ಬೆಂಗಳೂರು : ಪ್ರತಿಯೊಬ್ಬರೂ ದುಡಿಯುವುದು ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಇತ್ತೀಚಿನ ದಿನಗಳಲ್ಲಿ ಕೈ ತುಂಬಾ ದುಡಿಮೆಗೆ ಪ್ರಾಮುಖ್ಯತೆ ನೀಡುತ್ತೇವೆ. ಆದರೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು ಎನ್ನುವುದನ್ನು ಅಲಕ್ಷಿಸಿ ಬಿಡುತ್ತೇವೆ. ಮೂರೂ ಹೊತ್ತು ಊಟ ಮಾಡುವುದು ದೇಹದ ಪೋಷಣೆ ಮತ್ತು ನಮ್ಮ ಒಟ್ಟಾರೆ ಬೆಳವಣಿಗೆಗೆ ಬಹಳ ಮುಖ್ಯವಾಗಿದೆ. ಎಷ್ಟೋ ಜನ ರಾತ್ರಿ ಊಟ ಮಾಡದೇ ಮಲಗುವವರಿದ್ದಾರೆ. ಇದರ ಹಿಂದೆ ಕಾರಣಗಳು ಬೇರೆ ಬೇರೆ ಇರಬಹುದು. ಆದರೆ ಬಹುತೇಕರಿಗೆ ರಾತ್ರಿ ಊಟ ಮಾಡದೇ ಇದ್ದರೆ ಏನೂ ಸಮಸ್ಯೆಯಾಗುವುದಿಲ್ಲ ಎನ್ನುವ ಕಲ್ಪನೆ ಇದೆ. ಇದು ತಪ್ಪು ಕಲ್ಪನೆ. ನಮ್ಮ ಹಿರಿಯರು ಹೇಳಿರುವುದನ್ನು ಕೇಳಿರಬಹುದು. ಬೆಳಿಗ್ಗೆ ರಾಜನ ಹಾಗೆ ತಿನ್ನಬೇಕು, ಮಧ್ಯಾಹ್ನ ಮಂತ್ರಿಯ ಹಾಗೆ ತಿನ್ನಬೇಕು, ರಾತ್ರಿ ಸೇವಕನ ಹಗೆ ತಿನ್ನಬೇಕು. ಅಂದರೆ ರಾತ್ರಿ ಸ್ವಲ್ಪ ತಿನ್ನಬೇಕು ಆದರೆ ತಿನ್ನಬೇಕು ಎನ್ನುವುದನ್ನು ಮರೆಯಬಾರದು.
ಇತ್ತೀಚಿನ ದಿನಗಳಲ್ಲಿ ಯಾರ ಬಾಯಿಯಲ್ಲಿ ಕೇಳಿದರೂ ಸಣ್ಣಗಾಗುವ ಮಾತು ಕೇಳಿ ಬರುತ್ತದೆ. ತೂಕ ಕಳೆದುಕೊಳ್ಳಬೇಕಾದರೆ ಮೊದಲು ಆಯ್ದುಕೊಳ್ಳುವ ಆಯ್ಕೆಯೇ ಊಟ ಬಿಡುವುದು. ಆದರೆ ಇದು ತಪ್ಪು. ಈ ರೀತಿ ಮಾಡುವ ಮೂಲಕ ನಮ್ಮ ಆರೋಗ್ಯಕ್ಕೆ ನಾವು ಹಾನಿ ಮಾಡುತ್ತಿದ್ದೇವೆ ಎನ್ನುವುದನ್ನು ನೆನಪಿನಲ್ಲಿಡಬೇಕು. ರಾತ್ರಿ ಊಟವನ್ನು ಬಿಡುವುದರಿಂದ ಆರೋಗ್ಯದ ಮೇಲೆ ಆಗುವ ಅಡ್ಡ ಪರಿಣಾಮಗಳು ಯಾವುವು ನೋಡೋಣ.
ಇದನ್ನೂ ಓದಿ : Radish Side Effects: ಈ 10 ಸಮಸ್ಯೆಗಳಿರುವವರು ಮೂಲಂಗಿಯನ್ನು ಮರೆತೂ ಕೂಡ ಸೇವಿಸಬಾರದು
1. ದೇಹದಲ್ಲಿ ಎದುರಾಗುತ್ತದೆ ಪೋಷಕಾಂಶಗಳ ಕೊರತೆ :
ತೂಕವನ್ನು ಕಡಿಮೆ ಮಾಡಬೇಕು ಎನ್ನುವ ಕಾರಣಕ್ಕಾಗಿ ರಾತ್ರಿ ಹೊತ್ತು ಆಹಾರ ಸೇವಿಸದಿದ್ದರೆ, ಅದು ನಾವು ಮಾಡುವ ದೊಡ್ಡ ತಪ್ಪು. ಏಕೆಂದರೆ ಹೀಗೆ ಮಾಡುವುದರಿಂದ ದೇಹದಲ್ಲಿ ಪೋಷಕಾಂಶಗಳ ಕೊರತೆ ಎದುರಾಗುತ್ತದೆ. ದೇಹ ಅಪೌಷ್ಟಿಕತೆಗೆ ಬಲಿಯಾಗಬೇಕಾಗುತ್ತದೆ. ಇದು ನಮ್ಮ ದೇಹದ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ದೇಹ ದೌರ್ಬಲ್ಯವನ್ನು ರಕ್ತಹೀನತೆಯನ್ನು ಎದುರಿಸಬೇಕಾಗುತ್ತದೆ.
2. ಶಕ್ತಿಯ ಕೊರತೆಯ ಅಪಾಯ :
ಇನ್ನು ಕೆಲವೊಮ್ಮೆ ಅಡುಗೆ ಮಾಡುವ ಸೋಮಾರಿತನದಿಂದಾಗಿ ರಾತ್ರಿ ಊಟ ಮಾಡದೆ ಇರುವುದು ಸರಿಯಲ್ಲ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ರಾತ್ರಿ ವೇಳೆ ದೈಹಿಕ ಚಟುವಟಿಕೆಗಳನ್ನು ಮಾಡದಿದ್ದರೂ, ನಮ್ಮ ಮೆದುಳು ಕೆಲಸ ಮಾಡುತ್ತದೆ ಎನ್ನುವುದನ್ನು ಮರೆಯಬಾರದು. ಹೀಗಾದಾಗ ರಾತ್ರಿ ಊಟ ಮಾಡದೇ ಮಲಗುವುದರಿಂದ ಶಕ್ತಿಯ ಕೊರತೆ ಉಂಟಾಗುತ್ತದೆ. ಮರುದಿನವೂ ದೌರ್ಬಲ್ಯ ಮತ್ತು ಆಯಾಸದೊಂದಿಗೆ ದಿನವನ್ನು ಆರಂಭಿಸಬೇಕಾಗುತ್ತದೆ.
ಇದನ್ನೂ ಓದಿ : Fruit For Sugar Control : ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ರಾಮಬಾಣ ಈ ರಾಮಫಲ
3. ನಿದ್ರೆಗೆ ತೊಂದರೆಯಾಗುತ್ತದೆ :
ರಾತ್ರಿಯಲ್ಲಿ ಊಟ ಮಾಡದೆ ಮಲಗುವುದರಿಂದ ಮಧ್ಯರಾತ್ರಿ ಅಥವಾ ತಡರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಹಸಿವಾಗಲು ಶುರುವಾಗಬಹುದು. ಇದರಿಂದಾಗಿ ನಿದ್ದೆಗೆ ಭಂಗ ಬರುತ್ತದೆ. ಒಬ್ಬ ವ್ಯಕ್ತಿಗೆ ದಿನಕ್ಕೆ 8 ಗಂಟೆಗಳ ಕಾಲ ನಿದ್ರೆ ಬೇಕಾಗಿರುತ್ತದೆ. ಇಲ್ಲವಾದಲ್ಲಿ ಮರುದಿನ ಆಲಸ್ಯ ಮತ್ತು ದಣಿವಾಗುತ್ತದೆ. ಅದಕ್ಕಾಗಿಯೇ ರಾತ್ರಿಯ ಊಟವನ್ನು ಯಾವುದೇ ಕಾರಣಕ್ಕೂ ಸ್ಕಿಪ್ ಮಾಡಬಾರದು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.