ತಿರುಪತಿ: ತಿರುಪತಿ ದೇವಸ್ಥಾನ(TTD)ದಲ್ಲಿ ಹೆಚ್ಚಿನ ಸಂಖ್ಯೆಯ ಸಿಬ್ಬಂಧಿಗಳು ಕರೋನಾ ಪಾಸಿಟಿವ್ ಎಂದು ತಿಳಿದುಬಂದಿದೆ. ಕೊರೊನಾ ಲಾಕ್ ಡೌನ್ ಬಳಿಕ ಇದೆ ಮೊದಲಬಾರಿಗೆ ಭಕ್ತರ ದರುಶನಕ್ಕಾಗಿ ತಿರುಪತಿ ದೇವಸ್ಥಾನವನ್ನು ತೆರೆಯಲಾಗಿದೆ.. ತಿರುಮಲ ತಿರುಪತಿ ದೇವಸ್ತಾನಂನಲ್ಲಿ ಇದುವರೆಗೆ 743 ಸಿಬ್ಬಂಧಿಗಳು ಕರೋನಾ ಸೋಂಕಿಗೆ ಒಳಗಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರ್ವ TTD ಅಧಿಕಾರಿ ಅನೀಲ್ ಕುಮಾರ್ ಸಿಂಗ್, ಜೂನ್ 11ರ ಬಳಿಕ ಭಕ್ತಾದಿಗಳ ದರ್ಶನಕ್ಕಾಗಿ ದೇವಸ್ಥಾನವನ್ನು ತೆರೆಯಲಾತಿತ್ತು. ಜೂನ್ 11 ರಿಂದ ಇದುವರೆಗೆ ಸುಮಾರು 743 ಸಿಬ್ಬಂದಿಗಳು ಕೊರೊನಾ ಪಾಸಿಟಿವ್ ಕಂಡುಬಂದಿದ್ದಾರೆ. ಅಷ್ಟೇ ಅಲ್ಲ ಇವರಲ್ಲಿ ಸುಮಾರು 402 ಸಿಬ್ಬಂದಿಗಳು ಗುಣಮುಖರಾಗಿ ತಮ್ಮ-ತಮ್ಮ ಕೆಲಸಕ್ಕೆ ಮರಳಿದ್ದಾರೆ. ಸದ್ಯ ಸುಮಾರು 338 ಸಿಬ್ಬಂದಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರನ್ನು TTDಯ ವಿವಿಧ ವಿಶ್ರಾಂತಿ ಗೃಹಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ದೇವಸ್ಥಾನದ ಶ್ರಿನಿವಾಸಂ, ವಿಷ್ಣುನಿವಾಸಂ ಹಾಗೂ ಮಾಧವ ವಿಶ್ರಾಂತಿ ಗೃಹಗಳಲ್ಲಿ ಸಿಬ್ಬಂದಿಗಳಿಗಾಗಿ ಕೊವಿಡ್ ಸೆಂಟರ್ ನಿರ್ಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ದೇವಸ್ಥಾನದ ಸಿಬ್ಬಂದಿಗಳಿಗೆ ಅತ್ಯುತ್ತಮ ಸೌಕರ್ಯಗಳನ್ನು ಒದಗಿಸುವ ಪ್ರಯತ್ನ ನಡೆಸಲಾಗುತ್ತಿದ್ದು, ಇದುವರೆಗೆ ಕೊರೊನಾ ಸೋಂಕಿನಿಂದ ಒಟ್ಟು ಮೂವರು ಮೃತಪಟ್ಟಿದ್ದಾರೆ ಎಂದು ಅನಿಲ್ ಕುಮಾರ್ ಹೇಳಿದ್ದಾರೆ. ಜೊತೆಗೆ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಚಾಚುತಪ್ಪದೆ ಪಾಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಜೂನ್ 11 ರಂದು ಕೊರೊನಾ ಲಾಕ್ ಡೌನ್ ಬಳಿಕ ದೇವಸ್ಥಾನವನ್ನು ಭಕ್ತಾದಿಗಳ ದರ್ಶನಕ್ಕೆ ಪುನಃ ತೆರೆಯಲಾಗಿತ್ತು.
ಕೊರೊನಾ ವೈರಸ್ ಪ್ರಭಾವವನ್ನು ಕಡಿಮೆ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ಕೈಗೊಂಡ ಕ್ರಮಗಳಿಗೆ ಆರಂಭದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ಆದರೆ, ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಹಣಗಳಿಕೆಗಾಗಿ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿದೆ ಎಂಬ ಆರೋಪಗಳು ಕೇಳಿಬಂದವು. ಆದರೆ, ಭಕ್ತಾದಿಗಳಿಂದ ಹರಿದು ಬಂದ ಹಣವನ್ನು ಭಕ್ತಾದಿಗಳ ಸುರಕ್ಷತೆಗಾಗಿಯೇ ವಿನಿಯೋಗಿಸಲಾಗಿದ್ದು, ಇದೀಗ ಭಕ್ತಾದಿಗಳೂ ಕೂಡ ವ್ಯವಸ್ಥೆಯಿಂದ ಸಂತುಷ್ಟರಾಗಿದ್ದಾರೆ ಎಂದು ಅನಿಲ್ ಕುಮಾರ್ ಹೇಳಿದ್ದಾರೆ.