ಜೈಪುರ್: ಸೆನ್ಸಾರ್ ಮಂಡಳಿಯ ಮುಖ್ಯಸ್ಥ ಮತ್ತು ಗೀತ ರಚನೆಕಾರ ಪ್ರಸೂನ್ ಜೋಶಿ ಈ ಬಾರಿಯ ಜೈಪುರ್ ಸಾಹಿತ್ಯೋತ್ಸವಕ್ಕೆ ಗೈರು ಹಾಜರಾಗಲಿದ್ದಾರೆ.
28 ರ ಭಾನುವಾರದಂದು ಮೈ ಏರ್ ವೋ ಎನ್ನುವ ಗೋಷ್ಠಿಯಲ್ಲಿ ಭಾಗವಹಿಸಬೇಕಾಗಿದ್ದ ಅವರು ಪದ್ಮಾವತ್ ಚಿತ್ರಕ್ಕೆ ಹಸಿರು ನಿಶಾನೆ ತೋರಿಸಿದ ಸೆನ್ಸಾರ್ ಮಂಡಳಿಯ ನಿರ್ಧಾರಕ್ಕೆ ಅಸಮಾಧಾನಗೊಂಡಿರುವ ಕರನಿ ಸೇನಾ ಸಂಘಟನೆಯು ಒಂದು ವೇಳೆ ಪ್ರಸೂನ್ ಜೋಶಿ ಈ ಕಾರ್ಯಕ್ರಮಕ್ಕೆ ಬಂದಿದ್ದಾದರೆ ಅವರಿಗೆ ಕಪ್ಪು ಬಾವುಟದ ಪ್ರದರ್ಶನ ತೋರಿಸಲಾಗುವುದು ಎಂದು ಹೇಳಿದ್ದಾರೆ. ಇದರಿಂದಾಗಿ ಈ ಕಾರ್ಯಕ್ರಮಕ್ಕೆ ತೊಂದರೆಯುಂಟಾಗಬಾರೆಂದು ಮುಂಜಾಗ್ರತವಾಗಿ ಜೋಶಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತಾಗಿ ಮಾಧ್ಯಮಕ್ಕೆ ತಮ್ಮ ಹೇಳಿಕೆ ನೀಡಿರುವ ಅವರು " ಈ ಕಾರ್ಯಕ್ರಮಕ್ಕೆ ಇತರರಿಗೆ ತೊಂದರೆಯಾಗಬಾರದೆನ್ನುವ ಕಾರಣದಿಂದಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ, ಆ ಮೂಲಕ ಸಾಹಿತ್ಯ ಪ್ರೇಮಿಗಳು ಸೃಜನಶೀಲತೆಗೆ ಹೆಚ್ಚು ಒತ್ತು ನೀಡಬೇಕೇ ಹೊರತು ವಿವಾದಕ್ಕಲ್ಲ" ಎಂದು ತಿಳಿಸಿದ್ದಾರೆ. ರಾಜಸ್ತಾನ್, ಗುಜರಾತ್, ಮದ್ಯಪ್ರದೇಶ, ಗುಜರಾತ್ ನಲ್ಲಿ ಪದ್ಮಾವತ್ ಚಿತ್ರದ ಬಿಡುಗಡೆಗೆ ಸಾಕಷ್ಟು ವಿರೋಧವಾಗಿ ಅದು ಹಿಂಸಾಚಾರಕ್ಕೆ ಕಾರಣವಾಗಿತ್ತು. ಆದ್ದರಿಂದ ಮುಂಜಾಗ್ರತ ಕ್ರಮವಾಗಿ ಜೈಪುರ್ ಸಾಹಿತ್ಯೋತ್ಸವಕ್ಕೆ ಅವರು ಗೈರು ಹಾಜರಾಗಲಿದ್ದಾರೆ, ಎಂದು ತಿಳಿದುಬಂದಿದೆ.