ನವದೆಹಲಿ: Mucormycosis Symptoms And Treatment - ದೇಶದ ಹಲವು ಭಾಗಗಳಲ್ಲಿ ಕರೋನಾ(Coronavirus) ಸೋಂಕಿನಿಂದ ಚೇತರಿಸಿಕೊಂಡ ನಂತರ ಜನರು ಮ್ಯೂಕೋಮೈಕೋಸಿಸ್ (Mucormycosis) ಅಥವಾ ಕಪ್ಪು ಶಿಲೀಂಧ್ರ (Black Fungus) ರೋಗಕ್ಕೆ ತುತ್ತಾಗುತ್ತಿದ್ದಾರೆ. ಮಹಾರಾಷ್ಟ್ರ, ದೆಹಲಿ, ಗುಜರಾತ್, ರಾಜಸ್ಥಾನದಂತಹ ರಾಜ್ಯಗಳಲ್ಲಿ ಈ ಅಪಾಯಕಾರಿ ಸೋಂಕಿನಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಜನರು ಕುರುಡುತನಕ್ಕೆ ಬಲಿಯಾಗಿದ್ದಾರೆ. ಏತನ್ಮಧ್ಯೆ, ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ (Dr. Harsh Vardhan) ಅವರು ಶುಕ್ರವಾರ ಕಪ್ಪು ಶಿಲೀಂಧ್ರದ ಬಗ್ಗೆ ಅನೇಕ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರು ಈ ಕಾಯಿಲೆಯ ಲಕ್ಷಣಗಳ ಜೊತೆಗೆ ಮ್ಯೂಕರ್ಮೈಕೊಸಿಸ್ ನಿಂದ ಪಾರಾಗಲು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಸಲಹೆಗಳನ್ನು ನೀಡಿದ್ದಾರೆ.
#Mucormycosis, commonly known as '#BlackFungus' has been observed in a number of #COVID19 patients recently.
Awareness & early diagnosis can help curb the spread of the fungal infection. Here's how to detect & manage it #IndiaFightsCorona @MoHFW_INDIA pic.twitter.com/lC6iSNOxGF
— Dr Harsh Vardhan (@drharshvardhan) May 14, 2021
"ಎಚ್ಚರಿಕೆ ಹಾಗೂ ಆರಂಭಿಕ ಪತ್ತೆಹಚ್ಚುವಿಕೆಯು ಶಿಲೀಂಧ್ರಗಳ ಸೋಂಕು ಹರಡುವುದನ್ನು ತಡೆಯುತ್ತದೆ" ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ. ಈ ಕುರಿತು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಾಲ್ಕು ಸ್ಲೈಡ್‌ಗಳನ್ನು ಹಂಚಿಕೊಂಡಿದ್ದಾರೆ, ಈ ಸ್ಲೈಡ್ ಗಳು ಕಪ್ಪು ಸಿಲಿಂಧ್ರಿ ರೋಗದ ಕುರಿತು ಬಹಳ ಮುಖ್ಯವಾದ ಮಾಹಿತಿಯನ್ನು ಒದಗಿಸುತ್ತಿವೆ. ಮ್ಯೂಕೋರಮೈಕೋಸಿಸ್ ಅನ್ನು ನಿಯಂತ್ರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ಅದರ ಚಿಕಿತ್ಸೆಗಾಗಿ ಆಂಫೊಟೆರಿಸಿನ್ ಬಿ (Amphotericin B) ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. ಮ್ಯೂಕೋರಮೈಕೋಸಿಸ್ ನಿಂದ ಬಳಲುತ್ತಿರುವ ಜನರಿಗೆ ಚಿಕಿತ್ಸೆ ನೀಡಲು ವೈದ್ಯರು ಈ ಔಷಧಿಯ ಶಿಫಾರಸು ಮಾಡುತ್ತಿದ್ದಾರೆ.
ಏನಿದು ಮ್ಯೂಕರ್ ಮೈಕೊಸಿಸ್ ಅಥವಾ ಕಪ್ಪು ಸಿಲಿಂಧ್ರಿ ರೋಗ
ಇದೊಂದು ಫಂಗಲ್ ಇನ್ಫೆಕ್ಷನ್ ಕಾಯಿಲೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ. ಇದು ಸಾಮಾನ್ಯವಾಗಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪೀಡಿತ ರೋಗಿಗಳ ನೈಸರ್ಗಿಕ ರೋಗಾಣುಗಳ ವಿರುದ್ಧ ಹೋರಾಡುವ ಕ್ಷಮತೆಯನ್ನು ಕಡಿಮೆ ಮಾಡುತ್ತದೆ.
ಯಾವ ರೋಗಿಗಳಿಗೆ ಬ್ಲಾಕ್ ಫಂಗಸ್ ಅಂಟಿಕೊಳ್ಳುವ ಸಾಧ್ಯತೆ ಇದೆ
ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಅಥವಾ ವೆರಿಕೋಜೋನಲ್ ಥೆರಿಪಿಗೆ ಒಳಗಾಗಿರುವ, ಅನಿಯತ್ರಿತ ಮಧುಮೇಹ, ಸ್ಟೆರಾಯಿಡ್ ಗಳ ಅತಿಯಾದ ಬಳಕೆಯಿಂದ ರೋಗನಿರೋಧಕ ಶಕ್ತಿ ಕಳೆದುಕೊಂಡವರು ಅಥವಾ ಅಧಿಕ ಕಾಲ ICUನಲ್ಲಿ ಚಿಕಿತ್ಸೆ ಪಡೆದವರು ಈ ಫಂಗಲ್ ಇನ್ಫೆಕ್ಷನ್ ಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ಮ್ಯೂಕರ್ಮೈಕೊಸಿಸ್ ಲಕ್ಷಣಗಳೇನು?
ಬ್ಲಾಕ್ ಫಂಗಸ್ ಗೆ ಗುರಿಯಾದ ವ್ಯಕ್ತಿಗಳ ಕಣ್ಣು ಅಥವಾ ಮೂಗಿನ ಬಳಿ ಕೆಂಪು ಗುರುತು ಕಾಣಿಸುವ ಸಾಧ್ಯತೆ ಇದೆ ಅಥವಾ ನೋವು ಇರಲಿದೆ. ಇದಲ್ಲದೆ, ಜ್ವರ, ತಲೆನೋವು, ಕಫ, ಉಸಿರಾಟ ತೊಂದರೆ, ರಕ್ತದ ವಾಂತಿ, ಮಾನಸಿಕ ಸೀಮಿತದಲ್ಲಿ ಬದಲಾವಣೆಯಂತಹ ಲಕ್ಷಣಗಳು ಕಾಣಿಸುವ ಸಾಧ್ಯತೆ ಇದೆ.
ಇದನ್ನೂ ಓದಿ- ಮೃತಪಟ್ಟರೆ ಎಷ್ಟು ಜನ ಸೇರುತ್ತಾರೆ ಎಂದು ಪರೀಕ್ಷಿಸಲು ಸತ್ತಂತೆ ನಟಿಸಿದ ಮಹಿಳೆ
ಏನು ಮಾಡಬೇಕು? ಏನು ಮಾಡಬಾರದು?
ಈ ಕುರಿತು ಆರೋಗ್ಯ ಸಚಿವರು ಹಂಚಿಕೊಂಡಿರುವ ಮತ್ತೊಂದು ಸ್ಲೈಡ್ ನಲ್ಲಿ ಹೈಪರ್ ಗ್ಲೈಕೊಮಿಯಾ ನಿಯಂತ್ರಣದಲ್ಲಿಡಲು ಸೂಚಿಸಲಾಗಿದೆ. ಡಯಾಬಿಟಿಸ್ ನಿಂದ ಬಳಲುತ್ತಿರುವ ವ್ಯಕ್ತಿ ಒಂದು ವೇಳೆ ಕೊವಿಡ್ (Covid-19) ಗೆ ತುತ್ತಾದರೆ, ಅವರು ಡಿಸ್ಚಾರ್ಜ್ ಆದಬಲಿಕ ಅವರ ಬ್ಲಡ್ ಗ್ಲುಕೋಸ್ ಲೆವಲ್ ಮೇಲೆ ಕಣ್ಣಿಡಲು ಹೇಳಲಾಗಿದೆ. ಸ್ಟೇರಾಯಿಡ್ ಗಳ ಬಳಕೆ ಎಚ್ಚರಿಕೆಯಿಂದ ಮಾಡಬೇಕು. ಆಕ್ಸಿಜನ್ ಥೆರಪಿಯ ವೇಳೆ ಶುದ್ಧ ಹಾಗೂ ಸ್ಟೆರಾಯಿಲ್ ನೀರಿನ ಬಳಕೆ ಮಾಡಬೇಕು. ಆಂಟಿ ಬಯೋಟಿಕ್ ಹಾಗೂ ಆಂಟಿ ಫಂಗಲ್ ಔಷಧಿಗಳ ಬಳಕೆ ವಿವೇಚನೆಯಿಂದ ಮಾಡಬೇಕು ಎಂದು ಆರೋಗ್ಯ ಸಚಿವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ- Alert! ನಕಲಿ CoWin Appಗಳ ಬಗ್ಗೆ ಎಚ್ಚರ ಎಂದ ಸರ್ಕಾರ, ಈ 5 ಫೈಲ್ಸ್ ಡೌನ್ ಲೋಡ್ ಮಾಡಬೇಡಿ
ಬಳಿಕ ಜನರಿಗೂ ಕೂಡ ಸಲಹೆಗಳನ್ನು ನೀಡಿರುವ ಆರೋಗ್ಯ ಸಚಿವರು, ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಮೂಗು ಬಿಗಿಯುವಿಕೆಯ ಎಲ್ಲಾ ಪ್ರಕರಣಗಳನ್ನು ಬ್ಯಾಕ್ಟಿರಿಯಾ ಸೈನಸ್ ಎಂದು ತಿಳಿಯಬೇಡಿ ಅದರಲ್ಲೂ ವಿಶೇಷವಾಗಿ ಕೊರೊನಾ ರೋಗಿಗಳು. ಪರೀಕ್ಷೆ ನಡೆಸಲು ಹಿಂದೇಟು ಹಾಕಬೇಡಿ ಮತ್ತು ಚಿಕಿತ್ಸೆ ಪಡೆಯಲು ತಡಮಾಡಬೇಡಿ ಎಂದಿದ್ದಾರೆ.
ಇದನ್ನೂ ಓದಿ- Covaxin, Covishield, Sputnik-V: ಭಾರತದ ಬಳಿ ಮೂರು ಅಸ್ತ್ರಗಳು, ಯಾವುದು ಎಷ್ಟು ಪರಿಣಾಮಕಾರಿ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.