ವಾಯು ಚಂಡಮಾರುತ: ಗುಜರಾತ್ನಲ್ಲಿ 3 ಲಕ್ಷ ಜನ ಸುರಕ್ಷಿತ ಜಾಗಕ್ಕೆ ಸ್ಥಳಾಂತರ; ಗೃಹ ಸಚಿವ ಅಮಿತ್ ಶಾ

ಕೋಸ್ಟ್ ಗಾರ್ಡ್, ನೌಕಾಪಡೆ, ಸೈನ್ಯ ಮತ್ತು ವಾಯುಪಡೆಗಳ ಘಟಕಗಳು ಜನಸಾಮಾನ್ಯರ ರಕ್ಷಣೆಗೆ ಸಿದ್ಧವಾಗಿರುತ್ತವೆ ಮತ್ತು ವಿಮಾನ ಮತ್ತು ಹೆಲಿಕಾಪ್ಟರ್ಗಳ ಸಹಾಯದಿಂದ ಏರ್ ಕಣ್ಗಾವಲು ಮಾಡಲಾಗುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

Last Updated : Jun 13, 2019, 08:29 AM IST
ವಾಯು ಚಂಡಮಾರುತ: ಗುಜರಾತ್ನಲ್ಲಿ 3 ಲಕ್ಷ ಜನ ಸುರಕ್ಷಿತ ಜಾಗಕ್ಕೆ ಸ್ಥಳಾಂತರ; ಗೃಹ ಸಚಿವ ಅಮಿತ್ ಶಾ title=

ನವದೆಹಲಿ (ಪಿಟಿಐ): ವಾಯು ಚಂಡಮಾರುತದಿಂದ ಉಂಟಾಗುವ ಅಪಾಯದ ಹಿನ್ನೆಲೆಯಲ್ಲಿ 52 ಎನ್ಡಿಆರ್ಎಫ್ ತಂಡಗಳ ಸಹಾಯದಿಂದ 3.10 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಬುಧವಾರ ತಿಳಿಸಿದ್ದಾರೆ.

ಕೋಸ್ಟ್ ಗಾರ್ಡ್, ನೌಕಾಪಡೆ, ಸೈನ್ಯ ಮತ್ತು ವಾಯುಪಡೆಗಳ ಘಟಕಗಳು ಜನಸಾಮಾನ್ಯರ ರಕ್ಷಣೆಗೆ ಸಿದ್ಧವಾಗಿರುತ್ತವೆ ಮತ್ತು ವಿಮಾನ ಮತ್ತು ಹೆಲಿಕಾಪ್ಟರ್ಗಳ ಸಹಾಯದಿಂದ ಏರ್ ಕಣ್ಗಾವಲು ಮಾಡಲಾಗುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಗಂಟೆಗೆ 155-165 ಕಿ.ಮೀ. ವೇಗದಲ್ಲಿ ಪೋರ್‌ಬಂದರ್‌ ಮತ್ತು ಯೂನಿಯನ್ ಟೆರಿಟರಿ ಡಿವ್ ನಡುವಿನ ಪ್ರದೇಶದಲ್ಲಿ ಈ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜನರ ಸುರಕ್ಷತೆಗಾಗಿ ಪ್ರಾರ್ಥಿಸುವೆ ಎಂದು ಶಾ ಹೇಳಿದರು.

'ಅತ್ಯಂತ ಗಂಭೀರ' ಪ್ರದೇಶಗಳಲ್ಲಿ ಸಂಭವನೀಯ ದುರಂತದ ಅಪಾಯದ ಬಗ್ಗೆ ಹತ್ತು ಜಿಲ್ಲೆಗಳಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಸೌರಾಷ್ಟ್ರ ಮತ್ತು ಕಛ್‌ ಪ್ರದೇಶಗಳಲ್ಲಿ ಅತಿ ಹೆಚ್ಚು ತೀವ್ರತೆ ಇರಲಿದೆ. ಬಳಿಕ 24 ಗಂಟೆಗಳ ಕಾಲ ಚಂಡಮಾರುತದ ಪ್ರಭಾವ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ವಿಶಿಷ್ಟವಾಗಿ ಚಂಡಮಾರುತವು ಕರಾವಳಿಗೆ ಅಪ್ಪಳಿಸಿದ ನಂತರ ದುರ್ಬಲವಾಗುತ್ತದೆ.
 

Trending News