ಕಳೆದ ಕೆಲ ದಿನಗಳಿಂದ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇನ್ನು ದೇಶದಲ್ಲಿ ಒಂದೇ ದಿನದಲ್ಲಿ 20,044 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,37,30,071 ಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲದೆ, ದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ 1,40,760 ಕ್ಕೆ ಹೆಚ್ಚಳವಾಗಿದೆ.
ಇದನ್ನೂ ಓದಿ: PSI recruitment scam: ಅಮೃತ್ ಪೌಲ್ ಆಸ್ತಿ ಎಷ್ಟಿದೆ? ಇಲ್ಲಿದೆ ನೋಡಿ ಡಿಟೇಲ್ಸ್
ಇಂದು ಬೆಳಿಗ್ಗೆ 8 ಗಂಟೆಗೆ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಸೋಂಕಿನಿಂದ 56 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 5,25,660 ಕ್ಕೆ ಏರಿದೆ. ಇನ್ನು ದೇಶದಲ್ಲಿ ಕೋವಿಡ್ -19 ಸಕ್ರಿಯ ರೋಗಿಗಳ ಸಂಖ್ಯೆ 1,40,760 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ 1,687 ಹೆಚ್ಚಾಗಿದ್ದು, ರೋಗಿಗಳ ಚೇತರಿಕೆಯ ರಾಷ್ಟ್ರೀಯ ದರವು 98.48 ಪ್ರತಿಶತದಷ್ಟಿದೆ.
ಮಾಹಿತಿಯ ಪ್ರಕಾರ, ದೈನಂದಿನ ಸೋಂಕಿನ ಪ್ರಮಾಣವು 4.80 ಪ್ರತಿಶತದಷ್ಟಿದ್ದರೆ, ವಾರದ ಸೋಂಕಿನ ಪ್ರಮಾಣವು 4.40 ಪ್ರತಿಶತದಷ್ಟಿದೆ. ಇಲ್ಲಿಯವರೆಗೆ, ದೇಶದಲ್ಲಿ ಒಟ್ಟು 4,30,63,651 ಜನರು ಸೋಂಕಿನಿಂದ ಮುಕ್ತರಾಗಿದ್ದಾರೆ. ಕೋವಿಡ್ -19 ನಿಂದ ಸಾವಿನ ಪ್ರಮಾಣ ಶೇಕಡಾ 1.20 ರಷ್ಟಿದೆ. ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ 199.71 ಕೋಟಿ ಡೋಸ್ ಆಂಟಿ-ಕೋವಿಡ್ -19 ಲಸಿಕೆಗಳನ್ನು ನೀಡಲಾಗಿದೆ.
ಗಮನಾರ್ಹವಾಗಿ, ಆಗಸ್ಟ್ 7, 2020 ರಂದು, ದೇಶದಲ್ಲಿ ಸೋಂಕಿತರ ಸಂಖ್ಯೆ 20 ಲಕ್ಷವನ್ನು ಮೀರಿತ್ತು. 23 ಆಗಸ್ಟ್ 2020 ರಂದು 30 ಲಕ್ಷ ಮತ್ತು 5 ಸೆಪ್ಟೆಂಬರ್ 2020 ರಂದು 40 ಲಕ್ಷಕ್ಕೂ ಹೆಚ್ಚು ಸೋಂಕಿತರಿದ್ದರು. ಸೋಂಕಿನ ಒಟ್ಟು ಪ್ರಕರಣಗಳು 16 ಸೆಪ್ಟೆಂಬರ್ 2020 ರಂದು 50 ಲಕ್ಷಕ್ಕೆ ತಲುಪಿತ್ತು. ಬಳಿಕ 28 ಸೆಪ್ಟೆಂಬರ್ 2020 ರಂದು 60 ಲಕ್ಷ, 11 ಅಕ್ಟೋಬರ್ 2020 ರಂದು 70 ಲಕ್ಷ, 29 ಅಕ್ಟೋಬರ್ 2020 ರಂದು 80 ಲಕ್ಷ ಮತ್ತು ನವೆಂಬರ್ 20 ರಂದು 90 ಲಕ್ಷವನ್ನು ದಾಟಿತ್ತು.
19 ಡಿಸೆಂಬರ್ 2020 ರಂದು, ಈ ಪ್ರಕರಣಗಳು ದೇಶದಲ್ಲಿ ಒಂದು ಕೋಟಿಯನ್ನು ಮೀರಿದ್ದವು. ಕಳೆದ ವರ್ಷ ಮೇ 4 ರಂದು, ಸೋಂಕಿತರ ಸಂಖ್ಯೆ 20 ಮಿಲಿಯನ್ ಇತ್ತು. ಆದರೆ ಜೂನ್ 23, 2021 ರ ವೇಳೆಗೆ 30 ಮಿಲಿಯನ್ ದಾಟಿತ್ತು. ಈ ವರ್ಷದ ಜನವರಿ 25 ರಂದು ಪ್ರಕರಣಗಳು ನಾಲ್ಕು ಕೋಟಿ ದಾಟಿದ್ದವು.
ಇದನ್ನೂ ಓದಿ: ನಿಮ್ಮ ಸುತ್ತ ನಡೆಯುವ ಈ ಶಕುನಗಳು ನೀಡುತ್ತವೆ ಶುಭ-ಅಶುಭ ದಿನಗಳ ಸೂಚನೆ
ಇನ್ನು ಸೋಂಕಿನಿಂದ ಸಾವನ್ನಪ್ಪಿದ 56 ಜನರಲ್ಲಿ ಕೇರಳ ಮೂಲದ 27 ಮಂದಿ, ಮಹಾರಾಷ್ಟ್ರದ 10 ಮಂದಿ, ಪಶ್ಚಿಮ ಬಂಗಾಳದಿಂದ ಐದು, ಗುಜರಾತ್, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದಿಂದ ತಲಾ ಇಬ್ಬರು, ಅಸ್ಸಾಂ, ಬಿಹಾರ, ಕರ್ನಾಟಕ, ಪಂಜಾಬ್, ಸಿಕ್ಕಿಂ, ತಮಿಳುನಾಡು ಮತ್ತು ಉತ್ತರಾಖಂಡದ ತಲಾ ಓರ್ವ ವ್ಯಕ್ತಿ ಎಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.