Coronavirus data latest update 22 December : ವರ್ಷವು ಕೊನೆಗೊಳ್ಳಲಿದೆ. ಆದರೆ ಕರೋನಾ ಸಮಸ್ಯೆ ಕೊನೆಗೊಳ್ಳುತ್ತಿಲ್ಲ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಗಳು ಇನ್ನೇನು ನಮ್ಮ ಮುಂದಿವೆ. ಇದಕ್ಕೂ ಮುನ್ನ, ಕರೋನಾ ಜೆಎನ್.1 ರ ಹೊಸ ಉಪ-ರೂಪಾಂತರವು ದೇಶಕ್ಕೆ ಕಾಲಿಟ್ಟಿದೆ. ಕರೋನಾ ಜೆಎನ್.1 ರೂಪಾಂತರ ಪತ್ತೆಯಾದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅಲರ್ಟ್ ನೀಡಲಾಗಿದೆ. ಈ ರೂಪಾಂತರವು ಕರೋನಾದ ನಾಲ್ಕನೇ ಅಲೆ ಎನ್ನುವ ಭಯ ಜನ ಸಾಮಾನ್ಯರನ್ನು ಕಾಡುತ್ತಿದೆ. ಆದರೆ, ವೈದ್ಯರು ಈ ಹೊಸ ರೂಪಾಂತರ ಅಪಾಯಕಾರಿ ಎನ್ನುತವಂತಿಲ್ಲ. ಆದರೆ, ಕಾಳಜಿ ಇಲ್ಲದೆ ನಡೆದುಕೊಳ್ಳುವಂತಿಲ್ಲ ಎಂದು ಕೂಡಾ ಹೇಳಲಾಗಿದೆ.
ಇತ್ತೀಚಿನ ಸುದ್ದಿ ಎಂದರೆ ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ದೇಶದಲ್ಲಿ ಈಗ 2997 ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಗಳಲ್ಲಿ 328 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕೇರಳದಲ್ಲಿ ಗರಿಷ್ಠ 265 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ : Covid-19 JN.1: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ! ಆತಂಕ ಬೇಡ, ಎಚ್ಚರವಿರಲಿ ಎಂದ ಸಿಎಂ!
ಈ 17 ರಾಜ್ಯಗಳಲ್ಲಿ ಎಚ್ಚರಿಕೆ :
ದೆಹಲಿ, ಯುಪಿ, ಗುಜರಾತ್, ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್, ಜಾರ್ಖಂಡ್, ಗೋವಾ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ತೆಲಂಗಾಣಕ್ಕೆ ಕರೋನಾ ಪ್ರವೇಶಿಸಿದೆ. ಈ 17 ರಾಜ್ಯಗಳಲ್ಲಿ ವಾಸಿಸುತ್ತಿದ್ದರೆ ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.
ಪರಿಣಿತರ ಸಲಹೆ :
ಪ್ರಸ್ತುತ ಈ ಹೊಸ ರೂಪಾಂತರದಿಂದ ಯಾವುದೇ ದೊಡ್ಡ ಅಪಾಯವಿಲ್ಲ ಎಂದು WHO ಮಾಜಿ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ಹೇಳಿದ್ದಾರೆ. ಭಾರತದಲ್ಲಿ ಬಹುತೇಕ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ಹಾಕಲಾಗಿದೆ. ಈ ರೂಪಾಂತರವು ಓಮಿಕ್ರಾನ್ ಅನ್ನು ಹೋಲುತ್ತದೆ. ಹಾಗಾಗಿ ಈ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ : Coronavirus: ಕೇರಳ ಬಳಿಕ ಈ ಎರಡೂ ರಾಜ್ಯಗಳಲ್ಲಿ ಆಂತಕ ಹೆಚ್ಚಿಸಿದ JN.1 ರೂಪಾಂತರ
ಯಾರು ಮಾಸ್ಕ್ ಧರಿಸಬೇಕು :
ಮದುವೆ ಮಂಟಪಗಳು, ರೈಲುಗಳು ಮತ್ತು ಬಸ್ಗಳಂತಹ ಮುಚ್ಚಿದ ಜನನಿಬಿಡ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಒಳ್ಳೆಯದು. ಆದರೆ ಈಗಿನಂತೆ ಮಾಸ್ಕ್ ಕಡ್ಡಾಯಗೊಳಿಸುವ ಅಗತ್ಯವಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ವಯಸ್ಸಾದವರು, ಗರ್ಭಿಣಿಯರು ಮತ್ತು ರೋಗನಿರೋಧಕ ಶಕ್ತಿ ಕೊರತೆ ಇರುವವರು ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಬೇಕು. ಒಂದು ವೇಳೆ ಅವರು ಜನನಿಬಿಡ ಪ್ರದೇಶಗಳಿಗೆ ಹೋಗುವುದಾದರೆ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.