Health Tips: ಪುರುಷರ ಹಲವು ಸಮಸ್ಯೆಗಳಿಗೆ ರಾಮಬಾಣ ಅಮೃತ ಬಳ್ಳಿ, ಹೇಗೆ ಸೇವಿಸಬೇಕು?

Giloy Benefits: ಪುರುಷರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಆರೋಗ್ಯವನ್ನು ಸುಧಾರಿಸಲು ಬಯಸಿದರೆ, ನೀವು ಖಂಡಿತವಾಗಿಯೂ ನಿಮ್ಮ ದಿನಚರಿಯಲ್ಲಿ ಅಮೃತ ಬಳ್ಳಿಯನ್ನು ಸೇರಿಸಬಹುದು.

Written by - Nitin Tabib | Last Updated : Jul 25, 2022, 08:31 PM IST

    ಕೇವಲ ಮಹಿಳೆಯರಷ್ಟೇ ಅಲ್ಲ ಪುರುಷರೂ ಕೂಡ ತಮ್ಮ ಕೆಲ ಆರೋಗ್ಯ ಸಮಸ್ಯೆಗಳನ್ನು ವೈದ್ಯರ ಬಳಿ ಹೇಳಿಕೊಳ್ಳಲು ಹಿಂಜರಿಯುತ್ತಾರೆ.

    ಅವುಗಳಲ್ಲಿ ಬಂಜೆತನ ಸಮಸ್ಯೆ ಕೂಡ ಒಂದು.

    ಅವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಕಾಯಿಲೆಗಳಾಗಿ ಪರಿಣಮಿಸುತ್ತಿವೆ.

Health Tips: ಪುರುಷರ ಹಲವು ಸಮಸ್ಯೆಗಳಿಗೆ ರಾಮಬಾಣ ಅಮೃತ ಬಳ್ಳಿ, ಹೇಗೆ ಸೇವಿಸಬೇಕು? title=
Giloy Benefits For Male

Giloy Benefits For Male: ಕೇವಲ ಮಹಿಳೆಯರಷ್ಟೇ ಅಲ್ಲ ಪುರುಷರೂ ಕೂಡ ತಮ್ಮ ಕೆಲ ಆರೋಗ್ಯ ಸಮಸ್ಯೆಗಳನ್ನು ವೈದ್ಯರ ಬಳಿ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಇವುಗಳಲ್ಲಿ ಕಡಿಮೆ ವೀರ್ಯಾಣು ಸಂಖ್ಯೆ ಮತ್ತು ಬಂಜೆತನ ಸಮಸ್ಯೆಗಳು ಶಾಮೀಲಾಗಿದ್ದು, ಅವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಕಾಯಿಲೆಗಳಾಗಿ ಪರಿಣಮಿಸುತ್ತಿವೆ. ಇದೇ ವೇಳೆ, ಹೆಚ್ಚಿನ ಪುರುಷರು ತಮ್ಮ ಸಮಸ್ಯೆಯನ್ನು ವೈದ್ಯರ ಬಳಿ ಹೇಳಿಕೊಳ್ಳಲು ನಾಚಿಕೆಪಡುತ್ತಾರೆ. ಇನ್ನೊಂದೆಡೆ ಕೆಲವರು ವೈದ್ಯರನ್ನು ಸಂಪರ್ಕಿಸದೆ ಪೂರಕಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಪುರುಷರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಅಮೃತ ಬಳ್ಳಿ ಸಹಾಯ ಮಾಡುತ್ತದೆ. ಪುರುಷರಿಗೆ ಗಿಲೋಯ್ ಹೇಗೆ ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಪುರುಷರಿಗೆ ಗಿಲೋಯ್‌ನಿಂದಾಗುವ ಪ್ರಯೋಜನಗಳು
ಉತ್ತೇಜಿಸುವ ಹಾರ್ಮೋನುಗಳು

ಅಮೃತ ಬಳ್ಳಿ ಒಂದು ನೈಸರ್ಗಿಕ ಕಾಮೋತ್ತೇಜಕ ಮೂಲಿಕೆ. ಇದು ಪುರುಷರ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕಾಮಾಸಕ್ತಿಯನ್ನು ಹೆಚ್ಚಿಸಲು ಹಾರ್ಮೋನುಗಳನ್ನು ಉತ್ತೇಜಿಸುತ್ತದೆ.

ಶಕ್ತಿಯಲ್ಲಿ ಸುಧಾರಣೆ
ಪುರುಷರ ಬಲ, ಶಕ್ತಿ ಮತ್ತು ತ್ರಾಣವನ್ನು ಸುಧಾರಿಸಲು ಗಿಲೋಯ್ ಸಹಾಯ ಮಾಡುತ್ತದೆ. ಅಮೃತ ಬಳ್ಳಿ ಶಕ್ತಿಯುತ ಖಿನ್ನತೆ-ಶಮನಕಾರಿ ಗುಣಗಳನ್ನು ಹೊಂದಿದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ, ಇದರ ಜೊತೆಗೆ ಒತ್ತಡ, ಕೋಪ ಅಥವಾ ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವಿರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಿ
ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಬಂಜೆತನಕ್ಕೆ ಪ್ರಮುಖ ಕಾರಣ. ವೀರ್ಯ ಸಂಖ್ಯೆಯನ್ನು ಹೆಚ್ಚಿಸಲು ನೀವು ಅಮೃತ ಬಳ್ಳಿಯನ್ನು ಸೇವಿಸಬಹುದು. ಅಮೃತ ಬಳ್ಳಿ ವೀರ್ಯದ ಗುಣಮಟ್ಟವನ್ನು ಸುಧಾರಿಸುವುದರ ಜೊತೆಗೆ ಅವುಗಳ ಚಲನಶೀಲತೆಯನ್ನು ಹೆಚ್ಚಿಸುತ್ತದೆ.

 ಫಲವತ್ತತೆಯನ್ನು ಹೆಚ್ಚಿಸಿ
ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿಯೂ ಕೂಡ  ಬಂಜೆತನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ನೀವು ಸಹ ಈ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ನೀವು ಗಿಲೋಯ್ ಸೇವನೆಯನ್ನು ಪ್ರಾರಂಭಿಸಬಹುದು. ಇದು ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ನಿಮ್ಮ ಫಲವತ್ತತೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ-ಹಲ್ಲಿನ ಸಮಸ್ಯೆಗಳಿಗೆ ಸರಳ ಪರಿಹಾರ ನೀಡುತ್ತೆ ಈ ವಸ್ತುಗಳು

ಗಿಲೋಯ್ ಅನ್ನು ಈ ರೀತಿಯಲ್ಲಿ ಸೇವಿಸಿ
1- ಪುರುಷರು ಮಲಗುವ ಮುನ್ನ ಒಂದು ಚಮಚ ಅಮೃತ ಬಳ್ಳಿ ಪುಡಿಯನ್ನು ಸೇವಿಸಬಹುದು.
2- ಪುರುಷರು ಅಮೃತ ಬಳ್ಳಿಯನ್ನು ನೀವು ಕಷಾಯದ ರೂಪದಲ್ಲಿ ಕೂಡ ಸೇವಿಸಬಹುದು.

ಇದನ್ನೂ ಓದಿ-ಬೆಳ್ಳಗಾದ ಕೂದಲನ್ನು ಕಪ್ಪಾಗಿಸುತ್ತದೆ ಈ ಹಣ್ಣಿನ ಎಲೆಗಳು ..!

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News