ನವದೆಹಲಿ: ರಾಜಕೀಯವಾಗಿ ಮತ್ತು ಧಾರ್ಮಿಕವಾಗಿ ದಶಕಗಳಷ್ಟು ಹಳೆಯದಾದ ಅಯೋಧ್ಯೆಯಲ್ಲಿನ ದೇವಾಲಯ-ಮಸೀದಿ ಭೂ ವಿವಾದದ ವಿಚಾರಣೆಯು ಸುಪ್ರೀಂಕೋರ್ಟ್ನ ಇತಿಹಾಸದಲ್ಲಿ 40 ದಿನಗಳ ಕಾಲ ನಡೆದ ಎರಡನೇ ಅತಿ ಸುಧೀರ್ಘ ವಿಚಾರಣೆಯಾಗಿದೆ.
2.77 ಎಕರೆ ಭೂಮಿಯನ್ನು ಒಳಗೊಂಡ ರಾಮ್ ಜನ್ಮಭೂಮಿ-ಬಾಬರಿ ಮಸೀದಿ ವಿವಾದದಲ್ಲಿನ ಹೈವೋಲ್ಟೇಜ್ ವಿಚಾರಣೆಯು ಆಗಸ್ಟ್ 6 ರಂದು ಪ್ರಾರಂಭವಾಗಿ ಮತ್ತು ಅಕ್ಟೋಬರ್ 16 ರಂದು ಮುಕ್ತಾಯಗೊಂಡಿತು ಮತ್ತು ಸುಪ್ರೀಂಕೋರ್ಟ್ ನವೆಂಬರ್ 9 ರಂದು ಅಂತಿಮ ತೀರ್ಪನ್ನು ಪ್ರಕಟಿಸಿತು.
ಸುಪ್ರೀಂಕೋರ್ಟ್ ನೀಡಿದ ಸರ್ವಾನುಮತದ ತೀರ್ಪಿನಲ್ಲಿ ನ್ಯಾಯಾಲಯವು ವಿವಾದಿತ ಸ್ಥಳದಲ್ಲಿ ರಾಮ್ ದೇವಾಲಯ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು ಮತ್ತು ಮಸೀದಿ ನಿರ್ಮಿಸಲು ಸುನ್ನಿ ವಕ್ಫ್ ಮಂಡಳಿಗೆ 5 ಎಕರೆ ಜಾಗವನ್ನು ನೀಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತು. ಆ ಮೂಲಕ ಸುಮಾರು ಒಂದು ಶತಮಾನಕ್ಕೂ ಹಳೆದಾದ ವಿವಾದಕ್ಕೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ 5 ನ್ಯಾಯಾಧೀಶರ ಸಂವಿಧಾನ ಪೀಠ ಕೊನೆ ಹಾಡಿತು.
ಭಾರತದ ನ್ಯಾಯಾಂಗದ ಇತಿಹಾಸದಲ್ಲಿ ಅಯೋಧ್ಯೆ ಪ್ರಕರಣದ ವಿಚಾರಣೆ ಎರಡನೇ ಅತಿ ಸುದೀರ್ಘ ವಿಚಾರಣೆಯಾಗಿದೆ. ಇದಕ್ಕೂ ಮೊದಲು 1973 ರಲ್ಲಿನ ಕೇಶ್ವಾನಂದ್ ಭಾರತಿ ಪ್ರಕರಣದ ವಿಚಾರಣೆ 68 ದಿನಗಳವರೆಗೆ ನಡೆದಿತ್ತು, ಈ ಪ್ರಕರಣವು ಪ್ರಮುಖವಾಗಿ ಸಂವಿಧಾನದ ಮೂಲ ರಚನೆ ಕುರಿತಾಗಿ ನಡೆದಿದ್ದನ್ನು ನಾವು ಗಮನಿಸಬಹುದು.