ನವದೆಹಲಿ: ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ 47 ವರ್ಷದ ಜೆಎನ್ಯು ವಿದ್ಯಾರ್ಥಿ ಎಂದು ಹೇಳುವ ಚಿತ್ರವೊಂದು ಕಳೆದ ಕೆಲವು ತಿಂಗಳುಗಳಿಂದ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಆದರೆ ಸೋಶಿಯಲ್ ಮೀಡಿಯಾದಲ್ಲಿ ಅವರು ಜೆಎನ್ಯು ವಿದ್ಯಾರ್ಥಿ ಎಂದು ಹೇಳುತ್ತಿರುವುದು ಸುಳ್ಳು ಎನ್ನುವುದು ಈಗ ನಮ್ಮ ಫ್ಯಾಕ್ಟ್ ಚೆಕ್ ಮೂಲಕ ತಿಳಿದು ಬಂದಿದೆ.
Studying in JNU is continues life long process….!!! 32 years.
He is 47 years old Moinuddin from Kerala, living in Delhi as NJU student since 1989….!!!
He claims he is jobless and still studying at JNU.
He takes admission every year paying Rs 10/- hostel fees per month. pic.twitter.com/Nfxoak4Ltk— GOPAL SATISH KUMAR (@GOPALSATISHKUMA) January 10, 2020
ಟ್ವಿಟ್ಟರ್ವೊಂದರಲ್ಲಿ ರಾಜಕೀಯ ಚಿಂತಕ ಕಾಂಚ ಇಲಯ್ಯ ಅವರ ಪೋಟೋವನ್ನು ಜೆಎನ್ಯು ವಿದ್ಯಾರ್ಥಿ ಎಂದು ತಪ್ಪಾಗಿ ಬಿಂಬಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವಂತೆ' “ಜೆಎನ್ಯುನಲ್ಲಿ ಅಧ್ಯಯನ ಮಾಡುವುದು ಜೀವಿತಾವಧಿಯ ಪ್ರಕ್ರಿಯೆ…! 32 ವರ್ಷಗಳು. ಅವರು ಕೇರಳದ 47 ವರ್ಷದ ಮೊಯಿನುದ್ದೀನ್, 1989 ರಿಂದ ದೆಹಲಿಯಲ್ಲಿ ಎನ್ಜೆಯು ವಿದ್ಯಾರ್ಥಿಯಾಗಿ ವಾಸಿಸುತ್ತಿದ್ದಾರೆ!! ಅವರು ನಿರುದ್ಯೋಗಿ ಮತ್ತು ಇನ್ನೂ ಜೆಎನ್ಯುನಲ್ಲಿ ಓದುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ಅವರು ಪ್ರತಿವರ್ಷ 10 / - ರೂ. ಹಾಸ್ಟೆಲ್ ಶುಲ್ಕವನ್ನು ಪಾವತಿಸುತ್ತಿದ್ದಾರೆ, ”ಎಂದು ಟ್ವಿಟರ್ ಬಳಕೆದಾರರು ಅದೇ ಚಿತ್ರದೊಂದಿಗೆ ಹಂಚಿಕೊಂಡ ಪೋಸ್ಟ್ ನಲ್ಲಿ ಬರೆದುಕೊಂಡುತ್ತಾರೆ.
ಇನ್ನೊಂದು ಪೋಸ್ಟ್ ಶೇರ್ ಮಾಡಿರುವ ಪೋಸ್ಟ್ ನಲ್ಲಿ .“ದೆಹಲಿ ಪೊಲೀಸರು ಈ ವ್ಯಕ್ತಿಯನ್ನು ಜೆಎನ್ಯುಗೆ ಪ್ರವೇಶಿಸುವುದನ್ನು ತಡೆದರು,‘ ಕ್ಯಾಂಪಸ್ನೊಳಗೆ ಗಲಭೆ ನಡೆಯುತ್ತಿದೆ. ಪೋಷಕರು ಮತ್ತು ಪಾಲಕರು ಭೇಟಿ ನೀಡಲು ಸಾಧ್ಯವಿಲ್ಲ ಎಂದು. ಇದಕ್ಕೆ ’ಆ ವ್ಯಕ್ತಿ ನಾನು ಜೆಎನ್ಯು ವಿದ್ಯಾರ್ಥಿ. ’ಎಂದು ಉತ್ತರಿಸಿದ ' ಎಂದು ಬರೆಯಲಾಗಿದೆ.
ಈಗ ಈ ಚಿತ್ರವನ್ನು ಫ್ಯಾಕ್ಟ್ ಚೆಕ್ ಗೆ ಒಳಪಡಿಸಿದಾಗ ಇವರು ವ್ಯಕ್ತಿ ಭಾರತದ ಪ್ರಮುಖ ರಾಜಕೀಯ ಚಿಂತಕ ಕಾಂಚಾ ಇಲಯ್ಯ ಎನ್ನುವುದು ಸ್ಪಷ್ಟವಾಗಿದೆ.ಆದ್ದರಿಂದ, ಅವರು 47 ವರ್ಷದ ಜೆಎನ್ಯು ವಿದ್ಯಾರ್ಥಿ ಎಂಬ ಹೇಳಿಕೆ ಸುಳ್ಳು ಎಂದು ತಿಳಿದು ಬಂದಿದೆ.