Pomegranate Peel Benefits: ತರಕಾರಿಗಳು ಮತ್ತು ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಹಣ್ಣುಗಳ ಸಿಪ್ಪೆಗಳು ಕೂಡ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ ಎಂಬ ಸಂಗತಿಗಳು ನಿಮಗೆ ತಿಳಿದಿದೆಯೇ. ಟಿಕ್ ಟೋಕ್ ಕಂಟೆಂಟ್ ಕ್ರಿಯೇಟರ್ ಮತ್ತು ಸಾಮಾಜಿಕ ಮಾಧ್ಯಮದ ಸ್ಟಾರ್ ಅರ್ಮೆನ್ ಆಡಮ್ಜಾನ್ ಇತ್ತೀಚೆಗೆ ದಾಳಿಂಬೆ ಸಿಪ್ಪೆಗಳ ಪ್ರಯೋಜನಗಳ ಬಗ್ಗೆ ಮತ್ತು ಅವುಗಳ ಸಿಪ್ಪೆಗಳನ್ನು ಶಕ್ತಿಯುತ ಪುಡಿಯಾಗಿ ಪರಿವರ್ತಿಸುವ ಬಗ್ಗೆ ನಮಗೆ ಮಾಹಿತಿ ನೀಡಿದ್ದಾರೆ. ಗಂಟಲು ನೋವು, ಕೆಮ್ಮು, ಹೊಟ್ಟೆಯ ಸಮಸ್ಯೆಗಳು ಮತ್ತು ಮೂಳೆಗಳ ಆರೋಗ್ಯಕ್ಕೆ ದಾಳಿಂಬೆ ಸಿಪ್ಪೆಯು ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ. ಹಣ್ಣುಗಳಿಗಿಂತ ಸಿಪ್ಪೆಯಲ್ಲಿ ಹೆಚ್ಚು ಉತ್ಕರ್ಷಣ ನಿರೋಧಕಗಳಿವೆ ಎಂದು ಆಡಮ್ಜನ್ ಹೇಳಿದ್ದಾರೆ.
ದಾಳಿಂಬೆ ಸಿಪ್ಪೆಯ ಪುಡಿ ಮಾಡುವುದು ಹೇಗೆ?
ಮೊದಲು ಸಿಪ್ಪೆಗಳನ್ನು ಬಾಣಲೆಯಲ್ಲಿ ಹಾಕಿ. ನಂತರ ಅವುಗಳನ್ನು 350 ಡಿಗ್ರಿಗಳಲ್ಲಿ 20 ನಿಮಿಷಗಳ ಕಾಲ ಒಲೆಯ ಮೇಲೆ ಹುರಿದುಕೊಳ್ಳಿ. ಸಿಪ್ಪೆಗಳು ಒಣಗಿದ ನಂತರ, ಮಿಕ್ಸಿಗೆ ಹಾಕಿ ಚೆನ್ನಾಗಿ ಅವುಗಳ ಪುಡಿಯನ್ನು ತಯಾರಿಸಿಕೊಳ್ಳಿ. ಈಗ ಪುಡಿಮಾಡಿದ ಕಂದು ಪೌಡರ್ ಬಳಕೆಗೆ ಸಿದ್ಧವಾಗಿದೆ.
ಅದನ್ನು ಬಳಸುವುದು ಹೇಗೆ?
ದಾಳಿಂಬೆ ಪುಡಿಯನ್ನು ಬಳಸಿ ನೀವು ಚಹಾ ತಯಾರಿಸಬಹುದು ಎಂದು ಆಡಮ್ ಹೇಳಿದ್ದಾರೆ.. ಖಾಲಿ ಟೀ ಬ್ಯಾಗ್ ತೆಗೆದುಕೊಂಡು ಅದಕ್ಕೆ ಒಂದು ಚಮಚ ದಾಳಿಂಬೆ ಸಿಪ್ಪೆಯ ಪುಡಿಯನ್ನು ಸೇರಿಸಿ. ಬಳಿಕ ಈ ಮಿಶ್ರಣವನ್ನು ನೀವು ಒಂದು ಲೋಟ ಬಿಸಿ ನೀರಿನಲ್ಲಿ ನೆನೆಸಬೇಕು. ದಾಳಿಂಬೆ ಚಹಾ ಸಿದ್ಧವಾಗಿದೆ. ದಾಳಿಂಬೆ ಸಿಪ್ಪೆಯು ಗಂಟಲು ನೋವು, ಕೆಮ್ಮು, ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ನಿಮ್ಮ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.
ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ
ದಾಳಿಂಬೆ ಸಿಪ್ಪೆಯ ಪುಡಿ ಚರ್ಮದ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿದೆ. ಪುಡಿಯಲ್ಲಿ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಪೇಸ್ಟ್ ಮಾಡಿ. ನಂತರ ಅದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಈಗ ನಿಮ್ಮ ಮುಖವನ್ನು 20 ನಿಮಿಷಗಳ ಕಾಲ ಹಾಗೆ ಬಿಡಿ. ಅದರ ನಂತರ ಸ್ವಚ್ಚವಾಗಿ ನಿಮ್ಮ ಮುಖವನ್ನು ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಮೊಡವೆಗಳು ಮತ್ತು ಕಲೆಗಳು ಹೋಗುತ್ತವೆ ಮತ್ತು ಸುಕ್ಕುಗಳು ಸಹ ಕಡಿಮೆಯಾಗುತ್ತವೆ. ತಜ್ಞರ ಪ್ರಕಾರ, ದಾಳಿಂಬೆ ಸಿಪ್ಪೆಯು ಕಾಲಜನ್ ಅನ್ನು ಹೆಚ್ಚಿಸುತ್ತದೆ ಇದು ನೈಸರ್ಗಿಕವಾಗಿ ಮತ್ತು ಪರಿಣಾಮಕಾರಿಯಾಗಿ ಚರ್ಮದ ವಯಸ್ಸಾಗುವಿಕೆಯನ್ನು ತಡೆಯುತ್ತದೆ.
ಇದನ್ನೂ ಓದಿ-Health Tips: ಈ ಕಾಯಿಲೆ ಇರುವವರು ಪಪ್ಪಾಯಿಯನ್ನು ಮರೆತೂ ಕೂಡ ಸೇವಿಸಬಾರದು
ದಾಳಿಂಬೆ ಸಿಪ್ಪೆಯ ಇತರ ಪ್ರಯೋಜನಗಳು
>> ದಾಳಿಂಬೆ ಸಿಪ್ಪೆಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ಇದು ಹೊಟ್ಟೆಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಅತಿಸಾರ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳಿಗೆ ಇದು ಉತ್ತಮ ಮನೆಮದ್ದು.
>> ದಾಳಿಂಬೆ ಸಿಪ್ಪೆ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡಲು ಮತ್ತು ಹಾನಿಗೊಳಗಾದ ಚರ್ಮದ ಕೋಶಗಳನ್ನು ಸರಿಪಡಿಸಲು ನಿಮ್ಮ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ.
>> ದಾಳಿಂಬೆ ಸಿಪ್ಪೆಗಳು ಬಾಯಿ ಹುಣ್ಣು, ಜಿಂಗೈವಿಟಿಸ್, ಬಾಯಿ ದುರ್ವಾಸನೆ ಮತ್ತು ಇತರ ಹಲ್ಲಿನ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಇದನ್ನೂ ಓದಿ-Health Tips: ಟೀ-ಕಾಫಿ ಸೇವಿಸುವ ಮುನ್ನ ನೀರು ಕುಡಿಯುವುದು ಎಷ್ಟು ಉಚಿತ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಟಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.