ನವದೆಹಲಿ: ದೆಹಲಿ ಮತ್ತು ಕತ್ರಾ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆಗೆ ಚಾಲನೆ ಚಾಲನೆ ನೀಡಲಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಭಾರತದ ಗೃಹ ಸಚಿವರ ಕಚೇರಿ, "ಕೇಂದ್ರ ಗೃಹ ಸಚಿವ, ಶ್ರೀ ಅಮಿತ್ ಶಾ ಅವರು ನವದೆಹಲಿಯಿಂದ ಕದ್ರಾ(ಜೆ & ಕೆ)ದ ಮಾ ವೈಷ್ಣೋ ದೇವಿ ನಡುವೆ ಸಂಚರಿಸಲಿರುವ 'ವಂದೇ ಭಾರತ್ ಎಕ್ಸ್ಪ್ರೆಸ್'ಗೆ ಅಕ್ಟೋಬರ್ 3ರಂದು ಬೆಳಿಗ್ಗೆ 9 ಗಂಟೆಗೆ ಚಾಲನೆ ನೀಡಲಿದ್ದಾರೆ" ಎಂದು ತಿಳಿಸಿದೆ.
Union Home Minister, Shri @AmitShah will Flag off ‘Vande Bharat Express’ from New Delhi to Maa Vaishno Devi, Katra (J&K).
Date: 03 Oct 2019
Time: 9am
Venue: New Delhi Railway Station.— गृहमंत्री कार्यालय, HMO India (@HMOIndia) October 2, 2019
ಭಾರತದ ಸೆಮಿಹೈಸ್ಪೀಡ್ ರೈಲಾದ ವಂದೇ ಭಾರತ್ ಎಕ್ಸ್ಪ್ರೆಸ್ನ ಮೊದಲ ವಾಣಿಜ್ಯ ಸಂಚಾರ ಅಕ್ಟೋಬರ್ 5 ರಂದು ನಡೆಯಲಿದ್ದು, ಇದು ದೆಹಲಿ ಮತ್ತು ಕತ್ರಾ, ವೈಷ್ಣೋ ದೇವಿ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಎಂಟು ಗಂಟೆಗಳಿಗೆ ಕಡಿಮೆಗೊಳಿಸಲಿದೆ. ಈ ಹಿಂದೆ 655 ಕಿ.ಮೀ. ಪ್ರಯಾಣಕ್ಕೆ 12-14 ಗಂಟೆಗಳ ಸಮಯ ಬೇಕಾಗಿತ್ತು.
ವೈಷ್ಣೋ ದೇವಿ ದೇವಾಲಯಕ್ಕೆ ಭೇಟಿ ನಿಡುವ ಯಾತ್ರಿಗಳಿಗೆ ಇದು ಸಿಹಿ ಸುದ್ದಿಯಾಗಿದ್ದು, ಮಂಗಳವಾರ ಹೊರತುಪಡಿಸಿ, ವಾರದ ಎಲ್ಲಾ ದಿನಗಳಂದು ವಂದೇ ಭಾರತ್ ಎಕ್ಸ್ ಪ್ರೆಸ್ ಸಂಚಾರ ನಡೆಸಲಿದೆ. ಈ ರೈಲು ನವದೆಹಲಿ ರೈಲ್ವೆ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 2 ಗಂಟೆಗೆ ಕತ್ರ ತಲುಪಲಿದೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ಕತ್ರಾದಿಂದ ಹಿಂದಿರುಗುವ ಪ್ರಯಾಣವನ್ನು ಪ್ರಾರಂಭಿಸಿ ರಾತ್ರಿ 11 ಗಂಟೆಗೆ ರಾಷ್ಟ್ರ ರಾಜಧಾನಿಯನ್ನು ತಲುಪಲಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ಗಾಗಿ ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ಭಾನುವಾರ ಬುಕ್ಕಿಂಗ್ ತೆರೆಯಲಾಗಿದ್ದು, ಚೇರ್ ಕಾರಿನಲ್ಲಿ ನವದೆಹಲಿಯಿಂದ ಕತ್ರಾಗೆ ಪ್ರಯಾಣಿಸಲು ಕನಿಷ್ಠ ಶುಲ್ಕ 1,630 ರೂ. ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ನ ಶುಲ್ಕ 2,965 ರೂ. ನಿಗದಿಪಡಿಸಲಾಗಿದೆ.