BHU ನಲ್ಲಿ ಪ್ರಾರಂಭವಾಗಲಿದೆ ದೇಶದ ಮೊಟ್ಟಮೊದಲ Atal Study Center

India's first Atal Study Centre: ಇದರಲ್ಲಿ ಗಾಂಧಿ, ನೆಹರು, ವಾಜಪೇಯಿ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳ ಕುರಿತು ಅಧ್ಯಯನ ನಡೆಸಲಾಗುವುದು. ಆದರೆ, ಈ ಅಧ್ಯಯನ ಯಾವುದೇ ಒಂದು ವಿಚಾರಧಾರೆಗೆ ಬದ್ಧವಾಗಿರುವುದಿಲ್ಲ.

Written by - Nitin Tabib | Last Updated : Dec 25, 2020, 10:34 PM IST
  • BHU ನಲ್ಲಿ ಆರಂಭವಾಗಲಿದೆ ಅಟಲ್ ಸ್ಟಡಿ ಸೆಂಟರ್.
  • ಇದು ದೇಶದ ಮೊಟ್ಟಮೊದಲ ಅಟಲ್ ಸ್ಟಡಿ ಸೆಂಟರ್
  • ಈ ಕೇಂದ್ರ ಯಾವುದೇ ಒಂದು ವಿಶಿಷ್ಟ ವಿಚಾರಧಾರೆಯನ್ನು ಬಿಂಬಿಸುವುದಿಲ್ಲ
BHU ನಲ್ಲಿ ಪ್ರಾರಂಭವಾಗಲಿದೆ ದೇಶದ ಮೊಟ್ಟಮೊದಲ Atal Study Center title=
India's first Atal Study Centre (File Photo)

ನವದೆಹಲಿ: India's first Atal Study Centre: ಮಾಜಿ ಪ್ರಧಾನಿ ಭಾರತ್ ರತ್ನ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ದೇಶದ ಮೊದಲ ಅಟಲ್ ಸ್ಟಡೀಸ್ ಸೆಂಟರ್ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪ್ರಾರಂಭವಾಗಲಿದೆ. ಸಮಾಜ ವಿಜ್ಞಾನ ವಿಭಾಗದಲ್ಲಿ ಆರಂಭಗೊಳ್ಳುತ್ತಿರುವ ಈ ಕೇಂದ್ರವು ದೇಶದ ಪ್ರಖ್ಯಾತ ರಾಜಕೀಯ ವ್ಯಕ್ತಿಗಳ ಜೀವನದ ಇತಿಹಾಸ ಮತ್ತು ಅಭಿವೃದ್ಧಿಯ ಬಗ್ಗೆ ಸಂಪೂರ್ಣ ಅಧ್ಯಯನ ಮತ್ತು ಸಂಶೋಧನೆ ನಡೆಸಲಿದೆ. ಈ ಕುರಿತು ಹೇಳಿಕೆ ನೀಡಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಾಮಾಜಿಕ ಅಧ್ಯಯನ ವಿಭಾಗದ ದೀನ್ ಪ್ರೊಫೆಸರ್. ಕೌಶಲ್ ಕಿಶೋರ್ ಮಿಶ್ರಾ, ಭಾರತದ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಅಧ್ಯಯನ ಕೇಂದ್ರ ತೆರೆಯಲಾಗುವುದು ಎಂದು ಹೇಳಿದ್ದಾರೆ. ಈ ಕೇಂದ್ರದಲ್ಲಿ ಒಂದು ಡಜನ್ ಗೂ ಅಧಿಕ ವಿಷಯಗಳ ಅಧ್ಯಯನ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಈ ವ್ಯಕ್ತಿಗಳ ಕುರಿತು ಅಧ್ಯಯನ ನಡೆಸಲಾಗುವದು
ಅಟಲ್ ಅಧ್ಯಯನ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಜೊತೆಗೆ ಮೋದಿ, ಯೋಗಿವರೆಗಿನ ರಾಜಕೀಯ, ಪ್ರಾಚೀನ ಭಾರತದ ರಾಜಕೀಯ ಚಿಂತನೆ, ಆಧುನಿಕ ರಾಜಕೀಯ ಚಿಂತನೆ. ಭಾರತೀಯ ರಾಜಕೀಯದ ಚಿಂತನಾ ಶೈಲಿ, ರಾಷ್ಟ್ರಧರ್ಮ, ಹಿಂದುತ್ವ, ಪುರುಷಾರ್ಥ, ಪ್ರಜಾತಂತ್ರ, ಸಂವಿಧಾನ, ಉದ್ಯೋಗ ಕೌಶಲ್ಯ ಶೈಲಿ, ಭಾರತೀಯ ರಾಜಕೀಯ ಚಿಂತನಾ ಶೈಲಿ, ಸ್ವತಂತ್ರ ಭಾರತದ ವಿಕಾಸ ಯಾತ್ರೆ, ಸಾಂಸ್ಕೃತಿಕ ರಾಷ್ಟ್ರವಾದ ಇತ್ಯಾದಿ ವಿಷಯಗಳ ಮೇಲೆ ಸಂಶೋಧನೆ ನಡೆಸಲಾಗುವುದು. ಇದು ದೇಶದ ಮೊದಲ ಉದ್ದೇಶಿತ ಕೇಂದ್ರವಾಗಿರಲಿದೆ.

ಇದನ್ನು ಓದಿ- ರೈತರ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರದಿಂದ ಮತ್ತೆ ಬರಲಿದೆ ಹಣ: ಯಾಕೆ? ಇಲ್ಲಿದೆ ಮಾಹಿತಿ

ಈ ಪ್ರಕ್ರಿಯೆಯಿಂದ ಆರಂಭಗೊಳ್ಳಲಿದೆ
ಕೇಂದ್ರದ ಕುರಿತು ಮಾಹಿತಿ ನೀಡಿರುವ ಪ್ರೊ.ಶರ್ಮಾ ವಿಭಾಗ ಮಟ್ಟದಲ್ಲಿ ಸೆಂಟರ್ ಫಾರ್ ಅಟಲ್ (Atal Bihari Vajpayee) ಸ್ಟಡೀಸ್ ನ ಫಾರ್ಮ್ಯಾಟ್ ತಯಾರಿಸಲಾಗುವುದು. ಬಳಿಕ ಅದನ್ನು ನೀತಿ ರೂಪಿಸುವ ಸಮಿತಿಗೆ ತರಲಾಗುವುದು. ಬಳಿಕ ಅಕಾಡೆಮಿಕ್ ಕೌನ್ಸಲಿಂಗ್ ನಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು. ಬಳಿಕ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಮೊದಲ ಅಧ್ಯಯನ ಕೇಂದ್ರ ಆರಂಭಗೊಂಡ ಬಳಿಕ ಇದರಲ್ಲಿ ವಿವಿಧ ವಿಷಯಗಳ ಕುರಿತು ಅಧ್ಯಯನ ನಡೆಸಲಾಗುವುದು. ಮುಂದಿನ ವರ್ಷದ ಫೆಬ್ರುವರಿ ಈ ಕೇಂದ್ರ ಆರಂಭಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ-ಎಡಭಾಗಕ್ಕೆ ಸೆರಗು ಹಾಕಿ ಸೀರೆ ಉಡುವ ಕ್ರಮ ಹುಟ್ಟಿದ್ದು ಹೇಗೆ : ರೋಚಕ ಕಥೆ ಹೇಳಿದ ಮೋದಿ

ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಭಾರತದ ಜ್ಞಾನ ಪರಂಪರೆಯನ್ನು ಆರಂಭಿಸುವುದು ಹಾಗೂ ಯುವಕರನ್ನು ಪ್ರೇರೇಪಿಸುವುದು ಈ ಅಧ್ಯಯನ ಕೇಂದ್ರದ ಉದ್ದೇಶವಾಗಿರಲಿದೆ ಎಂದು ಕೌಶಲ್ ಕಿಶೋರ್ ಹೇಳಿದ್ದಾರೆ. ಅಷ್ಟೇ ಅಲ್ಲ ಯಾವುದೇ ಒಂದು ವಿಚಾರಧಾರೆಯನ್ನು ಈ ಕೇಂದ್ರ ಬಿಂಬಿಸುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News