ನವದೆಹಲಿ: ನಿಮಗೆ ಗೊತ್ತಾಗದಂತೆ ನಿಮ್ಮ ಮೊಬೈಲ್ ಪೋನ್ ನಲ್ಲಿ ಆಧಾರ ಸಹಾಯವಾಣಿಯನ್ನು ಸೇರಿರುವುದರ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಈಗ ಭಾರಿ ಚರ್ಚೆ ನಡೆಯುತ್ತಿದೆ.
ಇದಕ್ಕೆ ಮೊಬೈಲ್ ಪೋನ್ ಬಳಕೆದಾರರು ತಮ್ಮ ಗಮನಕ್ಕೆ ಬಾರದೆ ಇದನ್ನು ಮೊಬೈಲ್ ನಲ್ಲಿ ಸ್ವಯಂಕೃತವಾಗಿ ಸೇರಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತಾಗಿ ಬಳಕೆದಾರರು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಆದರೆ ಈಗ ಇದನ್ನು ನಿಮ್ಮ ಪೋನ್ ಗಳಲ್ಲಿ ಸೇರಿಸಿರುವುದು ಯಾರು ಎನ್ನುವುದು ತಿಳಿದು ಬಂದಿದೆ.ಈಗ ಈ ಕೆಲಸವನ್ನು ಮಾಡಿರುವುದು ಬೇರೆ ಯಾರು ಅಲ್ಲ, ಅದು ಗೂಗಲ್ ಸರ್ಚ್ ಇಂಜಿನ್ ಎಂದು ತಿಳಿದುಬಂದಿದೆ .ಶುಕ್ರವಾರ ರಾತ್ರಿ ತನ್ನ ತಪ್ಪನ್ನು ಒಪ್ಪಿಕೊಂಡಿರುವ ಗೂಗಲ್, ಈ ಸಹಾಯವಾಣಿ ಯಾವುದೇ ರೀತಿಯ ಮಾಹಿತಿಯನ್ನು ತಮ್ಮ ಮೊಬೈಲ್ ನಿಂದ ಕದಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.ಅಲ್ಲದೆ ಮೊಬೈಲ್ ಬಳಕೆದಾರರು ತಮ್ಮ ಮೊಬೈಲ್ ನಿಂದ ಆ ನಂಬರ್ ರನ್ನು ಅಳಿಸಬಹುದಾಗಿದೆ ಎಂದು ಅವರು ತಿಳಿಸಿದೆ. ಈಗ ಗೂಗಲ್ ಸ್ಪಷ್ಟನೆ ನೀಡಿರುವುದರಿಂದ ಈಗ ಎಲ್ಲರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.