ಪೋಲೀಸರ ದಾಳಿಗೆ 10 ನಕ್ಸಲರ ಸಾವು

    

Last Updated : Mar 2, 2018, 04:13 PM IST
ಪೋಲೀಸರ ದಾಳಿಗೆ 10 ನಕ್ಸಲರ ಸಾವು title=

ನವದೆಹಲಿ: ಛತ್ತೀಸ್ ಗಡ್ ದ  ಬಿಜಾಪುರ ಜಿಲ್ಲೆಯಲ್ಲಿ ಪೊಲೀಸರು ಮತ್ತು ನಕ್ಸಲರ ಜೊತೆ ನಡೆದ ಎನ್ಕೌಂಟರ್ ದಾಳಿಯ ವೇಳೆ 10 ನಕ್ಸಲರು ಮೃತಪಟ್ಟಿದ್ದಾರೆ. ದಾಳಿಯ ನಂತರ ಕಮಾಂಡೋ ಪಡೆಗಳು ಎಕೆ -47, ಎಸ್ಎಲ್ಆರ್ ಮತ್ತು ಐದು ಐಎನ್ಎಸ್ಎಎಸ್ ಬಂದೂಕುಗಳನ್ನು ಒಳಗೊಂಡಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎ ಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಕ್ಸಲರ ಪಾರಮ್ಯಕ್ಕೆ ಪ್ರತಿಯಾಗಿ ಇಂದು ಜಂಟಿ ಕಾರ್ಯಾಚರಣೆ ನಡೆಸಿದ ತೆಲಂಗಾಣ ಮತ್ತು ಛತ್ತೀಸ್ ಗಡ್ ಪೊಲೀಸರು ಬಿಜಾಪುರ್ ಜಿಲ್ಲೆಯ ಪುಜಾರಿ ಕಾಂಕರ್ ಪ್ರದೇಶದಲ್ಲಿ 10 ನಕ್ಸಲರನ್ನು ಗುಂಡಿಕ್ಕಿ ಕೊಂಡಿದ್ದಾರೆ. ನಕ್ಸಲರ ಹತ್ಯೆಯನ್ನು ಉನ್ನತ ಮಟ್ಟದ ಪೋಲಿಸ್ ಅಧಿಕಾರಿಗಳು ಕೂಡ ಧೃಡಪಡಿಸಿದ್ದಾರೆ ಎಂದು ತಿಳಿದು ಬಂದಿದೆ. 

ಫೆಬ್ರವರಿ 26 ರಂದು, ಜಾರ್ಖಂಡ್ನ ಪಲಮು ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಮಹಿಳೆಯರು ಸೇರಿ ನಾಲ್ಕು ನಕ್ಸಲರು ಮೃತಪಟ್ಟಿದ್ದರು. 

Trending News