Cooking Oil Price Decrease: ಖಾದ್ಯ ತೈಲ ಅಥವಾ ಅಡುಗೆ ಎಣ್ಣೆಯ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ, ಈ ಸುದ್ದಿ ತಿಳಿದ ಜನಸಾಮಾನ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಜಾಗತಿಕ ಬೆಲೆಗಳ ತೀವ್ರ ಕುಸಿತದಿಂದ ಜನಸಾಮಾನ್ಯರಿಗೆ ಲಾಭವಾಗುವಂತೆ ತಮ್ಮ ಉತ್ಪನ್ನಗಳ ಗರಿಷ್ಠ ಚಿಲ್ಲರೆ ಬೆಲೆಯಲ್ಲಿ (ಎಂಆರ್‌ಪಿ) ಇಳಿಕೆ ಮಾಡಲು ಅಡುಗೆ ಎಣ್ಣೆ ತಯಾರಿಕಾ ಸಂಸ್ಥೆಗಳಿಗೆ ಸರ್ಕಾರ ನಿರ್ದೇಶನ ನೀಡಿದೆ. ಸರ್ಕಾರದ ಸಲಹೆಯನ್ನು ಅನುಸರಿಸಿ, ಖಾದ್ಯ ತೈಲ ಕಂಪನಿಗಳು ಅಡುಗೆ ಎಣ್ಣೆಯ ಬೆಲೆಯಲ್ಲಿ 6% ವರೆಗೆ ಕಡಿಮೆ ಮಾಡಲು ನಿರ್ಧರಿಸಿವೆ.
ಇದನ್ನೂ ಓದಿ: ʼಇಲಿಯಾನʼದಿಂದ ಹಿಡಿದು ಮದುವೆಯಾಗದೇ ತಾಯಂದಿರಾದ ಸ್ಟಾರ್ ನಟಿಯರು ಇವರು..!
ಖಾದ್ಯ ತೈಲದ ಪ್ರಮುಖ ಆಮದುದಾರರಾದ ಭಾರತವು 2021-22 (ನವೆಂಬರ್-ಅಕ್ಟೋಬರ್) ಮಾರ್ಕೆಟಿಂಗ್ ವರ್ಷದಲ್ಲಿ 1.57 ಲಕ್ಷ ಕೋಟಿ ಮೌಲ್ಯದ ಖಾದ್ಯ ತೈಲವನ್ನು ಆಮದು ಮಾಡಿಕೊಂಡಿದೆ. ಇದು ಮಲೇಷ್ಯಾ ಮತ್ತು ಇಂಡೋನೇಷ್ಯಾದಿಂದ ತಾಳೆ ಎಣ್ಣೆಯನ್ನು ಖರೀದಿಸುತ್ತದೆ. ಸೋಯಾಬೀನ್ ಎಣ್ಣೆಯನ್ನು ಅರ್ಜೆಂಟೀನಾ ಮತ್ತು ಬ್ರೆಜಿಲ್ ನಿಂದ ಆಮದು ಮಾಡಿಕೊಳ್ಳಲಾಗುತ್ತದೆ.
ಸರ್ಕಾರ ಮತ್ತು ತೈಲ ಕಂಪನಿಗಳ ಈ ನಿರ್ಧಾರದ ನಂತರ, ಫಾರ್ಚೂನ್, ಧಾರಾ ಮತ್ತು ಜೆಮಿನಿ ಬ್ರಾಂಡ್ ಗಳ ಖಾದ್ಯ ತೈಲದ ಬೆಲೆ ರೂ.20 ಕ್ಕೆ ಇಳಿಯಲಿದೆ. ಮುಂಬರುವ ತ್ರೈಮಾಸಿಕಗಳಲ್ಲಿ ತೈಲ ಬೆಲೆಗಳು ಕುಸಿಯುತ್ತಲೇ ಇರುತ್ತವೆ ಎಂದು ಉದ್ಯಮ ಸಂಸ್ಥೆ SEA (ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ) ಹೇಳಿದೆ.
ಯಾವ ಅಡುಗೆ ಎಣ್ಣೆಯ ಬೆಲೆಯು ಅಗ್ಗವಾಗಿದೆ?
ಅದಾನಿ ವಿಲ್ಮಾರ್ ಫಾರ್ಚೂನ್ ಬ್ರಾಂಡ್ ಅಡಿಯಲ್ಲಿ ಖಾದ್ಯ ತೈಲವನ್ನು ಮಾರಾಟ ಮಾಡುವ ಗೌತಮ್ ಅದಾನಿ ಗ್ರೂಪ್ ಕಂಪನಿಯ ಅದಾನಿ ವಿಲ್ಮಾರ್ ಪ್ರತಿ ಲೀಟರ್ ತೈಲ ಬೆಲೆಯನ್ನು 5 ರೂ. ಇಳಿಸಿದೆ. ಇದು ಸೋಯಾಬೀನ್, ಲಿನ್ಸೆಡ್, ಸಾಸಿವೆ, ಭತ್ತದ ಹೊಟ್ಟು, ಕಡಲೆಕಾಯಿ ಮತ್ತು ಹತ್ತಿಬೀನ್ ಎಣ್ಣೆಗಳನ್ನು ಮಾರಾಟ ಮಾಡುತ್ತದೆ. ಹಾಗಾಗಿ ಜೆಮಿನಿ ಎಡಿಬಲ್ ಮತ್ತು ಫ್ಯಾಟ್ಸ್ ಇಂಡಿಯಾ ಪ್ರತಿ ಲೀಟರ್ ಗೆ 10 ರೂಪಾಯಿ ಇಳಿಕೆ ಮಾಡಲು ನಿರ್ಧರಿಸಿದೆ. ಜೊತೆಗೆ ಮದರ್ ಡೈರಿಯು ಧಾರಾ ಬ್ರ್ಯಾಂಡ್ ನ ಖಾದ್ಯ ತೈಲದ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ 15 ರಿಂದ 20 ರೂ. ಇಳಿಕೆ ಮಾಡಿದೆ. ಕಳೆದ ವರ್ಷ ಜುಲೈನಲ್ಲಿ ಮದರ್ ಡೇರಿ ಬೆಲೆ ಇಳಿಕೆ ಮಾಡಿತ್ತು.
ದೇಶದ ಗೃಹಿಣಿಯರಿಗೆ ಸಿಹಿ ಸುದ್ದಿ:
ಪರಿಷ್ಕೃತ ಬೆಲೆಗಳೊಂದಿಗೆ ಧಾರಾ ಬ್ರ್ಯಾಂಡ್ ಖಾದ್ಯ ತೈಲದ ತಾಜಾ ಸ್ಟಾಕ್ ಗಳು ಮುಂದಿನ ವಾರದ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಜೊತೆಗೆ ಸುಮಾರು ಮೂರು ವಾರಗಳಲ್ಲಿ ಗ್ರಾಹಕರು ಅದಾನಿ ವಿಲ್ಮರ್ ಮತ್ತು ಜೆಮಿನಿ ಎಡಿಬಲ್ ನ ಬೆಲೆ ಕಡಿತದ ಲಾಭವನ್ನು ಪಡೆಯುತ್ತಾರೆ.
ಸಾಲ್ವೆಂಟ್ ಎಕ್ಸ್ ಟ್ರಾಕ್ಟರ್ಸ್ ಅಸೋಸಿಯೇಷನ್ (ಎಸ್‌ಇಎ) ಕಾರ್ಯನಿರ್ವಾಹಕ ನಿರ್ದೇಶಕ ಬಿ.ವಿ. ಮೆಹ್ತಾ ಮಾತನಾಡಿದ್ದು, ಮುಂದಿನ ತ್ರೈಮಾಸಿಕದಲ್ಲಿ ಖಾದ್ಯ ತೈಲ ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಲ್ಲದೆ, ಕಳೆದ ಆರು ತಿಂಗಳಲ್ಲಿ ಜಾಗತಿಕ ಬೆಲೆಗಳು ಸ್ಥಿರವಾಗಿ ಕಡಿಮೆಯಾಗುತ್ತಿವೆ ಎಂದು ಎಸ್‌ಇಎ ಅಧ್ಯಕ್ಷ ಅಜಯ್ ಜುಂಜುನ್‌ವಾಲಾ ಹೇಳಿದ್ದಾರೆ. ಅದರಲ್ಲೂ ಕಳೆದ 60 ದಿನಗಳಿಂದ ಶೇಂಗಾ, ಸೋಯಾಬೀನ್, ಸಾಸಿವೆ ಬಂಪರ್ ಬೆಳೆಗಳಿದ್ದರೂ ದೇಶೀಯ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಹೊಂದಿಕೆಯಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತೈಲ ಕಂಪನಿಗಳ ಮೇಲೆ ದರ ಇಳಿಸುವಂತೆ ಒತ್ತಡ ಹೆಚ್ಚಾಗಿದೆ.
ಇದನ್ನೂ ಓದಿ: Photos: ಕಲಬುರ್ಗಿಯಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಗೆ ಹರಿದು ಬಂದ ಜನಸಾಗರ
ಮದರ್ ಡೈರಿಯು ಧಾರಾ ಖಾದ್ಯ ತೈಲದ ಗರಿಷ್ಠ ಚಿಲ್ಲರೆ ಬೆಲೆ ಅಥವಾ ಎಂ ಆರ್ ಪಿಯನ್ನು ಪ್ರತಿ ಲೀಟರ್ ಗೆ ₹15-20 ರಷ್ಟು ಕಡಿತಗೊಳಿಸುವುದಾಗಿ ಬುಧವಾರ ವರದಿ ಮಾಡಿದೆ. ಅದಾನಿ ವಿಲ್ಮಾರ್ ಲಿಮಿಟೆಡ್ ಕೂಡ ಮೇ ತಿಂಗಳಲ್ಲಿ ತನ್ನ ಅತಿ ಹೆಚ್ಚು ಮಾರಾಟವಾದ 1 ಲೀಟರ್ ಫಾರ್ಚೂನ್ ಸೋಯಾಬೀನ್ ಎಣ್ಣೆಯ ಮೇಲೆ ಬೆಲೆ ಕಡಿತವನ್ನು ಮಾಡುವುದಾಗಿ ಹೇಳಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ