ಬಿಜೆಪಿ-ಆರ್‌ಎಸ್‌ಎಸ್ ದಲಿತ ವಿರೋಧಿಗಳು, ಮೀಸಲಾತಿ ಅಂತ್ಯಗೊಳಿಸಲು ಪ್ರಯತ್ನಿಸುತ್ತಿವೆ: ಕಾಂಗ್ರೆಸ್

ಬಿಜೆಪಿ-ಆರ್‌ಎಸ್‌ಎಸ್ ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ವಿರೋಧಿಸುತ್ತವೆ. ಯಾವುದೇ ಕಾರಣಕ್ಕೂ ದಲಿತರ ಪ್ರಗತಿಯನ್ನು ಬಯಸುವುದಿಲ್ಲ. ಮೀಸಲಾತಿಯನ್ನು ಕೊನೆಗೊಳಿಸಲು ಅವರು ಯೋಜಿತ ಪಿತೂರಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪಿ.ಎಲ್ ಪುನಿಯಾ ಹೇಳಿದ್ದಾರೆ.

Last Updated : Aug 19, 2019, 06:57 PM IST
ಬಿಜೆಪಿ-ಆರ್‌ಎಸ್‌ಎಸ್ ದಲಿತ ವಿರೋಧಿಗಳು, ಮೀಸಲಾತಿ ಅಂತ್ಯಗೊಳಿಸಲು ಪ್ರಯತ್ನಿಸುತ್ತಿವೆ: ಕಾಂಗ್ರೆಸ್ title=

ನವದೆಹಲಿ: ಮೀಸಲಾತಿ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯನ್ನು ಸೋಮವಾರ ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್, ಬಿಜೆಪಿ ಮತ್ತು ಆರ್‌ಎಸ್‌ಎಸ್ 'ದಲಿತ ವಿರೋಧಿ' ಮತ್ತು ಸಂವಿಧಾನದಲ್ಲಿನ ದುರ್ಬಲ ವರ್ಗದವರಿಗೆ ಮೀಸಲಾತಿ ಅವಕಾಶಗಳನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

"ಬಿಜೆಪಿ-ಆರ್‌ಎಸ್‌ಎಸ್ ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ವಿರೋಧಿಸುತ್ತವೆ. ಯಾವುದೇ ಕಾರಣಕ್ಕೂ ದಲಿತರ ಪ್ರಗತಿಯನ್ನು ಬಯಸುವುದಿಲ್ಲ. ಮೀಸಲಾತಿಯನ್ನು ಕೊನೆಗೊಳಿಸಲು ಅವರು ಯೋಜಿತ ಪಿತೂರಿ ನಡೆಸಿದ್ದಾರೆ. ಚರ್ಚೆಯ ಆರಂಭದಲ್ಲೇ ಇದನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮನಸ್ಥಿತಿಯನ್ನು ತೀವ್ರವಾಗಿ ಖಂಡಿಸುತ್ತೇನೆ" ಎಂದು ಕಾಂಗ್ರೆಸ್ ನಾಯಕ ಪಿ.ಎಲ್ ಪುನಿಯಾ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಾಮಾಜಿಕ-ಆರ್ಥಿಕ ಅಸಮಾನತೆಯು ಒಂದು ಸವಾಲು ಎಂದೇ ನಂಬಿದ್ದರು. ಅದೇ ಕಾರಣಕ್ಕಾಗಿ ಮೀಸಲಾತಿಯನ್ನು ಜಾರಿಗೆ ತರಲಾಯಿತು. ಆದರೆ ಆರಂಭದಿಂದಲೂ ಸಂವಿಧಾನವನ್ನು ಬದಲಾಯಿಸಲು ಪ್ರಯತ್ನಿಸುತ್ತಿರುವ ಬಿಜೆಪಿ, ಈಗ ಮಾತ್ರ ಮೀಸಲಾತಿ ಬಗ್ಗೆ ಚರ್ಚಿಸಲು ಮುಂದಾಗಿದೆ" ಎಂದು ಅವರು ಹೇಳಿದರು.

ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಮೀಸಲಾತಿ ಕುರಿತು, ಮೀಸಲಾತಿ ಪರವಾಗಿರುವವರು ಮತ್ತು ಅದರ ವಿರುದ್ಧ ಇರುವವರ ನಡುವೆ 'ಸಾಮರಸ್ಯದ ವಾತಾವರಣದಲ್ಲಿ' ಚರ್ಚೆ ನಡೆಯಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದರು.

Trending News