Star Fruit Health Benefits: ಪೌಷ್ಟಿಕ-ಭರಿತ ಆಹಾರದ ವಿಷಯಕ್ಕೆ ಬಂದಾಗ, ಅಣಬೆಗಳು, ಬೆರಿಹಣ್ಣುಗಳು, ಬೇಳೆಕಾಳುಗಳು, ಹಸಿರು ಎಲೆಗಳ ತರಕಾರಿಗಳನ್ನು ಬಹಳಷ್ಟು ತಿನ್ನುತ್ತೇವೆ ಏಕೆಂದರೆ ಅವುಗಳು ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಇತರ ಅನೇಕ ಪೋಷಕಾಂಶಗಳಿಂದ ತುಂಬಿರುತ್ತವೆ. ಅಂತಹದ್ದೇ ಸಾಲಿಗೆ ಸೇರಿದ ಒಂದು ಹಣ್ಣು ನಕ್ಷತ್ರ ಹಣ್ಣು ಅಥವಾ ಸ್ಟಾರ್ ಫ್ರೂಟ್. ಇದನ್ನು ಹಿಂದಿಯಲ್ಲಿ 'ಕಮ್ರಾಖ್' ಎಂದು ಕರೆಯಲಾಗುತ್ತದೆ.
ಕತ್ತರಿಸಿದಾಗ ಅದರ ಆಕಾರ ನಕ್ಷತ್ರದಂತೆ ಆಗುತ್ತದೆ. ಅದಕ್ಕಾಗಿಯೇ ಇದನ್ನು ನಕ್ಷತ್ರ ಹಣ್ಣು ಅಥವಾ ಸ್ಟಾರ್ ಫ್ರೂಟ್ ಎಂದು ಕರೆಯಲಾಗುತ್ತದೆ. ಇದು ಗರಿಗರಿಯಾಗಿ, ಹುಳಿ ಮತ್ತು ರುಚಿಯಲ್ಲಿ ರಸಭರಿತವಾಗಿರುತ್ತದೆ. ಇದರ ಬಣ್ಣ ಹಸಿರು, ಹಳದಿ. ಇದನ್ನು ಹಸಿಯಾಗಿ ತಿನ್ನಲಾಗುತ್ತದೆ.
ಇದನ್ನೂ ಓದಿ: ನಿಮ್ಮ ಶರೀರದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಪಕ್ಕಾ ಆರೋಗ್ಯ ಹದಗೆಟ್ಟಿದೆ ಎಂದರ್ಥ; ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ!!
ಸ್ಟಾರ್ ಫ್ರೂಟ್ ಅನೇಕ ರೀತಿಯ ಪೋಷಕಾಂಶಗಳಿಂದ ತುಂಬಿದೆ. ವಿಶೇಷವಾಗಿ ಫೈಬರ್. ಇದರಲ್ಲಿ ಫೈಬರ್ ಅಧಿಕವಾಗಿದ್ದು, ಕ್ಯಾಲೋರಿಗಳು ಕಡಿಮೆ. ಫೈಬರ್ ರಕ್ತದಲ್ಲಿನ ಗ್ಲೂಕೋಸ್ ಮತ್ತು ಇನ್ಸುಲಿನ್ ಅನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಹಾಗೆಯೇ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸಹ ಆರೋಗ್ಯಕರವಾಗಿರಿಸುತ್ತದೆ.
ಕರಗುವ ನಾರಿನಂಶ ಇರುವುದರಿಂದ ಸ್ಟಾರ್ ಫ್ರೂಟ್ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಇವು ಕೆಟ್ಟ ಕೊಲೆಸ್ಟ್ರಾಲ್ ನ ಚಟುವಟಿಕೆಯನ್ನು ತಡೆಯುತ್ತವೆ ಮತ್ತು ರಕ್ತದಿಂದ ಕೊಬ್ಬಿನ ಅಣುಗಳನ್ನು ತೆಗೆದುಹಾಕುತ್ತವೆ.
ಕಡಿಮೆ ಕ್ಯಾಲೋರಿ ಹೊಂದಿರುವ ನಾರಿನ ಉತ್ತಮ ಮೂಲ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸ್ಟಾರ್ ಫ್ರೂಟ್, ವಿಶೇಷ ಆಹಾರಕ್ರಮದಲ್ಲಿರುವವರಿಗೆ ಉತ್ತಮವಾಗಿದೆ. ಇದನ್ನು ಸೇವಿಸುವುದರಿಂದ, ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುತ್ತದೆ. ಜೊತೆಗೆ ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಹಾಗೆಯೇ ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ.
ಕರಗುವ ನಾರು ರಕ್ತದಿಂದ ಕೊಬ್ಬಿನ ಅಣುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ, ಸ್ಟಾರ್ ಫ್ರೂಟ್ ಸೋಡಿಯಂ, ಪೊಟ್ಯಾಸಿಯಮ್ ಮತ್ತು ಇತರ ಖನಿಜಗಳಿಂದ ಕೂಡಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ನಾರಿನ ಜೊತೆಗೆ, ಸ್ಟಾರ್ ಫ್ರೂಟ್‌ನಲ್ಲಿ ಸಾಕಷ್ಟು ಜೀವಸತ್ವಗಳು ಮತ್ತು ಖನಿಜಗಳಿವೆ. ವಿಟಮಿನ್ ಸಿ, ಬಿ-ಕ್ಯಾರೋಟಿನ್ ಮತ್ತು ಗ್ಯಾಲಿಕ್ ಆಮ್ಲದಂತಹ ನೈಸರ್ಗಿಕ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯುತ್ತದೆ.
ಸ್ಟಾರ್ ಫ್ರೂಟ್ ವಿಟಮಿನ್ ಸಿ ಜೊತೆಗೆ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಈ ಮಿಶ್ರಣವು ದೇಹದ ರೋಗನಿರೋಧಕ ಶಕ್ತಿಯನ್ನು ಬಲವಾಗಿ ಮತ್ತು ಆರೋಗ್ಯವಾಗಿಡುತ್ತದೆ. ಇದಲ್ಲದೆ, ಮೆಗ್ನೀಸಿಯಮ್, ಕಬ್ಬಿಣ, ಸತು, ಮ್ಯಾಂಗನೀಸ್, ಪೊಟ್ಯಾಸಿಯಮ್ ಮತ್ತು ರಂಜಕಗಳಲ್ಲಿಯೂ ಸಮೃದ್ಧವಾಗಿದೆ.
ಪೌಷ್ಟಿಕಾಂಶಗಳಿಂದ ಕೂಡಿದ ಸ್ಟಾರ್ ಫ್ರೂಟನ್ನು ಆಯುರ್ವೇದ ಮತ್ತು ಸಾಂಪ್ರದಾಯಿಕ ಚೀನೀ ಔಷಧಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಜ್ವರ, ಕೆಮ್ಮು, ಅತಿಸಾರ, ತಲೆನೋವು, ಎಸ್ಜಿಮಾದಂತಹ ಚರ್ಮದ ಸೋಂಕುಗಳು ಮತ್ತು ಶಿಲೀಂಧ್ರಗಳ ಸೋಂಕಿನ ಚಿಕಿತ್ಸೆಯಲ್ಲಿ ಪರಿಣಾಮಕಾರಿ.
ಇದನ್ನೂ ಓದಿ: ಈ ಒಣ ಎಲೆಗಳು ಮಧುಮೇಹ ಸೇರಿದಂತೆ ಈ 5 ಸಮಸ್ಯೆಗಳನ್ನು ಹೋಗಲಾಡಿಸುತ್ತದೆ, ಪ್ರತಿದಿನ ಈ ರೀತಿ ಸೇವಿಸಿ
ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ಇದನ್ನು ವೃತ್ತಿಪರ ವೈದ್ಯಕೀಯ ಸಲಹೆ ಎಂದು ಅರ್ಥೈಸಿಕೊಳ್ಳಬಾರದು. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ