Health Tips: ಬೇವು ಮತ್ತು ತುಳಸಿ ಎಲೆಗಳನ್ನು ತಿನ್ನುವುದರ ಪ್ರಯೋಜನಗಳು

Neem and basil leaves: ದೇಹದ ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುವಲ್ಲಿ ಬೇವು ಹಾಗೂ ತುಳಸಿ ಎಲೆಗಳು ಪ್ರಯೋಜನಕಾರಿ. ಇದರ ಉರಿಯೂತದ ಗುಣಲಕ್ಷಣಗಳು ದೇಹದ ನೋವು ಮತ್ತು ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.

Written by - Puttaraj K Alur | Last Updated : Aug 25, 2024, 04:10 PM IST
  • ಬೇವು ಮತ್ತು ತುಳಸಿ ಎಲೆಗಳು ರಕ್ತ ಶುದ್ಧೀಕರಿಸುವುದರ ಜೊತೆಗೆ ಕೊಬ್ಬನ್ನು ಕಡಿಮೆ ಮಾಡುತ್ತದೆ
  • ಬೇವು ಮತ್ತು ತುಳಸಿ ಎಲೆಗಳನ್ನು ತಿನ್ನುವುದರಿಂದ ರಕ್ತಹೀನತೆಯ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ
  • ಈ ಎಲೆಗಳ ಸೇವನೆಯಿಂದ ಅಜೀರ್ಣ & ಗ್ಯಾಸ್ ಸಮಸ್ಯೆಯಿಂದ ನಮ್ಮ ದೇಹವನ್ನು ರಕ್ಷಿಸುತ್ತವೆ
Health Tips: ಬೇವು ಮತ್ತು ತುಳಸಿ ಎಲೆಗಳನ್ನು ತಿನ್ನುವುದರ ಪ್ರಯೋಜನಗಳು title=
ಬೇವು & ತುಳಸಿ ಎಲೆಗಳ ಪ್ರಯೋಜನ

Benefits of eating neem and basil leaves: ಬೇವು ಮತ್ತು ತುಳಸಿ ಎಲೆಗಳನ್ನು ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಬೇವು ಮತ್ತು ತುಳಸಿ ಎಲೆಗಳು ಹಲವಾರು ಆಯುರ್ವೇದಿಕ್‌ ಗುಣಗಳನ್ನು ಹೊಂದಿದ್ದು, ಅನೇಕ ಆರೋಗ್ಯಕರ ಲಾಭಗಳನ್ನು ಹೊಂದಿದೆ. ಬೇವು ಮತ್ತು ತುಳಸಿ ಸೇವನೆಯಿಂದ ದೊರೆಯುವ ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿದೆ ನೋಡಿ...

  • ಬೇವು ಮತ್ತು ತುಳಸಿ ಎಲೆಗಳನ್ನು ಸೇವಿಸುವುದರಿಂದ ನಿಮ್ಮ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ರಕ್ತವನ್ನು ಶುದ್ಧೀಕರಿಸುವುದರ ಜೊತೆಗೆ ಕೊಬ್ಬನ್ನು ಕಡಿಮೆ ಮಾಡುತ್ತದೆ.
  • ಬೇವು ಮತ್ತು ತುಳಸಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಇವುಗಳ ಎಲೆಗಳಲ್ಲಿ ಕಂಡುಬರುವ ಪೋಷಕಾಂಶಗಳು, ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಯಿಂದ ನಮ್ಮ ದೇಹವನ್ನು ರಕ್ಷಿಸುತ್ತವೆ.

ಇದನ್ನೂ ಓದಿ: ಮಧುಮೇಹಿಗಳು ಬೆಳಗೆದ್ದು ಈ ನೀರು ಕುಡಿದರೆ.. ಬ್ಲಡ್‌ ಶುಗರ್‌ ದಿನವಿಡಿ ಕಂಟ್ರೋಲ್‌ʼನಲ್ಲಿರುತ್ತೆ!

  • ಬೇವು ಮತ್ತು ತುಳಸಿ ಎಲೆಗಳನ್ನು ಒಟ್ಟಿಗೆ ತಿನ್ನುವುದರಿಂದ ರಕ್ತಹೀನತೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಕಬ್ಬಿಣವು ಬೇವು ಮತ್ತು ತುಳಸಿ ಎಲೆಗಳಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದರಿಂದ ದೇಹದಲ್ಲಿ ರಕ್ತದ ಕೊರತೆ ಕಾಡುವುದಿಲ್ಲ.
  • ತುಳಸಿ ಮತ್ತು ಬೇವಿನ ಎಲೆಯನ್ನು ಸೇವಿಸುವುದರಿಂದ ಚರ್ಮವು ಹೊಳೆಯುತ್ತದೆ ಮತ್ತು ಸೋಂಕು ಮುಕ್ತ ಚರ್ಮವನ್ನು ನಾವು ಪಡೆಯಬಹುದು. ಮುಖದ ಕಲೆಗಳು ಮತ್ತು ಮೊಡವೆಗಳನ್ನು ತೆಗೆಯಲು ಇದು ಸಹಕಾರಿ.
  • ದೇಹದ ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುವಲ್ಲಿ ಬೇವು ಹಾಗೂ ತುಳಸಿ ಎಲೆಗಳು ಪ್ರಯೋಜನಕಾರಿ. ಇದರ ಉರಿಯೂತದ ಗುಣಲಕ್ಷಣಗಳು ದೇಹದ ನೋವು ಮತ್ತು ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.

ಇದನ್ನೂ ಓದಿ: ಹಲವು ರೋಗಗಳಿಗೆ ರಾಮಬಾಣ ಈ ಮರದ ತೊಗಟೆ..! ಬಳಸುವ ವಿಧಾನ ಗೊತ್ತೇ?

  • ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವು ಮತ್ತು ತುಳಸಿ ಎಲೆಗಳನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು. ಇದರ ಜೊತೆ ವೈರಲ್ ರೋಗಗಳ ಅಪಾಯವನ್ನು ಸಹ ತಪ್ಪಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News