ಸಾಲವನ್ನು ತೀರಿಸಲು ಈ ವೃದ್ದೆ 'ಸೂಪರ್' ವುಮೆನ್ ಆಗಿದ್ದು ಹೇಗೆ ಗೊತ್ತಾ ? ವೀಡಿಯೋ

   

Last Updated : Jun 15, 2018, 04:16 PM IST
 ಸಾಲವನ್ನು ತೀರಿಸಲು ಈ ವೃದ್ದೆ 'ಸೂಪರ್' ವುಮೆನ್ ಆಗಿದ್ದು ಹೇಗೆ ಗೊತ್ತಾ ? ವೀಡಿಯೋ  title=

ಭೂಪಾಲ್:  ಇಲ್ಲಿನ 72 ವರ್ಷದ ಲಕ್ಷ್ಮಿ ಬಾಯಿ ಎನ್ನುವ ಮಹಿಳೆಯೊಬ್ಬಳ ಕಾರ್ಯವನ್ನು ಕ್ರಿಕೆಟ್ ಜಗತ್ತಿನ ಸ್ಪೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹವಾಗ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಹಾಗಾದ್ರೆ ಈ ಮಹಿಳೆ ಮಾಡುವುದೇನು ಗೊತ್ತಾ ? ಪ್ರತಿದಿನ ಜಿಲ್ಲಾಧಿಕಾರಿ ಕಚೇರಿ ಎದುರುಕುಳಿತುಕೊಂಡು ಯುವಕರು ಕೂಡ ನಾಚುವಂತೆ ಆಕೆ ಟೈಪ್ ರೈಟರ್ ನಲ್ಲಿ ಟೈಪ್ ಮಾಡುತ್ತಿರುವುದನ್ನು ನೋಡಿದ್ದರೆ ನೀವು ನಿಜಕ್ಕೂ ಅಚ್ಚರಿಪಡುತ್ತಿರಿ. ಏಕೆಂದರೆ ಆ ಮಹಿಳೆಯು ಟೈಪ್ ಮಾಡುವ ವೇಗವನ್ನು ನೋಡಿದರೆ ನೀವು ಖಂಡಿತ ಬೆರಗಾಗಲಿದ್ದಿರಿ. ಈ ಟೈಪ್ ಮಾಡುವ ಮಹಿಳೆಯ ವೀಡಿಯೋವೊಂದನ್ನು ಕ್ರಿಕೆಟ್ ಆಟಗಾರ ವೀರೇಂದ್ರ ಸೆಹ್ವಾಗ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಈ ಮಹಿಳೆಯನ್ನು ಸೂಪರ್ ವುಮೆನ್ ಎಂದು ಕರೆದಿದ್ದಾರೆ. 

ಈ ಕುರಿತು ಪ್ರತಿಕ್ರಯಿಸಿ ಟ್ವೀಟ್ ಮಾಡಿರುವ ಅವರು " ಇವಳು ನನಗೆ ಸೂಪರ್ ವುಮೆನ್ , ಈಕೆ ಮಧ್ಯಪ್ರದೇಶ ಸೀಹೊರ್ದಲ್ಲಿ ವಾಸಿಸುತ್ತಾಳೆ. ಇಕೆಯಿಂದ ಯುವಕರು ಕಲಿಯುವುದು ಸಾಕಷ್ಟಿದೆ. ಕೇವಲ ವೇಗದಷ್ಟೇ ಅಲ್ಲ, ಆಕೆಯ ಉತ್ಶಾಹದ ಪಾಠವನ್ನು ಕಲಿಯಬೇಕಾಗಿದೆ. ಆದ್ದರಿಂದ ಯಾವ ಕೆಲಸವು ಕನಿಷ್ಟವಲ್ಲ, ಕಲಿಯಲು ಮತ್ತು ಕೆಲಸ ಮಾಡಲು ಯಾವುದು ದೊಡ್ಡದಲ್ಲ ,ಪ್ರನಾಮ್" ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆಗೆ ಎಎನ್ಐ ಗೆ ಪ್ರತಿಕ್ರಿಯಿಸಿದ ಈ ಮಹಿಳೆ" ನನ್ನ ಮಗಳು ಆಕ್ಸಿಡೆಂಟ್ ಆದ  ನಂತರ ಪಡೆದ ಸಾಲವನ್ನು ತೀರಿಸಲು ಈ ಕೆಲಸವನ್ನು ಮಾಡುತ್ತಿದ್ದೇನೆ,ನಾನು ಯಾರ ಬಳಿಯೂ ಬೇಡಲು ಹೋಗುವುದಿಲ್ಲ. ಈ ಕೆಲಸವನ್ನು ನಾನು ಡಿಸಿ ರಾಘವೇಂದ್ರ ಸಿಂಗ್ ಅವರ ಮೂಲಕ ಪಡೆದೆ, ನನ್ನ ವೀಡಿಯೋವನ್ನು  ವೀರೇಂದ್ರ ಸೆಹವಾಗ್ ಹಂಚಿಕೊಂಡಿರುವುದಕ್ಕೆ  ಖುಷಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

 

Trending News