ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಚೌಕಟ್ಟನ್ನು ಪರಿಚಯಿಸಿ ಎರಡು ವರ್ಷಗಳಾದರೂ ಇನ್ನೂ ಕೆಲವು ನ್ಯೂನತೆಗಳನ್ನು ಹೊಂದಿರಬಹುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಯಮಿಗಳು ಮತ್ತು ತೆರಿಗೆ ತಜ್ಞರ ಮುಂದೆ ಒಪ್ಪಿಕೊಂಡಿದ್ದಾರೆ.
ಇದೇ ವೇಳೆ ಸಂಪೂರ್ಣ ಬಹುಮತದೊಂದಿಗೆ ಅನುಮೋದನೆ ಪಡೆದಿರುವ ಜಿಎಸ್ಟಿ ಖಂಡಿಸುವುದು ತರವಲ್ಲ ಎಂದು ಸಲಹೆ ನೀಡಿದರು. ಪುಣೆಯಲ್ಲಿ ಉದ್ಯಮಿಗಳು ಹಾಗೂ ಚಾರ್ಟೆಡ್ ಅಕೌಂಟೆಂಟ್ ಗಳ ಜೊತೆಗಿನ ಸಂವಾದದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಬಂದಿದೆ.
#WATCH Finance Min during interaction with businessmen,entrepreneurs,CAs&others in Pune:We just can't damn GST now. It has been passed in Parliament&in state assemblies. It might have flaws,it might probably give you difficulties but I'm sorry,it's the 'kanoon' of the country now pic.twitter.com/tAPcQmHh5H
— ANI (@ANI) October 11, 2019
ಸಭಿಕರೊಬ್ಬರು ಜಿಎಸ್ಟಿ ವಿಚಾರವಾಗಿ ಸರ್ಕಾರಕ್ಕೆ ಶಾಪಹಾಕುತ್ತಿದ್ದಾರೆ ಎಂದು ಪ್ರಸ್ತಾಪಿಸಿದಾಗ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಿರ್ಮಲಾ ಸಿತಾರಾಮನ್ "ಕ್ಷಮಿಸಿ, ಆದರೆ ನಾನು ಆಕ್ಷೇಪಿಸುತ್ತೇನೆ ಎಂದು ಅವರು ಹೇಳಿದರು. ಬಹಳ ಸಮಯದ ನಂತರ, ಈ ದೇಶ - ಸಂಸತ್ತಿನಲ್ಲಿ ಹಲವಾರು ಪಕ್ಷಗಳು ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ - . ಈಗ, ನಾವು ಇದ್ದಕ್ಕಿದ್ದಂತೆ ಇದು ಎಂತಹ ದೈವಿಕ ರಚನೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.
'ನಾವು ಈಗ ಜಿಎಸ್‌ಟಿಯನ್ನು ಖಂಡಿಸಲು ಸಾಧ್ಯವಿಲ್ಲ. ಇದನ್ನು ಸಂಸತ್ತಿನಲ್ಲಿ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಅಂಗೀಕರಿಸಲಾಗಿದೆ. ಇದು ನ್ಯೂನತೆಗಳನ್ನು ಹೊಂದಿರಬಹುದು, ಅದು ನಿಮಗೆ ತೊಂದರೆಗಳನ್ನು ನೀಡಬಹುದು ಆದರೆ ಕ್ಷಮಿಸಿ, ಇದು ಈಗ ದೇಶದ ಕಾನೂನು ಆಗಿದೆ' ಎಂದು ನಿರ್ಮಲಾ ಸೀತಾರಾಮನ್ ಜಿಎಸ್ಟಿಯನ್ನು ಸಮರ್ಥಿಸಿಕೊಂಡರು.