ಮೇ 31 ರವರೆಗೆ ತಮಿಳುನಾಡು,ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ವಿಸ್ತರಣೆ

ಕರೋನವೈರಸ್ ಕಾಯಿಲೆ ಹರಡುವಿಕೆಯನ್ನು ತಡೆಯಲು ತಮಿಳುನಾಡು ಮತ್ತು  ಮಹಾರಾಷ್ಟ್ರದಲ್ಲಿ ಭಾನುವಾರ ಲಾಕ್‌ಡೌನ್ ಅನ್ನು ಮೇ 31 ರವರೆಗೆ ಎರಡು ವಾರಗಳವರೆಗೆ ವಿಸ್ತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ -19 ಲಾಕ್‌ಡೌನ್‌ನ ಮೂರನೇ ಹಂತ ಭಾನುವಾರ ರಾತ್ರಿ ಕೊನೆಗೊಳ್ಳಲಿದೆ.

Last Updated : May 17, 2020, 04:28 PM IST
ಮೇ 31 ರವರೆಗೆ ತಮಿಳುನಾಡು,ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ವಿಸ್ತರಣೆ title=
file photo

ನವದೆಹಲಿ: ಕರೋನವೈರಸ್ ಕಾಯಿಲೆ ಹರಡುವಿಕೆಯನ್ನು ತಡೆಯಲು ತಮಿಳುನಾಡು ಮತ್ತು  ಮಹಾರಾಷ್ಟ್ರದಲ್ಲಿ ಭಾನುವಾರ ಲಾಕ್‌ಡೌನ್ ಅನ್ನು ಮೇ 31 ರವರೆಗೆ ಎರಡು ವಾರಗಳವರೆಗೆ ವಿಸ್ತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ -19 ಲಾಕ್‌ಡೌನ್‌ನ ಮೂರನೇ ಹಂತ ಭಾನುವಾರ ರಾತ್ರಿ ಕೊನೆಗೊಳ್ಳಲಿದೆ.

ಕೋವಿಡ್ -19 ಪ್ರಕರಣಗಳಲ್ಲಿ 1,606 ಹೊಸ ಸೋಂಕುಗಳೊಂದಿಗೆ ಮಹಾರಾಷ್ಟ್ರವು ಅತಿ ಹೆಚ್ಚು ಏಕದಿನ ಜಿಗಿತವನ್ನು ದಾಖಲಿಸಿದ್ದು, 30,706 ಕ್ಕೆ ತಲುಪಿದೆ. ಮಹಾರಾಷ್ಟ್ರದ ಸಾವಿನ ಸಂಖ್ಯೆ 67 ಸಾವುಗಳಿಂದ 1,135 ಕ್ಕೆ ಏರಿದೆ.

ಲಾಕ್‌ಡೌನ್‌ನ ಮೂರನೇ ಹಂತದಲ್ಲಿ ರಾಜ್ಯವು ಈವರೆಗೆ 15,181 ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ಏಪ್ರಿಲ್ 15 ಮತ್ತು ಮೇ 3 ರ ನಡುವಿನ 19 ದಿನಗಳ ಲಾಕ್‌ಡೌನ್‌ನಲ್ಲಿ ದಾಖಲಾದ ಒಟ್ಟು ಮೊತ್ತಕ್ಕಿಂತ ಹೆಚ್ಚಾಗಿದೆ. ಎರಡನೇ ಹಂತದ ಲಾಕ್‌ಡೌನ್‌ನಲ್ಲಿ ಮಹಾರಾಷ್ಟ್ರ 11,627 ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ ಎನ್ನಲಾಗಿದೆ.

ಲಾಕ್ ಡೌನ್ ರೋಗ ಹರಡುವುದನ್ನು ನಿರ್ಬಂಧಿಸಲು ಸಹಾಯ ಮಾಡಿದೆ ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೊಪೆ ಹೇಳಿದ್ದಾರೆ. ಇನ್ನೊಂದೆಡೆಗೆ ತಮಿಳುನಾಡಿನಲ್ಲಿ ಕೋವಿಡ್ -19 ಲಾಕ್‌ಡೌನ್ ಹೆಚ್ಚಿನ ವಿಶ್ರಾಂತಿಯೊಂದಿಗೆ ಮೇ 31 ರವರೆಗೆ ವಿಸ್ತರಿಸಿದೆ ಎಂದು ಸಿಎಂ ಕೆ ಪಳನಿಸ್ವಾಮಿ ಹೇಳಿರುವುದನ್ನು ಪಿಟಿಐ ವರದಿ ಉಲ್ಲೇಖಿಸಿದೆ.
 

Trending News