Bharat Bandh: ನಾಳೆ ಭಾರತ್ ಬಂದ್, ಯಾವ ಸೇವೆಗಳ ಮೇಲೆ ಪರಿಣಾಮ ತಿಳಿಯಿರಿ

Bharat Bandh by Farmers: ಹೊಸ ಕೃಷಿ ಕಾನೂನುಗಳಿಗೆ  (New Agriculture Laws) ವಿರುದ್ಧವಾಗಿ ಮಾರ್ಚ್ 26 ರಂದು ಭಾರತ್ ಬಂದ್ ಸಮಯದಲ್ಲಿ ರಸ್ತೆ ಮತ್ತು ರೈಲು ಸಾರಿಗೆ, ಮಾರುಕಟ್ಟೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಮುಚ್ಚಲಾಗುವುದು.  

Written by - Yashaswini V | Last Updated : Mar 25, 2021, 02:45 PM IST
  • ದೆಹಲಿ ಗಡಿಗಳಲ್ಲಿ ಕಳೆದ ನಾಲ್ಕು ತಿಂಗಳಿನಿಂದ ನಡೆಯುತ್ತಿರುವ ರೈತರ ಹೋರಾಟ
  • ಹೊಸ ಕಾನೂನುಗಳನ್ನು ಕೈಬಿಡುವಂತೆ ಪಟ್ಟು ಹಿಡಿದ ರೈತ ಸಂಘಟನೆಗಳು
  • ಕಾನೂನುಗಳ ಲೋಪದೋಷಗಳನ್ನು ಚರ್ಚಿಸುವ ಮೂಲಕ ತಿದ್ದುಪಡಿಗೆ ಸಿದ್ಧವಾಗಿರುವ ಸರ್ಕಾರ
Bharat Bandh: ನಾಳೆ ಭಾರತ್ ಬಂದ್, ಯಾವ ಸೇವೆಗಳ ಮೇಲೆ ಪರಿಣಾಮ ತಿಳಿಯಿರಿ title=
Bharat Bandh on 26th March

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಎಲ್ಲಾ ಗಡಿಗಳಲ್ಲಿ ಸುಮಾರು ನಾಲ್ಕು ತಿಂಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು ನಾಳೆ ಎಂದರೆ ಮಾರ್ಚ್ 26ರಂದು ಸಂಪೂರ್ಣ ಭಾರತ ಬಂದ್‌ಗೆ ಕರೆ ನೀಡಿದ್ದಾರೆ.  ರೈತರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮಾರ್ಚ್ 26 ರಂದು ಭಾರತ್ ಬಂದ್ ಅನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸುವಂತೆ ದೇಶದ ನಾಗರಿಕರಿಗೆ ಮನವಿ ಮಾಡಿದೆ. 

ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಭಾರತ ಬಂದ್:
ಸುದ್ದಿ ಸಂಸ್ಥೆ ಪಿಟಿಐ ನೀಡಿದ ವರದಿಯ ಪ್ರಕಾರ, ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮಾರ್ಚ್ 26 ರಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ರೈತರಿಂದ ಭಾರತ್ ಬಂದ್‌ಗೆ ಕರೆ ನೀಡಿದೆ. ಈ ಸಮಯದಲ್ಲಿ, ದೇಶಾದ್ಯಂತ ರಸ್ತೆ ಮತ್ತು ರೈಲು ಸಾರಿಗೆ, ಮಾರುಕಟ್ಟೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಆದಾಗ್ಯೂ, ಎಲ್ಲಾ ತುರ್ತು ಆರೋಗ್ಯ ಸೇವೆಗಳು ಬಂದ್ ಸಮಯದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ತಿಳಿದುಬಂದಿದೆ.

ರೈತ ಮುಖಂಡ ದರ್ಶನ್ ಪಾಲ್ ಮಾತನಾಡಿ, 'ಭಾರತ್ ಬಂದ್ (Bharat Bandh) ಅನ್ನು ಯಶಸ್ವಿಗೊಳಿಸಿ ಅನ್ನದಾತ'ರಿಗೆ ಬೆಂಬಲ ಸೂಚಿಸುವಂತೆ ದೇಶದ ಜನರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ - Farmers Protest ಪ್ರತಿಷ್ಠೆ ಆಗಬಾರದು, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು: ಎಚ್.ಡಿ. ದೇವೇಗೌಡ

ದೆಹಲಿ ಗಡಿಯಲ್ಲಿ ನಾಲ್ಕು ತಿಂಗಳಿನಿಂದ ನಡೆಯುತ್ತಿರುವ ರೈತರ ಹೋರಾಟ: 
ಹೊಸ ಕೃಷಿ ಕಾನೂನುಗಳ  (New Agriculture Laws) ವಿರುದ್ಧ ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ ನವೆಂಬರ್ 26 ರಂದು ಪ್ರಾರಂಭವಾಯಿತು. ಮಾರ್ಚ್ 26 ರಂದು ರೈತರ ಪ್ರತಿಭಟನೆ ನಾಲ್ಕು ತಿಂಗಳನ್ನು ಪೂರೈಸುತ್ತಿದೆ. ದೆಹಲಿಯ ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ ರೈತರು ಕ್ಯಾಂಪ್ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಸರ್ಕಾರದೊಂದಿಗೆ ಹಲವಾರು ಸುತ್ತಿನ ಮಾತುಕತೆ ನಡೆಸಲಾಗಿದ್ದರೂ ಇನ್ನೂ ಸಮಸ್ಯೆ ಬಗೆಹರಿದಿಲ್ಲ. ರೈತ ಸಂಘಟನೆಗಳು ಹೊಸ ಕಾನೂನುಗಳನ್ನು ಕೈಬಿಡುವಂತೆ ಪಟ್ಟು ಹಿಡಿದಿದ್ದರೆ, ಕಾನೂನುಗಳ ಲೋಪದೋಷಗಳನ್ನು ಚರ್ಚಿಸುವ ಮೂಲಕ ಸರ್ಕಾರ ತಿದ್ದುಪಡಿಗೆ ಸಿದ್ಧವಾಗಿದೆ. ಇದರೊಂದಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ನೀಡಬೇಕು ಎಂಬ ರೈತರ ಬೇಡಿಕೆಯಿದೆ.

ಹೋಳಿ ದಹನದ ಸಮಯದಲ್ಲಿ ಹೊಸ ಕೃಷಿ ಕಾನೂನುಗಳ ನಕಲನ್ನು ಸುಡಲು ರೈತರ ನಿರ್ಧಾರ:
ಈ ಮೊದಲು, ರೈತ ಮುಖಂಡ ಬುಟಾ ಸಿಂಗ್ ಬುರ್ಜ್‌ಗಿಲ್, 'ಹೊಸ ಕೃಷಿ ಕಾನೂನುಗಳ ವಿರುದ್ಧ ನಾಲ್ಕು ತಿಂಗಳ ಪ್ರತಿಭಟನೆಯ ನಂತರ ನಾವು ಮಾರ್ಚ್ 26 ರಂದು ನಾವು ಭಾರತ್ ಬಂದ್‌ಗೆ ಕರೆ ನೀಡಿದ್ದೇವೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ. ಇದರೊಂದಿಗೆ ಮಾರ್ಚ್ 28 ರಂದು ನಡೆಯುವ 'ಹೋಳಿಕಾ ದಹನ್' ಸಂದರ್ಭದಲ್ಲಿ ಕೃಷಿ ಕಾನೂನುಗಳ ನಕಲಿ ಪ್ರತಿಗಳನ್ನು ಸುಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ - Agriculture Laws - ಕೃಷಿ ಕಾನೂನುಗಳನ್ನು ಮುಕ್ತ ಕಂಠದಿಂದ ಹೊಗಳಿದ IMF...ಹೇಳಿದ್ದೇನು?

ಭಾರತ್ ಬಂದ್‌ಗೆ ವೈಎಸ್ಆರ್ ಕಾಂಗ್ರೆಸ್ ಬೆಂಬಲ: 
ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ (YSRCP) ಮಾರ್ಚ್ 26 ರಂದು ರೈತರು ಕರೆ ನೀಡಿರುವ ಭಾರತ್ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದೆ. 

ಮಾರ್ಚ್ 26 ರಂದು ಭಾರತ್ ಬಂದ್: ಏನಿದೆ? ಏನಿಲ್ಲ? 
ವಿಧಾನಸಭಾ ಚುನಾವಣೆಗಳು ನಡೆಯಲಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಮಾರ್ಚ್ 26 ರಂದು ಭಾರತ್ ಬಂದ್‌ನಿಂದ ವಿನಾಯಿತಿ ನೀಡಲಾಗುವುದು ಎಂದು ರೈತ ಸಂಘ ಸ್ಪಷ್ಟಪಡಿಸಿದೆ. ತುರ್ತು ಸೇವೆಗಳಿಗೆ ತೊಂದರೆಯಾಗುವುದಿಲ್ಲ ಔಷಧದ ಲಭ್ಯತೆ, ಹಾಲು ಪೂರೈಕೆ, ಆಂಬ್ಯುಲೆನ್ಸ್ ಮತ್ತು ಆಸ್ಪತ್ರೆ ಸೇವೆಗಳಂತಹ ತುರ್ತು ಸೇವೆಗಳಿಗೆ ಯಾವುದೇ ಪರಿಣಾಮ ಬೀರುವುದಿಲ್ಲ. 

ಎಲ್ಲಾ ರಸ್ತೆ ಮತ್ತು ರೈಲು ಸಾರಿಗೆ, ಮಾರುಕಟ್ಟೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ದೇಶಾದ್ಯಂತ ಮುಚ್ಚಲಾಗುವುದರಿಂದ ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬ್ಯಾಂಕಿಂಗ್ ಸೇವೆಗಳಿಗೆ ತೊಂದರೆಯಾಗುವುದು ಬ್ಯಾಂಕಿಂಗ್ ಸೇವೆಗಳಾದ ಠೇವಣಿ ಮತ್ತು ವಾಪಸಾತಿ ಮತ್ತು ಚೆಕ್ ಕ್ಲಿಯರಿಂಗ್ ಮುಷ್ಕರದಿಂದಾಗಿ ಪರಿಣಾಮ ಬೀರುವ ಸಾಧ್ಯತೆಯಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News