ನವದೆಹಲಿ: ಭಾರತದಲ್ಲಿ ಆಪಲ್ ಐಫೋನ್ 11 ತಯಾರಿಸಲು ಪ್ರಾರಂಭಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಹೇಳಿದ್ದಾರೆ. ಇದು ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಮಹತ್ವದ ಉತ್ತೇಜನ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಸಚಿವ ಪಿಯುಶ್ ಗೋಯಲ್ "ಮೇಕ್ ಇನ್ ಇಂಡಿಯಾಕ್ಕೆ ಗಮನಾರ್ಹ ಉತ್ತೇಜನ! ಆಪಲ್ ಭಾರತದಲ್ಲಿ ಐಫೋನ್ 11 ತಯಾರಿಸಲು ಪ್ರಾರಂಭಿಸಿದೆ, ದೇಶದಲ್ಲಿ ಮೊದಲ ಬಾರಿಗೆ ಉನ್ನತ ಶ್ರೇಣಿಯ ಮಾದರಿಯನ್ನು ತಂದಿದೆ" ಎಂದರು.
ಏತನ್ಮಧ್ಯೆ, ಐಎಎನ್ಎಸ್ ಮೂಲಗಳ ಪ್ರಕಾರ, ತಮ್ಮ ಮಳಿಗೆಗಳನ್ನು ತಲುಪಿದ ಕೆಲವೇ ಕೆಲವು ‘ಅಸೆಂಬ್ಲ್ಡ್ ಇನ್ ಇಂಡಿಯಾ’ ಘಟಕಗಳಿವೆ. ಲಾಕ್ಡೌನ್ ನಿಂದಾಗಿ ಐಫೋನ್ 11 ಯುನಿಟ್ಗಳನ್ನು ಮಾರುಕಟ್ಟೆಗೆ ತಲುಪಲು ವಿಳಂಬವಾಗಿದ್ದರೂ ಈಗ, ಪೂರೈಕೆಯಲ್ಲಿ ಹೆಚ್ಚಳ ಕಂಡುಬಂದಿದೆ. ಯಾವುದೇ ಬೆಲೆ ಕಡಿತವಿಲ್ಲ ಮತ್ತು ಸ್ಥಳೀಯವಾಗಿ ಜೋಡಿಸಲಾದ ಐಫೋನ್ 11 ನಲ್ಲಿನ ಎಂಆರ್ಪಿ ಮೊದಲಿನಂತೆಯೇ ಉಳಿದಿದೆ.ಪ್ರಸ್ತುತ, ಐಫೋನ್ ಎಕ್ಸ್ಆರ್ ಮತ್ತು ಐಫೋನ್ 11 ಅನ್ನು ಫಾಕ್ಸ್ಕಾನ್ ತನ್ನ ಚೆನ್ನೈ ಉತ್ಪಾದನಾ ಘಟಕದಲ್ಲಿ ಜೋಡಿಸುತ್ತಿದ್ದರೆ, ಐಫೋನ್ 7 ಅನ್ನು ಬೆಂಗಳೂರಿನಲ್ಲಿ ವಿಸ್ಟ್ರಾನ್ ಜೋಡಿಸುತ್ತಿದೆ.
ಇದನ್ನೂ ಓದಿ: ಶೀಘ್ರದಲ್ಲಿಯೇ ಅತಿ ಕಡಿಮೆ ಬೆಲೆಗೆ iPhone! ಬೆಲೆ ಕೇಳಿ ನೀವೂ ದಂಗಾಗುವಿರಿ
ಜಾಗತಿಕ ಮೊಬೈಲ್ ಸಾಧನ ತಯಾರಕರನ್ನು ಆಕರ್ಷಿಸಲು ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಸ್ಥಳೀಯ ಕಂಪನಿಗಳನ್ನು ಹೆಚ್ಚಿಸಲು 2020 ರ ಜೂನ್ನಲ್ಲಿ ಸರ್ಕಾರ 50,000 ಕೋಟಿ ರೂ.ಗಳ ಸೃಜನಶೀಲ ಯೋಜನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲು ಪ್ರಾರಂಭಿಸಿತು ಎಂದು ನೆನಪಿಸಿಕೊಳ್ಳಬಹುದು. ಐಟಿ ಮತ್ತು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರು ಭಾರತವು ಆರಂಭದಲ್ಲಿ ಅಗ್ರ 5 ಜಾಗತಿಕ ಮೊಬೈಲ್ ಉತ್ಪಾದನಾ ಕಂಪನಿಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ ಮತ್ತು ಸ್ಕ್ರೀನಿಂಗ್ ಪ್ರಕ್ರಿಯೆಯ ಮೂಲಕ ಗುರುತಿಸಲಾಗುವ ಐದು ಸ್ಥಳೀಯ ಕಂಪನಿಗಳನ್ನು ಉತ್ತೇಜಿಸುತ್ತದೆ.
ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಉತ್ಪಾದನಾ ರಾಷ್ಟ್ರವಾಗಿದ್ದರೆ, ಮತ್ತು ಈಗ ಜಾಗತಿಕವಾಗಿ ಈ ವಿಭಾಗವನ್ನು ಮುನ್ನಡೆಸಲು ಶ್ರಮಿಸುತ್ತಿದೆ ಎಂದು ಸಚಿವರು ಹೇಳಿದರು.ಮುಂದಿನ 2-3 ವರ್ಷಗಳಲ್ಲಿ ಜಾಗತಿಕ ಮೊಬೈಲ್ ಮೇಜರ್ಗಳು ಭಾರತಕ್ಕೆ ಬರಲಿದ್ದು, ಶೀಘ್ರದಲ್ಲೇ ದೇಶವು ಈ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಲಿದೆ ಎಂದು ನಿತಿ ಆಯೋಗ್ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.