ಲಖನೌ: ಉತ್ತರ ಪ್ರದೇಶದ ಮುಘಲ್ ಸರೈ ರೈಲು ನಿಲ್ದಾಣವನ್ನು ಪಂಡಿತ್ ಡೇ ದಯಾಳ್ ಉಪಾಧ್ಯಾಯ ಎಂದು ಮರು ನಾಮಕರಣ ಮಾಡಿದ ನಂತರ ಈಗ ಉತ್ತರ ಪ್ರದೇಶ ಸರ್ಕಾರ ಮುಂಬರುವ ದಿನದಲ್ಲಿ, ಕಾನ್ಪುರ್, ಆಗ್ರಾ ಮತ್ತು ಬರೇಲಿಯ ವಿಮಾನ ನಿಲ್ದಾಣಗಳ ಹೆಸರನ್ನು ಸಹ ಮರುನಾಮಕರಣ ಮಾಡಬಹುದೆಂದು ವರದಿಗಳು ತಿಳಿಸಿವೆ.
ಮೊಘಲರಾಯ್ ಜಂಕ್ಷನ್ ಅನ್ನು ಆರ್ಎಸ್ಎಸ್ ನ ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರಿನಲ್ಲಿ ಮರುನಾಮಕರಣ ಮಾಡಲಾಗಿದ್ದು ಈ ಕಾರ್ಯ ಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ, ರೈಲ್ವೇ ಸಚಿವ ಪಿಯೂಷ್ ಗೋಯಲ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿರಲಿದ್ದಾರೆ ಎನ್ನಲಾಗಿದೆ.
ಸಮಾಜವಾದಿ ಪಕ್ಷದ ಸುನೀಲ್ ಸಾಜನ್ ಅವರು ಯೋಗಿ ಆದಿತ್ಯನಾಥ್ ಸರ್ಕಾರವನ್ನು ತರಾಟೆಗೆ ತಗೆದುಕೊಳ್ಳುತ್ತಾ ವಾಸ್ತವದ ಸಮಸ್ಯೆಯಿಂದ ಮರೆಮಾಚಲು ಸರ್ಕಾರ ಈ ಪ್ರಯತ್ನಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಮರುನಾಮಕರಣದ ಬದಲಾಗಿ ವೇಗವಾಗಿ ರೈಲುಗಳು, ಉತ್ತಮ ಟ್ರ್ಯಾಕ್ಗಳನ್ನು ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಫೆಬ್ರವರಿ 1968 ರಲ್ಲಿ ಮುಘಲ್ಸಾರೈ ನಿಲ್ದಾಣದ ಸಮೀಪ ನಿಗೂಢ ರೀತಿಯಲ್ಲಿ ದೀನ ದಯಾಳ್ ಉಪಾಧ್ಯಾಯ ಸಾವನ್ನಪ್ಪಿದ್ದರು. ಈ ಸ್ಥಳ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮಸ್ಥಳವಾಗಿದೆ.