ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ಸ್ಮರಣಾರ್ಥವಾಗಿ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಇಂದು ಕಬ್ಬಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಬೆಂ. ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕಣದಲ್ಲಿರುವ ನಿರಂತರ ಗಣೇಶ್ ವತಿಯಿಂದ ಆಯೋಜನೆ ಮಾಡಿದ್ದ ಮೋದಿ ಕಪ್ ಕಬ್ಬಡಿ ಕೂಟಕ್ಕೆ, ಇಪ್ಪತ್ತಕ್ಕೂ ಹೆಚ್ಚು ತಂಡಗಳು ಭಾಗಿಯಾಗಿದ್ದವು. ಒಂದೊಂದು ತಂಡವೂ ಬಲಿಷ್ಠ ಬಲಾಢ್ಯದ ರೀತಿಯಲ್ಲಿ ಆಟವನ್ನ ಆಡಿ ನೆರದಿದ್ದ ಕಬ್ಬಡಿ ಪ್ರಿಯರಿಗೆ ಮನರಂಜನೆ ನೀಡಿದ್ವು.
ಬೆಂಗಳೂರು ಇತಿಹಾಸದಲ್ಲಿ ದಾಖಲಾಗುವ ಯೋಜನೆ ಜಾರಿ ಮಾಡುತ್ತಿದ್ದೇವೆ. ನಾಡಪ್ರಭು ಕೆಂಪೇಗೌಡರ ಹುಟ್ಟೂರು ಬಳಿಯ ಆವತಿ ಸಮೀಪದ ಬೆಟ್ಟ ಹಲಸೂರಿನಲ್ಲಿ ಪಾರ್ಕ್ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಅಜಾತಶತ್ರು, ಮಾಜಿ ಪ್ರಧಾನಿ, ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಚರಿತ್ರೆ ಆಧಾರಿತ ಸಿನಿಮಾವನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಯುತ್ತಿದೆ. ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ರವಿ ಜಾಧವ್ ನಿರ್ದೇಶಿಸಲಿದ್ದಾರೆ. ಭಾರತೀಯ ಜನತಾ ಪಕ್ಷದ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಮತ್ತು ಹಿರಿಯ ನಾಯಕ ವಾಜಪೇಯಿ ಅವರ ಜೀವನ ಪ್ರಯಾಣದ ರೋಚಕ ಕಥೆಯಲ್ಲಿ ಅಟಲ್ ಜೀ ಯವರ ಪಾತ್ರದಲ್ಲಿ ನಟ ಪಂಕಜ್ ತ್ರಿಪಾಠಿ ಅಭಿನಯಿಸಲಿದ್ದಾರೆ.
India's first Atal Study Centre: ಇದರಲ್ಲಿ ಗಾಂಧಿ, ನೆಹರು, ವಾಜಪೇಯಿ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳ ಕುರಿತು ಅಧ್ಯಯನ ನಡೆಸಲಾಗುವುದು. ಆದರೆ, ಈ ಅಧ್ಯಯನ ಯಾವುದೇ ಒಂದು ವಿಚಾರಧಾರೆಗೆ ಬದ್ಧವಾಗಿರುವುದಿಲ್ಲ.
ಭಾರತ್ ರತ್ನ ಪುರಸ್ಕೃತ ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 16 ಆಗಸ್ಟ್ 2018 ರಂದು ತಮ್ಮ 93 ನೇ ವಯಸ್ಸಿನಲ್ಲಿ ನಿಧನರಾದರು. ಬಿಜೆಪಿ ಅವರ ಚಿತಾಭಸ್ಮವನ್ನು ದೇಶದ 100 ನದಿಗಳಲ್ಲಿ ವಿಸರ್ಜನೆ ಮಾಡಿತ್ತು.
ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಈಗ ಮುಜುಗರದ ಸಂಗತಿಯೊಂದು ಎದುರಾಗಿದೆ.ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಚಿತಾಭಸ್ಮ ವಿಸರ್ಜನೆಗೆ ವ್ಯಯಸಿದ್ದ 2.54 ಕೋಟಿ ರೂ.ಗಳ ಬಿಲ್ ನ್ನು ಉ.ಪ್ರದೇಶ ಸರ್ಕಾರ ಇದುವರೆಗೆ ಪಾವತಿಸಿಲ್ಲ ಎನ್ನಲಾಗಿದೆ. ಇದರಿಂದ ಈಗ ಬಿಜೆಪಿ ಸರ್ಕಾರಕ್ಕೆ ಈ ವಿಚಾರ ಸಾಕಷ್ಟು ಇರಿಸು ಮುರಿಸು ಉಂಟು ಮಾಡಿದೆ.
2002 ರ ಗೋಧ್ರಾ ಗಲಭೆ ನಂತರ ಆಗಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪದಚ್ಯುತಿಗೊಳಿಸಲು ಬಯಸಿದ್ದರು ಎಂದು ಮಾಜಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಎಲ್.ಕೆ.ಅಡ್ವಾಣಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅಂತಹ ನಾಯಕರು ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಸ್ಪರ್ಧಿಸುವುದು ನಿಜಕ್ಕೂ ಗೌರವದ ಸಂಗತಿ ಎಂದು ಹೇಳಿದರು.
ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ನೇತೃತ್ವದ ಪಾರ್ಲಿಮೆಂಟ್ಸ್ ಪೋಟ್ರೇಟ್ ಸಮಿತಿಯ ಸಭೆಯಲ್ಲಿ ಡಿಸೆಂಬರ್ 18 ರಂದು ಭಾರತ ರತ್ನ ವಾಜಪೇಯಿ ಅವರ ಭಾವಚಿತ್ರವನ್ನು ಸಂಸತ್ತಿನಲ್ಲಿ ಸ್ಥಾಪಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.