ನವದೆಹಲಿ: ಕೇಂದ್ರ ಭವಿಷ್ಯ ನಿಧಿ ಸಂಘಟನೆಯ ಚಂದಾದಾರರು ರಿಟೈರ್ ಮೆಂಟ್ ವೇಳೆ ರೂ.50,000ವರೆಗೆ ಕೊಡುಗೆಯನ್ನು ಪಡೆಯಬಹುದಾಗಿದೆ. ಈ ಗಿಫ್ಟ್ ಪಡೆಯಲು ನೀವು ನಿಮ್ಮ PF ಖಾತೆಗೆ ಕನಿಷ್ಠ 20 ವರ್ಷ ನಿರಂತರ ಕೊಡುಗೆಯನ್ನು ನೀಡಬೇಕು. ಆದರೆ, EPFO ಬೋರ್ಡ್ ಆಫ್ ಟ್ರಸ್ಟಿಗಳು ಈ ನಿಟ್ಟಿನಲ್ಲಿ ಭಾರಿ ನಿರ್ಣಯವೊಂದನ್ನು ಕೈಗೊಂಡಿದ್ದಾರೆ.
ನೂತನ ನಿಯಮದ ಅನುಸಾರ ಒಂದು ವೇಳೆ ಯಾವುದೇ ಓರ್ವ ಚಂದಾದಾರ 20 ವರ್ಷಗಳ ಅವಧಿಗೂ ಮುನ್ನವೇ ದಿವ್ಯಾಂಗನಾದರೆ, ಅಂತಹ ಸಂದರ್ಭದಲ್ಲಿಯೂ ಕೂಡ ಆತನು ರಿಟೈರ್ಮೆಂಟ್ ವೇಳೆ 50 ಸಾವಿರ ರೂ.ಗಳ ಪರ್ಮನೆಂಟ್ ಲೈಫ್ ಬೆನಿಫಿಟ್ ಕೊಡುಗೆ ಪಡೆಯಬಹುದು. ಇದಲ್ಲದೆ ಒಂದು ವೇಳೆ ಯಾವುದೇ ಕಾರಣದಿಂದ ಕೊಡುಗೆದಾತ ಮರಣಹೊಂದಿದ ಸಂದರ್ಭದಲ್ಲಿಯೂ ಕೂಡ ಆತನ ನಾಮಿನಿಗೆ 2.5ಲಕ್ಷ ರೂ. ನೀಡುವ ಸಲಹೆಯನ್ನೂ ಕೂಡ ನೀಡಲಾಗಿದೆ. ಬೋರ್ಡ್ ಆಫ್ ಟ್ರಸ್ಟಿ, ಎಂಪ್ಲಾಯಿ ಡಿಪಾಸಿಟ್ ಲಿಂಕ್ಡ್ ಬಿಮಾ ಯೋಜನೆಯಲ್ಲಿ ತಿದ್ದುಪಡಿ ಮಾಡುವ ಕುರಿತು ಹೇಳಿಕೆ ನೀಡಿದೆ.
ನಮ್ಮ ಪಾಲುದಾರ ವೆಬ್ಸೈಟ್ ಝೀ-ಬಿಸಿನೆಸ್ ಪ್ರಕಾರ ಸಿಬಿಟಿ, ತನ್ನ 1976ರ EDLI ಯೋಜನೆಯ ಪ್ಯಾರಾ 28 (4) ಅನ್ನು ತಿದ್ದುಪಡಿ ಮಾಡಿದೆ. ಇದರ ಅಡಿಯಲ್ಲಿ ಚಂದಾದಾರರಿಗೆ ಆನ್ಲೈನ್ ನಲ್ಲಿ ವಿನಾಯ್ತಿ ನೀಡಲು ಕೇಂದ್ರ ಭವಿಷ್ಯ ನಿಧಿ ಸಂಸ್ಥೆಯ ಹೆಚ್ಚುವರಿ ಆಯುಕ್ತರಿಗೆ ಅಧಿಕಾರ ನೀಡಲಾಗಿದ್ದು , ಇದರಿಂದ ಸುಮಾರು 25 ಸಾವಿರ ಸಂಸ್ಥೆಗಳ ಲಕ್ಷಾಂತರ ನೌಕರರಿಗೆ ಲಾಭ ಸಿಗಲಿದೆ.
ಅಷ್ಟೇ ಅಲ್ಲ ನೀವು ನಿಮ್ಮ UAN ಸಂಖ್ಯೆಯನ್ನು ಬಳಸಿ ನಿಮ್ಮ ಎಲ್ಲಾ PF ಖಾತೆಗಳನ್ನು ಜೋಡಿಸಬಹುದು. ನೌಕರಿ ಬದಲಾವಣೆಯ ಸಂದರ್ಭದಲ್ಲಿ ನಿಮ್ಮ PF ಹಣವನ್ನು ವರ್ಗಾಯಿಸುವುದು ಇದೀಗ ಮೊದಲಿಗಿಂತಲೂ ಸುಲಭವಾಗಿದೆ. PF ಖಾತೆ ತೆರೆಯುತ್ತಿದ್ದಂತೆ ನಿಮಗೆ ಬೈಡಿಫಾಲ್ಟ್ ವಿಮಾ ಸೌಲಭ್ಯ ಕೂಡ ಸಿಗಲಿದೆ.