಯ ಬಹುಮುಖ್ಯ ಪ್ರಯೋಜನವೆಂದರೆ ಕಡಿಮೆ ಸಮಯದಲ್ಲಿ ಕೆಮ್ಮನ್ನು ನಿವಾರಿಸುತ್ತದೆ. ಶುಂಠಿಯು ಜಿಂಜರೋಲ್ ಮತ್ತು ಶೋಗೋಲ್ ಎಂಬ ಸಂಯುಕ್ತಗಳನ್ನು ಹೊಂದಿದೆ. ಇದು ಉರಿಯೂತ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿರುವ ಕಾರಣ ಕೆಮ್ಮು ಮತ್ತು ಶೀತ ಇರುವವರು ಶುಂಠಿ ಸೇವಿಸುವುದರಿಂದ ಶೀಘ್ರದಲ್ಲೇ ಕೆಮ್ಮು ನಿವಾರಣೆಯಾಗುತ್ತದೆ.
ತೂಕ ಇಳಿಕೆಗೆ:
ಖಾಲಿ ಹೊಟ್ಟೆಯಲ್ಲಿ ಶುಂಠಿಯನ್ನು ಸೇವಿಸಿದಾಗ ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದರಿಂದ ನಮ್ಮ ದೇಹದಲ್ಲಿನ ಹೆಚ್ಚುವರಿ ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಶುಂಠಿ ಟೀ ಕುಡಿಯುವುದರಿಂದ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು.
ಇದನ್ನೂ ಓದಿ- ಹೇರ್ ಫಾಲ್'ಗೆ ಬ್ರೇಕ್ ಹಾಕಿ ದಷ್ಟಪುಷ್ಟವಾದ ಕೂದಲನ್ನು ಹೊಂದಲು ಈ ಆಹಾರಗಳನ್ನು ತಿಂದರಷ್ಟೇ ಸಾಕು!
ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ:
ಶುಂಠಿ ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ಆಹಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ಒಡೆಯಲು ಸಹಾಯ ಮಾಡುತ್ತದೆ. ಇದರಿಂದಾಗಿ ಅಜೀರ್ಣ, ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯವಾಗಿದೆ.
ಶುಂಠಿ ನೀರು ಕುಡಿಯುವುದರಿಂದ ಅಗುವ ಪ್ರಯೋಜನ!
ವಿಟಮಿನ್ ಸಿ, ವಿಟಮಿನ್ ಬಿ6, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ಸೇರಿದಂತೆ ಅಗತ್ಯ ಪೋಷಕಾಂಶಗಳು ಮತ್ತು ಜೈವಿಕ ಸಕ್ರಿಯ ಅಂಶಗಳು ಹೆಚ್ಚಾಗಿರುವ ಕಾರಣ ಶುಂಠಿ ನೀರನ್ನು ಸೇವಿಸುವುದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.