ಲಕ್ನೋ: ಶಾರ್ಟ್ ಸರ್ಕ್ಯುಟ್ ನಿಂದಾಗಿ ನಡೆದ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಐದು ಮಂದಿ ಸಾವನ್ನಪ್ಪಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಉತ್ತರಪ್ರದೇಶದ ಲಖನೌದಲ್ಲಿರುವ ಇಂದಿರಾನಗರದ ಮಾಯಾವತಿ ಕಾಲೊನಿಯಲ್ಲಿ ಈ ಬೆಂಕಿ ಅವಘಡ ನಡೆದಿದ್ದು, ನಿದ್ರಿಸುತ್ತಿದ್ದ ಆರು ತಿಂಗಳ ಮಗು ಸೇರಿ ಒಂದೇ ಕುಟುಂಬದ ಐವರು ಸಜೀವ ದಹನವಾದ ಧಾರುಣ ಘಟನೆ ನಡೆದಿದೆ.
Lucknow: 5 members of a family died last night after a fire broke out at their residence due to short circuit and spread to a gas-stove godown built there, in Mayawati Colony of Indira Nagar. pic.twitter.com/ln11xxj1Zz
— ANI UP (@ANINewsUP) May 1, 2019
ಮಾಯಾವತಿ ಕಾಲೊನಿಯ ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಮನೆಯ ಪಕ್ಕದಲ್ಲೇ ಇದ್ದ ಗ್ಯಾಸ್ ಗೋಡಾನ್ಗೂ ಹಬ್ಬಿ ಅವಘಡದ ಪ್ರಮಾಣ ಹೆಚ್ಚಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.