ನಿಮ್ಮ Voter ID ಕಳೆದಿದೆಯೇ? ಈ 11 ದಾಖಲೆಗಳಿದ್ದರೂ ಮತ ಚಲಾಯಿಸಬಹುದು!

Voter ID ಇಲ್ಲದಿದ್ದರೂ ಮತದಾನ ಮಾಡಬಹುದು. ಆದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದು ಕಡ್ಡಾಯ.

Last Updated : Apr 2, 2019, 02:47 PM IST
ನಿಮ್ಮ Voter ID ಕಳೆದಿದೆಯೇ? ಈ 11 ದಾಖಲೆಗಳಿದ್ದರೂ ಮತ ಚಲಾಯಿಸಬಹುದು! title=

ನವದೆಹಲಿ: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಏಳು ಹಂತಗಳಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ನಡೆಯಲಿದ್ದು ಮೇ 23ರಂದು ಫಲಿತಾಂಶಗಳು ಪ್ರಕಟವಾಗಲಿದೆ. 

ಮತದಾನ ನಮ್ಮೆಲ್ಲರ ಹಕ್ಕು. ಮತದಾರರು ತಮ್ಮ ಅಧಿಕಾರವನ್ನು ತಪ್ಪದೇ ಚಲಾಯಿಸುವಂತೆ ಪ್ರೇರೇಪಿಸಲು ಚುನಾವಣಾ ಆಯೋಗ ಪ್ರಯತ್ನಿಸುತ್ತಿದೆ. ಮತದಾನ ಮಾಡಲು ಐಡಿ ಪ್ರೂಫ್ ಬಹಳ ಮುಖ್ಯ. ಐಡಿ ಇಲ್ಲದೆ ಮತದಾನ ಮಾಡುವುದು ಅಸಾಧ್ಯ. 

Voter ID ಇಲ್ಲದಿದ್ದರೂ ಮತದಾನ ಮಾಡಬಹುದು. ಆದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದು ಕಡ್ಡಾಯ. ಆದ್ದರಿಂದ, ನೀವು ಮತ ಚಲಾಯಿಸಲು ಹೋಗುವ ಮೊದಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದೇ ಎಂಬುದನ್ನು ಪರಿಶೀಲಿಸಿ. ಇದಕ್ಕಾಗಿ, ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ಗೆ ಹೋಗುವುದರ ಮೂಲಕ ಅಥವಾ ಚುನಾವಣಾ ಆಯೋಗದ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ನೀವು ಇದನ್ನು ಪರಿಶೀಲಿಸಬಹುದು.

ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ಹೀಗೆ ಪರಿಶೀಲಿಸಿ:
1. ಮೊದಲು Electoralsearch.in ವೆಬ್ಸೈಟ್ ಅಲ್ಲಿ ಲಾಗಿನ್ ಆಗಿ. ಇದರಲ್ಲಿ ಮತದಾರರ ಹೆಸರು ಹುಡುಕಲು ಎರಡು ಮಾರ್ಗಗಳಿವೆ.
2. ಮೊದಲನೆಯದು ಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ಇತರ ಅಂಶಗಳನ್ನು ಭರ್ತಿ ಮಾಡಿ  ಮಾಹಿತಿ ಪಡೆಯುವುದು.
3. ಎರಡನೆಯದು ನಿಮ್ಮ EPIC(Voter Identification Number) ಸಂಖ್ಯೆ ದಾಖಲಿಸುವ ಮೂಲಕ ಮಾಹಿತಿ ಪಡೆಯಬಹುದು.
4. ಮಾಹಿತಿ ನೀಡಿದ ಬಳಿಕ ಮತದಾರರ ಪಟ್ಟಿ ನಿಮ್ಮ ಮುಂದೆ ತೆರೆಯುತ್ತದೆ. ಅದರಲ್ಲಿ ನಿಮಗೆ ಅಗತ್ಯವಿರುವ ಮಾಹಿತಿ ಸಿಗುತ್ತದೆ.
5.  ಇದಲ್ಲದೆ, ಇಸಿ ಟೋಲ್ ಫ್ರೀ ಸಂಖ್ಯೆ 1800111950 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ನಿಮ್ಮ ವೋಟರ್ ಐಡಿ ಕಳೆದು ಹೋಗಿದ್ದರೆ, ಅದಕ್ಕಾಗಿ ಗಾಬರಿಯಾಗುವ ಅಗತ್ಯವಿಲ್ಲ. ಏಕೆಂದರೆ ವೋಟರ್ ಐಡಿ ಇಲ್ಲದಿದ್ದರೂ ಈ 11 ದಾಖಲೆಗಳಲ್ಲಿ ಯಾವುದಾದರು ಒಂದು ದಾಖಲೆಯಿದ್ದರೂ ಮತ ಚಲಾಯಿಸಬಹುದು. 

  1. ಪಾಸ್ ಪೋರ್ಟ್
  2. ಡ್ರೈವಿಂಗ್ ಲೈಸೆನ್ಸ್
  3. ಆಧಾರ್ ಕಾರ್ಡ್
  4. ಪ್ಯಾನ್ ಕಾರ್ಡ್
  5. MGNREGA ಜಾಬ್ ಕಾರ್ಡ್
  6. ಸ್ಮಾರ್ಟ್ ಕಾರ್ಡ್ (ಕಾರ್ಮಿಕ ಸಚಿವಾಲಯದ ಯೋಜನೆಯಡಿಯಲ್ಲಿ ನೀಡಲಾದ ಕಾರ್ಡ್)
  7. ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್
  8. ಬ್ಯಾಂಕ್/ಪೋಸ್ಟ್ ಆಫೀಸ್ ನ ನಿಮ್ಮ ಪೋಟೋವುಳ್ಳ ಪಾಸ್ ಬುಕ್
  9. ಫೋಟೋ ಇರುವ ಪಿಂಚಣಿ ದಾಖಲೆ
  10. PSU ನೌಕರರಾಗಿದ್ದರೆ ಸರ್ಕಾರ ನೀಡಿರುವ ಫೋಟೋ ಸಹಿತ ಗುರುತಿನ ಚೀಟಿ
  11. ಸಂಸದರು/ವಿಧಾನಸಭಾ/ವಿಧಾನ ಪರಿಷತ್ತಿನ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ

Trending News