ಶೋಪಿಯಾನ್: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಪಿಂಜೋರಾ ಪ್ರದೇಶದಲ್ಲಿ ಪ್ರಸ್ತುತ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ನಡೆಯುತ್ತಿದೆ. ಸೇನೆಯ 44 ಆರ್‌ಆರ್, ಪೊಲೀಸ್ ಮತ್ತು ಸಿಆರ್‌ಪಿಎಫ್ ಜಂಟಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಭಾನುವಾರ (ಜೂನ್ 7) ರಾತ್ರಿ ಎನ್‌ಕೌಂಟರ್ (Encounter) ಪ್ರಾರಂಭವಾಯಿತು.
ಪೊಲೀಸರ ಪ್ರಕಾರ ಭಯೋತ್ಪಾದಕರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ತಂಡವು ಸ್ಥಳವನ್ನು ಸುತ್ತುವರಿಯುತ್ತಿದ್ದಂತೆ, ತಲೆಮರೆಸಿಕೊಂಡ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು, ಅದು ಭಯೋತ್ಪಾದಕರ ಮೇಲೆ ಗುಂಡು ಹಾರಿಸುವಂತೆ ಒತ್ತಾಯಿಸಿತು.
ಶೋಪಿಯಾನ್‌ನ(Shopian) ಪಿಂಜೋರಾ ಪ್ರದೇಶದಲ್ಲಿ ಎನ್‌ಕೌಂಟರ್ ಪ್ರಾರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ಮುಂದುವರೆಸಿವೆ. ಹೆಚ್ಚಿನ ವಿವರಗಳಿಗಾಗಿ ಎದುರುನೋಡಲಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಈ ಪ್ರದೇಶದಲ್ಲಿ 4-5 ಭಯೋತ್ಪಾದಕರು ಸಿಕ್ಕಿಬಿದ್ದಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾನುವಾರ ಶೋಪಿಯಾನ್‌ನ ಜೈನಪೋರಾ ಬೆಲ್ಟ್‌ನಲ್ಲಿ ಐವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಎನ್ಕೌಂಟರ್ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ನ ಉನ್ನತ ಕಮಾಂಡರ್ ಸಹ ಕೊಲ್ಲಲ್ಪಟ್ಟರು. ಕೇಂದ್ರೀಯ ರಿಸರ್ವ್ ಪೊಲೀಸ್ ಪಡೆ (CRPF), ರಾಷ್ಟ್ರೀಯ ರೈಫಲ್ಸ್ ಮತ್ತು ವಿಶೇಷ ಕಾರ್ಯಾಚರಣೆ ಗುಂಪಿನ 178 ಬೆಟಾಲಿಯನ್‌ಗಳ ಭಯೋತ್ಪಾದಕರು ಮತ್ತು ಜಂಟಿ ಪಡೆಗಳ ನಡುವೆ ಭಾನುವಾರ ಬೆಳಿಗ್ಗೆಯಿಂದ ಗುಂಡಿನ ಚಕಮಕಿ ಪ್ರಾರಂಭವಾಯಿತು ಮತ್ತು ಐದು ಗಂಟೆಗಳ ಕಾಲ ನಡೆದ ಈ ಕದನದಲ್ಲಿ ಐದು ಭಯೋತ್ಪಾದಕರ ಹತ್ಯೆಗೈಯಲಾಗಿದೆ. ದಕ್ಷಿಣ ಕಾಶ್ಮೀರದ ಶೋಪಿಯಾನ್‌ನ ಜೈನಪೋರಾ ಪಟ್ಟಿಯ ರೆಬನ್ ಗ್ರಾಮದಲ್ಲಿ ಈ ಮುಖಾಮುಖಿ ನಡೆದಿದೆ.
ಐದು ಭಯೋತ್ಪಾದಕರ ಹತ್ಯೆ ಭಾರತೀಯ ಪಡೆಗಳಿಗೆ ದೊಡ್ಡ ಯಶಸ್ಸನ್ನು ಕಂಡಿದೆ. ಈ ವರ್ಷ ಈವರೆಗೆ 80 ಭಯೋತ್ಪಾದಕರನ್ನು ಭದ್ರತಾ ಪಡೆಗಳು ತಟಸ್ಥಗೊಳಿಸಿವೆ, ಈ ಪೈಕಿ 21 ಮಂದಿ ವಿವಿಧ ಭಯೋತ್ಪಾದಕ ಸಂಘಟನೆಗಳ ಉನ್ನತ ಕಮಾಂಡರ್‌ಗಳಾಗಿದ್ದರು ಎಂದು ಹೇಳಲಾಗಿದೆ.