ತೂಕವನ್ನು ವೇಗವಾಗಿ ಕಳೆದುಕೊಳ್ಳಬೇಕೆ..? ಈ ಸಮಯದಲ್ಲಿ ಪಾನಿಪುರಿ ತಿನ್ನಬೇಡಿ ಗರ್ಲ್ಸ್‌.. ಇಲ್ಲಾ ಅಂದ್ರೆ ಡುಮ್ಮಿ ಆಗ್ತೀರಾ..

Weight Loss Tips : ವಾಕಿಂಗ್‌ ಹೋದಾಗ ರಸ್ತೆಯ ಪಕ್ಕದ ಹೊಟೇಲ್ ನಿಂದ ಅಡುಗೆ ವಾಸನೆ ಮೂಗಿಗೆ ಬಡಿದರೆ ಸಾಕು ಎಲ್ಲರ ನಿಯಂತ್ರಣ ತಪ್ಪುತ್ತದೆ. ತಕ್ಷಣ ಅಲ್ಲಿಗೆ ಹೋಗಿ ಫುಡ್‌ ಆರ್ಡರ್ ಮಾಡಿ ತಿಂತಾರೆ. ಅದೇ ರೀತಿ ಕೆಲವರು ಪಾನಿಪುರಿ ನೋಡಿದ್ರೆ.. ಬಯ್ಯಾ.. ಎಕ್‌ ಪ್ಲೇಟ್‌ ಪಾನಿಪುರಿ.. ಅಂತ ಪ್ಲೇಟ್‌ ಹಿಡಿದು ನಿಲ್ಲುತ್ತಾರೆ.. 

Written by - Krishna N K | Last Updated : Sep 29, 2024, 04:33 PM IST
    • ವಾಕಿಂಗ್‌ ಹೋದಾಗ ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ಸೇವಿಸಬೇಡಿ
    • ಪಾನಿ ಪುರಿ ಬಂಡಿ ಕಾಣಿಸಿದರೂ ಸಹ ತಿನ್ನುವ ಹರಸಾಹಸ ಮಾಡಬೇಡಿ
    • ಬಯ್ಯಾ.. ಎಕ್‌ ಪ್ಲೇಟ್‌ ಪಾನಿಪುರಿ.. ಅಂತ ಪ್ಲೇಟ್‌ ಹಿಡಿದು ನಿಲ್ಲಬೇಡ
ತೂಕವನ್ನು ವೇಗವಾಗಿ ಕಳೆದುಕೊಳ್ಳಬೇಕೆ..? ಈ ಸಮಯದಲ್ಲಿ ಪಾನಿಪುರಿ ತಿನ್ನಬೇಡಿ ಗರ್ಲ್ಸ್‌.. ಇಲ್ಲಾ ಅಂದ್ರೆ ಡುಮ್ಮಿ ಆಗ್ತೀರಾ.. title=

Easy weight loss tips : ಈ ರೀತಿ ಮಾಡುವುದರಿಂದ ಕಳೆದುಹೋದ ಎಲ್ಲಾ ಕ್ಯಾಲೊರಿಗಳು ಒಂದು ನಿಮಿಷದಲ್ಲಿ ಹಿಂತಿರುಗುತ್ತವೆ. ಹೀಗೆ ಸತತವಾಗಿ ಮಾಡಿದರೆ ಕೊಬ್ಬು ನಷ್ಟವಾಗುವುದಿಲ್ಲ.. ಬೆಳೆಯುತ್ತದೆ.. ಸಂಜೆಯ ವೇಳೆ ಹೆಚ್ಚಿನ ಕ್ಯಾಲೋರಿ ಇರುವ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ ಆರೋಗ್ಯ ತಜ್ಞರು. ವಿಶೇಷವಾಗಿ ಸಂಜೆಯ ನಂತರ ಯಾವ ರೀತಿಯ ಆಹಾರವನ್ನು ಸೇವಿಸಬಾರದು.. ಬನ್ನಿ ನೋಡೋಣ..

ತಂಪು ಪಾನೀಯಗಳು : ಯಾವುದೇ ಸಂದರ್ಭದಲ್ಲಿ ಸೂರ್ಯಾಸ್ತದ ಮೊದಲು ಅಥವಾ ನಂತರ ತಂಪು ಪಾನೀಯಗಳನ್ನು ಸೇವಿಸಬಾರದು. ಇವುಗಳಿಂದ ಆದಷ್ಟು ದೂರವಿರಿ. ಸಕ್ಕರೆ ಸೋಡಾ ಪಾನೀಯಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಅವು ತೂಕವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತವೆ. ತಂಪು ಪಾನೀಯಗಳ ಜೊತೆಗೆ ಆಲ್ಕೋಹಾಲ್ ಸೇವನೆ ಒಳ್ಳೆಯದಲ್ಲ. 

ಇದನ್ನೂ ಓದಿ: ನೀವು ಕುಡಿಯುತ್ತಿರುವ ಹಾಲು ನಕಲಿ ಅಥವಾ ಅಸಲಿಯೇ? ಹೀಗೆ ಕಂಡು ಹಿಡಿಯಿರಿ

ಚೀಸ್ : ಹೆಚ್ಚಿನ ಪಾಸ್ಟ್‌ ಫುಡ್‌ಗಳಲ್ಲಿ ಚೀಸ್ ಇರುತ್ತದೆ. ಪಿಜ್ಜಾ, ಬರ್ಗರ್, ಪಾಸ್ತಾ ಮುಂತಾದ ಆಹಾರಗಳಲ್ಲಿ ಚೀಸ್ ಅತ್ಯಗತ್ಯ. ಇದರಲ್ಲಿ ಉಪ್ಪು ಮತ್ತು ಸೋಡಿಯಂ ಅಧಿಕವಾಗಿದೆ. ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬು ಕೂಡ ಅಧಿಕವಾಗಿದೆ. ಇಂತಹ ಆಹಾರಗಳು ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತವೆ.

ಸಂಸ್ಕರಿಸಿದ ಆಹಾರಗಳು : ಸಾಸೇಜ್‌ಗಳು ಮತ್ತು ಬೇಕರಿಗಳಿಂದ ಪಾಸ್ಟ್‌ ಫುಡ್‌ನಿಂದ ಹಿಡಿದು ನೂಡಲ್ಸ್‌ಗಳವರೆಗೆ- ಈ ರೀತಿಯ ಆಹಾರಗಳು ಸಕ್ಕರೆ ಮತ್ತು ಉಪ್ಪಿನ ಕ್ಯಾಲೊರಿಗಳಲ್ಲಿ ಅಧಿಕವಾಗಿರುತ್ತವೆ. ಇದರಿಂದ ತೂಕ ಹೆಚ್ಚಳವಾಗುತ್ತದೆ. ಅನೇಕ ರೋಗಗಳ ಅಪಾಯವನ್ನು ಸಹ ಸೃಷ್ಟಿಯಾಗುತ್ತದೆ..  

ಇದನ್ನೂ ಓದಿ:  ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿಂದ್ರೆ ಒಂದಲ್ಲ ಹಲವಾರು ಆರೋಗ್ಯ ಪ್ರಯೋಜನಗಳಿವೆ

ತೂಕ ನಷ್ಟಕ್ಕೆ ತಿನ್ನಬಹುದಾದ ತಿಂಡಿಗಳು : ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಆರಿಸಿ. ನೀವು ಮಧ್ಯಾಹ್ನ ಕಡಲೆ ಮತ್ತು ಮುಂಗ್ ದಾಲ್‌ ಚಾಟ್ ತಿನ್ನಬಹುದು. ಮಖಾನ ಮತ್ತು ಬೇಯಿಸಿದ ಕಡಲೆಯಂತಹ ಆಹಾರವನ್ನು ಸಹ ಸೇವಿಸಬಹುದು. ಅವು ಹೊಟ್ಟೆಯನ್ನು ತುಂಬಿಸುತ್ತದೆ.. ತೂಕ ನಷ್ಟಕ್ಕೂ ಸಹಾಯ ಮಾಡುತ್ತವೆ. ಹೆಚ್ಚಿನ ಎಣ್ಣೆ, ಮಸಾಲೆಗಳು ಮತ್ತು ಕೊಬ್ಬಿನಾಂಶವಿರುವ ಆಹಾರವನ್ನು ತಪ್ಪಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News