Good News: ಟಿಕೆಟ್ ರದ್ದತಿ Refund ನಿಯಮದಲ್ಲಿ ಬದಲಾವಣೆ

ರೇಲ್ವೆ ಟಿಕೆಟ್ ಮರುಪಾವತಿ ಪಡೆಯುವ ಸಮಯದಲ್ಲಿ ಎರಡನೇ ಬಾರಿಗೆ ಬದಲಾವಣೆ ಮಾಡಿರುವ ಭಾರತೀಯ ರೇಲ್ವೆ ಇಲಾಖೆ, ಇದೀಗೆ ಈ ಸಮಯವನ್ನು 6 ತಿಂಗಳಿನಿಂದ 9 ತಿಂಗಳಿಗೆ ವಿಸ್ತರಿಸಿದೆ. ರದ್ದುಗೊಂಡ ನಿಯಮಿತ ಟೈಮ್ ಟೇಬಲ್ ರೈಲುಗಳಿಗೆ ಮಾತ್ರ ಈ ನಿಯಮ ಅನ್ವಯಿಸಲಿದೆ ಎಂದು ರೇಲ್ವೆ ಇಲಾಖೆ ಹೇಳಿದೆ.

Written by - Nitin Tabib | Last Updated : Jan 8, 2021, 05:12 PM IST
  • ರದ್ದಾದ ರೈಲುಗಳ ಟಿಕೆಟ್ ಹಣ ಮರುಪಾವತಿ ಸಮಯ ವಿಸ್ತರಣೆ
  • 6 ತಿಂಗಳಿನಿಂದ ವಿಸ್ತರಿಸಿ 9 ತಿಂಗಳಿಗೆ ನಿಗದಿಪಡಿಸಲಾಗಿದೆ.
  • ರದ್ದುಗೊಂಡ ನಿಯಮಿತ ರೈಲುಗಳ ಪ್ರಯಾಣಿಕರಿಗೆ ಮಾತ್ರ ಈ ನಿಯಮ ಅನ್ವಯ.
Good News: ಟಿಕೆಟ್ ರದ್ದತಿ Refund ನಿಯಮದಲ್ಲಿ ಬದಲಾವಣೆ title=
Indian Railways (Representational Image)

ನವದೆಹಲಿ: Indian Railways - ಒಂದು ವೇಳೆ ಲಾಕ್ ಡೌನ್ ನಲ್ಲಿ ರದ್ದಾದ ಟಿಕೆಟ್ ಹಣವನ್ನು ಇದುವರೆಗೆ ನೀವೂ ಕೂಡ ಪಡೆದುಕೊಂಡಿಲ್ಲ ಎಂದಾದಲ್ಲಿ ಈ ಸುದ್ದಿ ನಿಮಗಾಗಿ. ಭಾರತೀಯ ರೇಲ್ವೆ ಇಲಾಖೆ ಕೌಂಟರ್ ಗಳಿಂದ ಬುಕ್ ಮಾಡಲಾಗಿರುವ ಟಿಕೆಟ್ ಹಣದ ರಿಫಂಡ್ ಪಡೆಯುವ ಸಮಯದ ಮಿತಿಯನ್ನು ಎರಡನೇ ಬಾರಿಗೆ ವಿಸ್ತರಿಸಿದೆ. ಪ್ರಸ್ತುತ ಈ ಮಿತಿಯನ್ನು 6 ತಿಂಗಳಿನಿಂದ 9 ತಿಂಗಳವರೆಗೆ ವಿಸ್ತರಿಸಿದೆ.

ಇದನ್ನು ಓದಿ-Indian Railways: ತನ್ನ ಯಾತ್ರಿಗಳಿಗೆ ಮತ್ತೊಂದು ಉಡುಗೊರೆ ನೀಡಿದ ಭಾರತೀಯ ರೇಲ್ವೆ

ಕೇವಲ ಇವರಿಗೆ ಮರುಪಾವತಿ ಸಿಗಲಿದೆ
IRCTC
ಪ್ರಕಾರ 21 ಮಾರ್ಚ್ 2020 ರಿಂದ 31 ಜುಲೈ 2020ರ ನಡುವೆ ಯಾತ್ರೆಗಾಗಿ ಟಿಕೆಟ್ ಬುಕ್ ಮಾಡಿದವರಿಗೆ ಮಾತ್ರ ಈ ರಿಫಂಡ್ ಸಿಗಲಿದೆ. ನಿಯಮಿತ ಟೈಮ್ ಟೇಬಲ್ ಆಧರಿಸಿ ರದ್ದುಗೊಂಡ ರೈಲುಗಳಿಗೆ ಮಾತ್ರ ಈ ನಿಯಮ ಅನ್ವಯಿಸಲಿದೆ. ಲಾಕ್ ಡೌನ್ ಹಿನ್ನೆಲೆ ರೇಲ್ವೆ ವಿಭಾಗ ಈ ರೈಲುಗಳನ್ನು ರದ್ದುಗೊಳಿಸಿತ್ತು. IRCTC ಮೂಲಕ ಟಿಕೆಟ್ ಬುಕ್ ಮಾಡಿದ ಯಾತ್ರಿಗಳ ಮರುಪಾವತಿ ಸ್ವಯಂಚಾಲಿತವಾಗಿ ಪೂರ್ಣಗೊಂಡಿದೆ.

ಇದನ್ನು ಓದಿ- IRCTC/Indian Railways:ಟ್ರೈನ್ ನಲ್ಲಿ ಸೀಟ್ ಸಿಗಲಿಲ್ಲವೇ? ಸಿಗಲಿದೆ ಬಸ್ ಸೇವೆ

ಕೊರೊನಾ ಮಹಾಮಾರಿಯ ಹಿನ್ನೆಲೆ ಸ್ಥಗಿತಗೊಂಡಿತ್ತು ರೈಲು ಸೇವೆ
ಕೊರೊನಾ ಮಹಾಮಾರಿಯ ಪ್ರಕೋಪದ ಹಿನ್ನೆಲೆ ಮಾರ್ಚ್ 22, 2020 ರಿಂದ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದಾದ ಬಳಿಕ ರೈಲು ವಿಭಾಗ ಟಿಕೆಟ್ ಕ್ಯಾನ್ಸಲ್ ಮಾಡುವ ಕುರಿತು ಹಾಗೂ ಮರುಪಾವತಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ರೈಲು ಇಲಾಖೆಯ ಮೂಲಕ ರದ್ದುಗೊಂಡ ರೈಲುಗಳ ಯಾತ್ರಿಗಳು ಟಿಕೆಟ್ ಕೌಂಟರ್ ನಲ್ಲಿ ಟಿಕೆಟ್ ನೀಡಿ ಹಣವನ್ನು ಹಿಂಪಡೆಯುವ ಕಾಲಾವಧಿಯನ್ನು ಮೂರು ದಿನಗಳಿಂದ  6 ತಿಂಗಳಿಗೆ ಹೆಚ್ಚಿಸಿತ್ತು. ಜೊತೆಗೆ 139 ಸೇವೆ ಅಥವಾ IRCTC ವೆಬ್ಸಿತೆ ನಿಂದ ಟಿಕೆಟ್ ರದ್ದುಗೊಂಡ ಪರಿಸ್ಥಿತಿಯಲ್ಲೂ ಕೂಡ ಯಾವುದೇ ಕೌಂಟರ್ ನಿಂದ ರಿಫಂಡ್ ಪಡೆಯುವ ಕಾಲಾವಧಿಯನ್ನು ಕೂಡ 6 ತಿಂಗಳಿಗೆ ಹೆಚ್ಚಿಸಿತ್ತು.

ಇದನ್ನು ಓದಿ- ಈ ನಗರದಿಂದ Kempegowda International Airport ತಲುಪಲು ಕೇವಲ 15 ರೂ. ಸಾಕು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News