ವಿಶ್ವದಲ್ಲಿ ಹೆಚ್ಚುತ್ತಿರುವ ಕರೋನಾ ಬಿಕ್ಕಟ್ಟಿನ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕಳವಳ ವ್ಯಕ್ತಪಡಿಸಿದೆ. ವಿಶ್ವದಾದ್ಯಂತ ಭಾನುವಾರ 1.83 ಲಕ್ಷ ಕರೋನಾ ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ಡಬ್ಲ್ಯುಎಚ್ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ. ಇದುವರೆಗೆ ಒಂದು ದಿನದಲ್ಲಿ ಬಹಿರಂಗಗೊಂಡ ಪ್ರಕರಣಗಳಲ್ಲಿ ಈ ಸಂಖ್ಯೆ ಅತಿ ಹೆಚ್ಚು. ಕರೋನಾದ ಗಂಭೀರ ರೋಗಿಗಳಿಗೆ Dexamethasone ಹೆಸರಿನ ಔಷಧಿಯನ್ನು ನೀಡಬಹುದು ಎಂದು WHO ಸಲಹೆ ನೀಡಿದೆ.
ಇದುವರೆಗೆ ವಿಶ್ವಾದ್ಯಂತ ಸುಮಾರು 8.80 ಲಕ್ಷಕ್ಕೂ ಅಧಿಕ ಕೊರೊನಾ ವೈರಸ್ ಗಳು ಪತ್ತೆಯಾಗಿವೆ ಎಂದಿರುವ ಟೆಡ್ರೊಸ್ ಅಡೆನ್ಹ್ಯಾಮ್ ಗ್ರೆಬ್ರೆಸಸ್ , ಈ ಮಾರಕ ಕಾಯಿಲೆಗೆ ಇದುವರೆಗೆ 4.65 ಲಕ್ಷಕ್ಕೂ ಅಧಿಕ ಜನರು ಈ ಮಾರಕ ಕಾಯಿಲೆಗೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಹಲವು ದೇಶಗಳಲ್ಲಿ ಕೊವಿಡ್ ರೋಗಿಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ ಎಂದೂ ಕೂಡ ಅವರು ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ Oxford University ಸಂಶೋಧಕರು ಡೆಕ್ಷಾಮೆಥಾಸೊನ್ ಔಷಧಿಯ ಬಳಕೆಯಿಂದ ಗಂಭೀರ ಕೊರೊನಾ ಕಾಯಿಲೆ ಇರುವ ರೋಗಿಗಳು ಕೂಡ ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಈ ಔಷಧಿಯ ಉತ್ತಮ ಪರಿಣಾಮಗಳನ್ನು ಕೂಡ ಗಮನಿಸಲಾಗಿದೆ ಎಂದು ಅವರು ಹೇಳಿದ್ದಾರೆ. Dexamethasone ಹೆಸರಿನ ಸ್ಟೆರಾಯಿಡ್ ಬಳಕೆಯಿಂದ ಗಂಭೀರ ಲಕ್ಷಣಗಳಿರುವ ರೋಗಿಗಳ ಸಾವಿನ ಪ್ರಮಾಣದಲ್ಲಿ 1/3 ರಷ್ಟು ಇಳಿಕೆ ಗಮನಿಸಲಾಗಿದೆ ಎಂದು ವಿಶ್ವವಿದ್ಯಾಲಯದಲ್ಲಿ ನಡೆದ ರಿಸರ್ಚ್ ಹೇಳಿದೆ.
Dexamethasone ಒಂದು ಅಗ್ಗದಲ್ಲಿ ಸಿಗುವ ಸ್ಟೆರಾಯಿಡ್ ಆಗಿದ್ದು, ಇದನ್ನು ಹಲವು ರೋಗಗಳನ್ನು ಗುಣಪಡಿಸಲು ಉಪಯೋಗಿಸಬಹುದಾಗಿದೆ.
ಈ ಬಗ್ಗೆ ಹೇಳುವ ಆಕ್ಸ್ಫರ್ಡ್ ವಿವಿ ಸಂಶೋಧಕ ಮಾರ್ಟಿನ್ ಲ್ಯಾಂಡರ್, ಕೊವಿಡ್ 19 ರೋಗಿಗಳಲ್ಲಿ ಆಮ್ಲಜನಕದ ಕೊರತೆ ಕಾಣಿಸಿಕೊಳ್ಳುತ್ತದೆ ಹಾಗೂ ಇದೆ ಕಾರಣಕ್ಕೆ ರೋಗಿಗಳನ್ನು ವೆಂಟಿಲೇಟರ್ ಮೇಲೆ ಇಡಲಾಗುತ್ತದೆ. ಇಂತಹುದರಲ್ಲಿ ಈ ರೋಗಿಗಳಿಗೆ Dexamethasone ಔಷಧಿ ನೀಡಿದರೆ, ರೋಗಿಗಳು ಬೇಗ ಗುಣಮುಖರಾಗಬಹುದು. ಇದಕ್ಕಾಗಿ ವೆಚ್ಚ ಕೂಡ ತುಂಬಾ ಕಡಿಮೆ ಬೇಕಾಗುತ್ತದೆ.
ವಿವಿ ನಡೆಸಿರುವ ಈ ಸಂಶೋಧನೆಯನ್ನು ಉಲ್ಲೇಖಿಸಿರುವ WHO ಮಹಾ ನಿರ್ದೇಶಕರು ಗಂಭೀರ ಲಕ್ಷಣ ಹೊಂದಿರುವ ಕೊವಿಡ್ 19 ರೋಗಿಗಳಲ್ಲಿ Dexamethasone ಪ್ರಾಣ ಉಳಿಸುವ ಕೆಲಸ ಮಾಡುತ್ತದೆ. ಹೀಗಾಗಿ ಈ ಔಷಧಿಯನ್ನು ಬಳಸಬಹುದಾಗಿದೆ ಎಂದು ಹೇಳಿದ್ದಾರೆ.
ಸದ್ಯ ಈ ಔಷಧಿಯ ಉತ್ಪಾದನೆಯನ್ನು ಹೆಚ್ಚಿಸಿ ಇಡೀ ವಿಶ್ವಾದ್ಯಂತ ಸಮಾನ ರೀತಿಯಲ್ಲಿ ಹಂಚಿಕೆ ಮಾಡುವುದು ಒಂದು ಸವಾಲಿನ ಪ್ರಶ್ನೆಯಾಗಿದೆ ಎಂದೂ ಕೂಡ ಅವರು ಹೇಳಿದ್ದಾರೆ. ಆದರೆ ಈ ಔಷಧಿಯನ್ನು ಗಂಭೀರ ಲಕ್ಷಣಗಳಿರುವ ರೋಗಿಗಳಿಗೆ ವೈದ್ಯರ ಸೂಕ್ತ ನಿರೀಕ್ಷಣೆಯಲ್ಲಿ ಮಾತ್ರ ನೀಡಬೇಕು. ರೋಗದ ಮಾಮೂಲಿ ಲಕ್ಷಣಗಳಿರುವ ರೋಗಿಗಳ ಮೇಲೆ ಈ ಔಷಧಿ ಕಾರ್ಯ ನಿರ್ವಹಿಸುತ್ತದೆ ಎಂಬುದರ ಪ್ರಮಾಣಗಳು ದೊರೆತಿಲ್ಲ ಮತ್ತು ಇದು ಅವರಿಗೆ ಹೆಚ್ಚಿನ ಹಾನಿ ತಲುಪಿಸುವ ಸಾಧ್ಯತೆ ಇದೆ ಎಂದು ಮಹಾನಿರ್ದೇಶಕರು ಹೇಳಿದ್ದಾರೆ.
ಇನ್ನೊಂದೆಡೆ ಈ ಔಷಧಿಗೆ ಕೆಲ ಕ್ಷುಲ್ಲಕ ಸೈಡ್ ಎಫೆಕ್ಟ್ ಗಳಿವೆ ಹೊಟ್ಟೆಯಲ್ಲಿ ಗಡಿಬಿಡಿ, ತಲೆನೋವು, ಪಚನಕ್ರಿಯೆಯಲ್ಲಿ ತೊಂದರೆ ಹಾಗೂ ಡಿಪ್ರೆಶನ್ ಗಳ ಮೇಲೆ ಗಮನವಿಟ್ಟು ಇದನ್ನು ರೋಗಿಗಳ ಮೇಲೆ ಪ್ರಯೋಗಿಸುವುದು ತುಂಬಾ ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ.