Liver Cirrhosis Symptoms : ಲಿವರ್ ಸಿರೋಸಿಸ್ ಎನ್ನುವುದು ಯಕೃತ್ತಿನ ಮೇಲೆ ಗಾಯಗಳು ಉಂಟಾಗುವ ಸ್ಥಿತಿಯಾಗಿದೆ.ಇದು ಪಿತ್ತಜನಕಾಂಗದ ಗಂಭೀರ ಸಮಸ್ಯೆಗಳಲ್ಲಿ ಒಂದು. ಪಿತ್ತಜನಕಾಂಗದ ಸಿರೋಸಿಸ್ ಗೆ ಮುಖ್ಯ ಕಾರಣವೆಂದರೆ ಹೆಪಟೈಟಿಸ್ ಅಥವಾ ದೀರ್ಘಕಾಲದ ಮದ್ಯ ವ್ಯಸನದಂತಹ ಯಕೃತ್ತಿನ ಸಂಬಂಧಿತ ಕಾಯಿಲೆಗಳು.ಮಿತಿಮೀರಿ ಕುಡಿಯುವ ಸಂದರ್ಭದಲ್ಲಿ ಯಕೃತ್ತಿನ ಸಿರೋಸಿಸ್ ಅಪಾಯ ಹೆಚ್ಚು.ಈ ಲೇಖನದಲ್ಲಿ ಲಿವರ್ ಸಿರೋಸಿಸ್ ಅನ್ನು ಗುರುತಿಸಲು ಕೆಲವು ರೋಗಲಕ್ಷಣಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ.
ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ :
ಹಳದಿ ಚರ್ಮ ಅಥವಾ ಹಳದಿ ಕಣ್ಣುಗಳು ಲಿವರ್ ಸಿರೋಸಿಸ್ ನ ಚಿಹ್ನೆಯಾಗಿರಬಹುದು.ನಿಮ್ಮ ಚರ್ಮ,ಉಗುರುಗಳು ಅಥವಾ ನಿಮ್ಮ ಕಣ್ಣುಗಳ ಬಿಳಿ ಭಾಗವು ಹಳದಿ ಬಣ್ಣಕ್ಕೆ ತಿರುಗಿದ್ದರೆ ತಕ್ಷಣ ತಜ್ಞರನ್ನು ಸಂಪರ್ಕಿಸಿ.ಇದರಿಂದ ಯಾವುದೇ ರೀತಿಯ ಸಮಸ್ಯೆ ಇದ್ದಲ್ಲಿ ನಿಮ್ಮ ಚಿಕಿತ್ಸೆಯನ್ನು ಸಮಯಕ್ಕೆ ಸರಿಯಾಗಿ ಮಾಡಬಹುದು.
ಇದನ್ನೂ ಓದಿ : ಯುರಿಕ್ ಆಸಿಡ್, ಮಧುಮೇಹ ಎರಡಕ್ಕೂ ಮದ್ದು ಹಾಗಲಕಾಯಿ, ಇದನ್ನು ಸೇವಿಸುವ ವಿಧಾನ ತಿಳಿದಿರಬೇಕಷ್ಟೆ!
ಹಸಿವಾಗದೆ ಇರುವುದು :
ಯಕೃತ್ತಿನ ಸಿರೋಸಿಸ್ ಕಾರಣ, ಹಸಿವು ಕಡಿಮೆಯಾಗುತ್ತದೆ. ಏನೂ ತಿನ್ನದೇ ಇದ್ದರೂ ಹಸಿವಾಗುವುದೇ ಇಲ್ಲ. ಹೀಗಾಗಿ ಏನನ್ನೂ ತಿನ್ನಬೇಕು ಅನ್ನಿಸುವುದಿಲ್ಲ, ನಿಮಗೂ ಹೀಗಾಗುತ್ತಿದ್ದರೆ ಯಕೃತ್ತಿನ ಕಾರ್ಯವನ್ನು ಒಮ್ಮೆ ಪರೀಕ್ಷಿಸಿ.
ವಿಪರೀತ ದಣಿವು :
ಯಕೃತ್ತಿನ ಸಿರೋಸಿಸ್ ನಂಥಹ ಸ್ಥಿತಿಯಲ್ಲಿ,ಯಕೃತ್ತು ಕೆಟ್ಟದಾಗಿ ಹಾನಿಗೊಳಗಾಗುತ್ತದೆ.ಇದರಿಂದಾಗಿ ರೋಗಿಯ ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ.ಆಗ ರೋಗಿಗಳಿಗೆ ವಿಪರೀತ ದಣಿವಾಗುವುದು.
ದೇಹದಲ್ಲಿ ಊತ ಮತ್ತು ತುರಿಕೆ :
ದೇಹದಲ್ಲಿ ಕಾಣಿಸಿಕೊಳ್ಳುವ ಊತ ಮತ್ತು ತುರಿಕೆ ಕೂಡಾ ಲಿವರ್ ಸಿರೋಸಿಸ್ ಅನ್ನು ಸೂಚಿಸುತ್ತದೆ.ಇಂಥಹ ಲಕ್ಷಣಗಳನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಬಾರದು. ಇದರಿಂದ ಪರಿಸ್ಥಿತಿ ಗಂಭೀರವಾಗಬಹುದು.
ಇದನ್ನೂ ಓದಿ :ಟೀ ಪ್ರಿಯರೇ ಎಚ್ಚರ: ಕಲರ್ ಕ್ಯಾಂಡಿ, ಗೋಬಿ ಬಳಿಕ ಬ್ರಾಂಡ್ ಟೀ ಪುಡಿಗಳಿಂದಲೂ ಕಾದಿದೆ ಅಪಾಯ!
ವಾಕರಿಕೆ ಮತ್ತು ವಾಂತಿ :
ಲಿವರ್ ಸಂಬಂಧಿತ ಸಮಸ್ಯೆಗಳಿಂದಾಗಿ ರೋಗಿಗಳ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.ತಿನ್ನಲು ಮತ್ತು ಕುಡಿಯಲು ತೊಂದರೆಗಳನ್ನು ಎದುರಿಸುತ್ತಾರೆ.ಕೆಲವೊಮ್ಮೆ ವಾಕರಿಕೆ ಮತ್ತು ವಾಂತಿ ಸಸ್ಯೆ ಕಾಡುತ್ತದೆ.
(ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ. )
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.