ಆಧಾರ್ ಜೊತೆಗೆ ಸೋಶಿಯಲ್ ಮೀಡಿಯಾ ಖಾತೆ ಲಿಂಕ್ ಮಾಡುವ ಯೋಚನೆ ಇಲ್ಲ- ರವಿಶಂಕರ್ ಪ್ರಸಾದ್

 ಆಧಾರ್ ಅನ್ನು ಸಾಮಾಜಿಕ ಮಾಧ್ಯಮ ಖಾತೆಯೊಂದಿಗೆ ಜೋಡಿಸುವ ಯಾವುದೇ ಯೋಜನೆ ಸರ್ಕಾರಕ್ಕೆ ಇಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಸ್ಪಷ್ಟಪಡಿಸಿದ್ದಾರೆ.

Last Updated : Nov 20, 2019, 02:52 PM IST
ಆಧಾರ್ ಜೊತೆಗೆ ಸೋಶಿಯಲ್ ಮೀಡಿಯಾ ಖಾತೆ ಲಿಂಕ್ ಮಾಡುವ ಯೋಚನೆ ಇಲ್ಲ- ರವಿಶಂಕರ್ ಪ್ರಸಾದ್  title=

ನವದೆಹಲಿ: ಆಧಾರ್ ಅನ್ನು ಸಾಮಾಜಿಕ ಮಾಧ್ಯಮ ಖಾತೆಯೊಂದಿಗೆ ಜೋಡಿಸುವ ಯಾವುದೇ ಯೋಜನೆ ಸರ್ಕಾರಕ್ಕೆ ಇಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಸ್ಪಷ್ಟಪಡಿಸಿದ್ದಾರೆ.

ಲಿಖಿತ ಉತ್ತರದಲ್ಲಿ ಭರವಸೆ ನೀಡಿದ ಕೇಂದ್ರ ಸಚಿವ ಪ್ರಸಾದ್ ಅವರು ಆಧಾರ್‌ನ ದತ್ತಾಂಶವು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಇದನ್ನು ಆಗಾಗ್ಗೆ ಲೆಕ್ಕಪರಿಶೋಧಿಸಲಾಗುತ್ತದೆ ಎಂದು ಹೇಳಿದರು. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 69 ಎ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ವಿಷಯಗಳಲ್ಲಿ ದೇಶದಲ್ಲಿ ಖಾತೆಗಳನ್ನು ನಿರ್ಬಂಧಿಸುವ ಹಕ್ಕು ಸರ್ಕಾರಕ್ಕೆ ಇದೆ ಎಂದು ಅವರು ಹೇಳಿದರು. ಈಗ 2016-2019--633 (2016), 1,385 (2017), 2,799 (2018), ಮತ್ತು 3,433 (2019) ಸರ್ಕಾರ ನಿರ್ಬಂಧಿಸಿರುವ ಯುಆರ್‌ಎಲ್‌ಗಳ ಸಂಖ್ಯೆಗಳಾಗಿವೆ.

ಇತ್ತೀಚಿಗೆ ವಾಟ್ಸಾಪ್ ಬಳಸುವ ಭಾರತೀಯ ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರನ್ನು ಸ್ಪೈವೇರ್ ಗುರಿಯಾಗಿಸಿಕೊಂಡಿತ್ತು. ಸ್ಪೈವೇರ್ ಭಾರತದ 121 ಜನರ ಫೋನ್‌ಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿದೆ ಎಂಬ ಅಂಶ ಸರ್ಕಾರಕ್ಕೆ ತಿಳಿದಿದೆ ಎಂದು ಪ್ರಸಾದ್ ಉತ್ತರಿಸಿದ್ದು, ತನ್ನ ನಾಗರಿಕರ ಗೌಪ್ಯತೆ ಹಕ್ಕಿಗೆ ಅದು ಬದ್ಧವಾಗಿದೆ ಎಂದು ಹೇಳಿದರು.

ಇಸ್ರೇಲಿ ಸ್ಪೈವೇರ್ ಪೆಗಾಸಸ್ ತನ್ನ ಪ್ಲಾಟ್‌ಫಾರ್ಮ್ ಬಳಸಿ ಬಳಕೆದಾರರ ಮೇಲೆ ನಡೆಸಿದ ದಾಳಿಯ ಬಗ್ಗೆ ವಿವರಿಸಲು ಸರ್ಕಾರ ವಾಟ್ಸಾಪ್ ಅನ್ನು ಕೇಳಿದೆ ಎಂದು ಪ್ರಸಾದ್ ಉತ್ತರಿಸಿದರು. ಈ ದಾಳಿಯ ಸಂಪೂರ್ಣ ಪರಿಣಾಮವನ್ನು ತಿಳಿಯಲು ಸಾಧ್ಯವಿಲ್ಲ ಎಂದು ವಾಟ್ಸಾಪ್ ನಂತರ ಸೆರ್ಟ್-ಇನ್ ಅನ್ನು ನವೀಕರಿಸಿದೆ. 
.

Trending News