ಚಂಡೀಗಢ: ಕೊರೊನಾವೈರಸ್ ಸೋಂಕಿನ ದೃಷ್ಟಿಯಿಂದ ರಾಜ್ಯ ಸರ್ಕಾರಗಳು ಲಾಕ್‌ಡೌನ್ (Lockdown) ಹೆಚ್ಚಿಸಲು ನಿರ್ಧಾರ ತೆಗೆದುಕೊಳ್ಳುತ್ತಿವೆ. ಒಡಿಶಾದ ನಂತರ ಈಗ ಪಂಜಾಬ್ ಸಹ ಲಾಕ್‌ಡೌನ್ / ಕರ್ಫ್ಯೂ ವಿಸ್ತರಿಸಲು ನಿರ್ಧರಿಸಿದೆ. ಏಪ್ರಿಲ್ 10 ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಕ್ಯಾಬಿನೆಟ್ ಸಭೆ ರಾಜ್ಯದಲ್ಲಿ ಮೇ 1ರವರೆಗೆ ಲಾಕ್‌ಡೌನ್ ವಿಸ್ತರಿಸಲು ನಿರ್ಧರಿಸಿದೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ (Captain Amrinder Singh) ಆರೋಗ್ಯ ತಜ್ಞರನ್ನು ಉಲ್ಲೇಖಿಸಿ, ಮುಂಬರುವ ದಿನಗಳಲ್ಲಿ ಕರೋನಾ ವೈರಸ್‌ನಿಂದ ಪರಿಸ್ಥಿತಿ ಇನ್ನಷ್ಟು ಅಪಾಯಕಾರಿಯಾಗಬಹುದು ಎಂಬ ಆಘಾತಕಾರಿ ವಿಷಯ ಹೇಳಿದರು. "ನಮ್ಮ ಕೆಲವು ಹಿರಿಯರು ಮತ್ತು ಉನ್ನತ ವೈದ್ಯಕೀಯ ಅಧಿಕಾರಿಗಳು ಸೆಪ್ಟೆಂಬರ್ ಮಧ್ಯದ ವೇಳೆಗೆ ಸಾಂಕ್ರಾಮಿಕ ಉತ್ತುಂಗಕ್ಕೇರಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ವೈರಸ್ ದೇಶದ ಜನಸಂಖ್ಯೆಯ 58 ಪ್ರತಿಶತದಷ್ಟು ಜನರಿಗೆ ಸೋಂಕು ತಗುಲಿದರೆ, ಪಂಜಾಬ್‌ನ 80 ಪ್ರತಿಶತಕ್ಕೂ ಹೆಚ್ಚು ಜನರು ಇದರ ಪ್ರಭಾವ ಎದುರಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಲಾಕ್‌ಡೌನ್ ಮಧ್ಯೆ ಟ್ರೆಂಡ್ ಆಗಿದೆ ಈ App, ಆದರೂ ಬಳಕೆದಾರರು ಇದನ್ನ ಡಿಲೀಟ್ ಮಾಡ್ತಿರೋದು ಏಕೆ?
ಇದುವರೆಗೆ 132 ಕೋವಿಡ್ 19 (Covid-19) ಪ್ರಕರಣಗಳು ಪಂಜಾಬ್‌ನಲ್ಲಿ ದೃಢಪಟ್ಟಿದ್ದು, ಈ ಪೈಕಿ 11 ಜನರು ಸಾವನ್ನಪ್ಪಿದ್ದಾರೆ. ನಾವು ಇಲ್ಲಿಯವರೆಗೆ ಸಂಗ್ರಹಿಸಿದ ಒಟ್ಟು ಮಾದರಿಗಳ ಸಂಖ್ಯೆ 2877 ಮತ್ತು 28 ದಶಲಕ್ಷ ಜನರನ್ನು ಹೊಂದಿರುವ ರಾಜ್ಯಕ್ಕೆ ಇದು ಸಾಕಾಗುವುದಿಲ್ಲ ಎಂದು ಅವರು ತಿಳಿಸಿದರು.
ಸ್ವಚ್ಛತಾ ಕಾರ್ಮಿಕರಿಗೆ ನೋಟಿನ ಹೂಮಾಲೆ ಹಾಕಿ ಗೌರವಿಸಿದ ಪಂಜಾಬ್ ನಿವಾಸಿಗಳು..!
ಈವರೆಗೆ ನಮ್ಮಲ್ಲಿ ದೆಹಲಿಯ ನಿಜಾಮುದ್ದೀನ್‌ನಿಂದ ಪಂಜಾಬ್‌ಗೆ ಬಂದಿರುವ 651 ಜನರಿದ್ದಾರೆ. ಅವರಲ್ಲಿ 636 ಮಂದಿಯನ್ನು ನಾವು ಪತ್ತೆ ಮಾಡಿದ್ದೇವೆ, ಇನ್ನುಳಿದವರಿಗಾಗಿ ನಾವು ಶೋಧ ಕಾರ್ಯ ಮುಂದುವರೆಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಕೊರೊನಾವೈರಸ್ (Coronavirus) ವಿರುದ್ಧದ ಯುದ್ಧದಲ್ಲಿ ಮೊದಲು ಕರ್ಫ್ಯೂ ವಿಧಿಸಿದ ರಾಜ್ಯ ಪಂಜಾಬ್(Punjab). ರಾಜ್ಯ ಮುಖ್ಯ ಕಾರ್ಯದರ್ಶಿ ಕೆಬಿಎಸ್ ಸಿಧು, "ಪಂಜಾಬ್‌ನ ಕ್ಯಾಬಿನೆಟ್ ಲಾಕ್‌ಡೌನ್ / ಕರ್ಫ್ಯೂ ಅನ್ನು ಏಪ್ರಿಲ್ 30 / ಮೇ 1 ರವರೆಗೆ ವಿಸ್ತರಿಸಲು ನಿರ್ಧರಿಸಿದೆ. ಇದನ್ನು ಇಂದಿನಿಂದ 21 ದಿನಗಳವರೆಗೆ ವಿಸ್ತರಿಸಲಾಗಿದೆ" ಎಂದು ಹೇಳಿದರು.
ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಲಾಕ್ ಡೌನ್ ಹೊರತಾಗಿಯೂ ತೆರೆಯಲಿದೆ ಮದ್ಯದಂಗಡಿ
ವಿಶೇಷವೆಂದರೆ, ಏಪ್ರಿಲ್ 14 ರವರೆಗೆ ದೇಶದಲ್ಲಿ ಲಾಕ್‌ಡೌನ್ ಇದೆ. ಕರೋನಾ ವೈರಸ್‌ನ ಭೀಕರತೆಯನ್ನು ಗಮನದಲ್ಲಿಟ್ಟುಕೊಂಡು, ದೇಶದ ಹಲವು ರಾಜ್ಯಗಳು ಲಾಕ್‌ಡೌನ್ ಮುಗಿಯುವ ಮೊದಲೇ ಅದನ್ನು ವಿಸ್ತರಿಸಲು ಕ್ರಮ ಕೈಗೊಂಡಿವೆ.