ನವದೆಹಲಿ: ಗಾಜಿಯಾಬಾದ್ನ ಕೌಶಂಬಿಯಲ್ಲಿರುವ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ತಡರಾತ್ರಿಯವರೆಗೂ ಅಂಗಡಿಯನ್ನು ತೆರೆದಿದ್ದಕ್ಕಾಗಿ ರಸ್ತೆಬದಿಯ ಕೆಫೆ ಮಾಲೀಕರನ್ನು ಥಳಿಸಿದ ಆರೋಪದ ಮೇಲೆ ಅವರನ್ನು ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ: "ಉತ್ತರ ಪ್ರದೇಶದಲ್ಲಿ ನಾವು ಮೈತ್ರಿಮಾಡಿಕೊಳ್ಳಲು ಮುಕ್ತ ಮನಸ್ಸು ಹೊಂದಿದ್ದೇವೆ"
ಒಂದು ವೇಳೆ ತಡವಾಗಿ ಅಂಗಡಿ ತೆರೆಯಲು ಬಯಸಿದರೆ ಪೊಲೀಸರು ತಿಂಗಳಿಗೆ 50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಅಂಗಡಿಯವರು ಆರೋಪಿಸಿದ್ದಾರೆ.ಶುಕ್ರವಾರ ರಾತ್ರಿ 9: 30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದು, ಅಂಗಡಿಗಳು ರಾತ್ರಿ 11ಗಂಟೆಯವರೆಗೆ ತೆರೆಯಲು ಆಡಳಿತ ಮಂಡಳಿ ಸಮಯ ನಿಗದಿಪಡಿಸಿದ್ದರಿಂದ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಹೇಳಿದರು.
'ಅಂಗಡಿಯವನಾದ ಚಂದನ್ ಸಿಂಗ್, ಕೌಶಂಬಿ ಪೊಲೀಸ್ ಠಾಣೆಯ ಎಸ್ಎಚ್ಒ ಮಹೇಂದ್ರ ಸಿಂಗ್ ಅವರು ತಡರಾತ್ರಿಯವರೆಗೆ ಅಂಗಡಿಯನ್ನು ತೆರೆಯಲು ಬಯಸಿದಲ್ಲಿ ತಿಂಗಳಿಗೆ 50,000 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದಾರೆ" ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Video: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಪೋಲಿಸ್ ಲಾಠಿಚಾರ್ಜ್ ನಿಂದ ರಕ್ಷಿಸಿದ ಪ್ರಿಯಾಂಕಾ ಗಾಂಧಿ
ಈಗ ಆತನ ವಿರುದ್ಧ ಇಲಾಖಾ ವಿಚಾರಣೆಯನ್ನು ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪವನ್ ಕುಮಾರ್ ತಿಳಿಸಿದ್ದಾರೆ.
ಮಹಾವೀರ್ ಸಿಂಗ್ ಎಂಬ ಲಿಂಕ್ ರೋಡ್ ಪೊಲೀಸ್ ಠಾಣೆಯ ಒಬ್ಬ ಹೆಡ್ ಕಾನ್ಸ್ಟೇಬಲ್ ಅವರನ್ನು ಅಮಾನತು ಮಾಡಲಾಗಿದೆ ಮತ್ತು ಕರ್ತವ್ಯ ಲೋಪ ಮತ್ತು ಇತರ ಕೆಲವು ಗಂಭೀರ ಆರೋಪಗಳಿಗಾಗಿ ಆತನ ವಿರುದ್ಧ ಇಲಾಖಾ ತನಿಖೆ ನಡೆಸಲಾಗುವುದು ಎಂದು ಎಸ್ಎಸ್ಪಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.