ಬೆಂಗಳೂರು : ಮಾಜಿ ಪ್ರಧಾನಿ, ಹಿರಿಯ ರಾಜಕೀಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ವಾಜಪೇಯಿ ಅವರು 'ಅಜಾತ ಶತ್ರು' ಎಂದೇ ಹೆಸರುವಾಸಿಯಾಗಿದ್ದರು. ರಾಜಕಾರಣಿ ಮಾತ್ರವಲ್ಲದೆ, ಅತ್ಯುತ್ತಮ ಕವಿ ಮತ್ತು ಬರಹಗಾರರೂ ಆಗಿದ್ದ ಅವರು ತಮ್ಮ ನಡವಳಿಕೆಯಿಂದಲೇ ಎಲ್ಲರ ಪ್ರೀತಿ ಗಳಿಸಿದ್ದರು. ಎಲ್ಲ ಪಕ್ಷಗಳವರೂ ಅವರನ್ನು ಗೌರವದಿಂದ ಕಾಣುತ್ತಿದ್ದರು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
I am deeply grieved by the sad demise of former PM #AtalBihariVaajpayee He was a respected and humble statesman. His services will always be remembered. I offer my condolences to all his family members and well wishers.@INCKarnataka pic.twitter.com/aSlhOafzps
— Siddaramaiah (@siddaramaiah) August 16, 2018
ವಿಶಾಲ ಹೃದಯಿಗಳಾಗಿದ್ದ ವಾಜಪೇಯಿ ಅವರು, ತಮ್ಮ ಸುದೀರ್ಘ ರಾಜಕೀಯ ಜೀವನದುದ್ದಕ್ಕೂ ಎಲ್ಲರ ಪ್ರೀತಿ ಮತ್ತು ವಿಶ್ವಾಸ ಗಳಿಸುವಂತೆ ನಡೆದುಕೊಂಡ ಮುತ್ಸದ್ದಿ ರಾಜಕಾರಣಿ. ಜನಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು ಅವರು. ಅವರ ನಿಧನದಿಂದ ದೇಶ ಒಬ್ಬ ಸಹೃದಯಿ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರ ಅಗಲಿಕೆ ರಾಷ್ಟ್ರ ರಾಜಕಾರಣಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಕುಟುಂಬದವರು ಹಾಗೂ ಅಭಿಮಾನಿಗಳಿಗೆ ದೊರೆಯಲಿ ಎಂದು ಸಿದ್ದರಾಮಯ್ಯ ಅವರು ಪ್ರಾರ್ಥಿಸಿದ್ದಾರೆ.