ನವದೆಹಲಿ: 2021ನೇ ಸಾಲಿನ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ಪ್ರೊಬೇಷನರಿ ಆಫೀಸರ್ (IBPS PO Recruitment 2021) 4,135 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಆದರೆ ಈ ಪೋಸ್ಟ್ ಗಳಿಗೆ ಅರ್ಜಿ ಸಲ್ಲಿಸಲು ಇಂದೇ (ನ.10)ಕೊನೆಯ ದಿನವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ibps.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ಭರ್ತಿಗೆ ಅಕ್ಟೋಬರ್ 20 ರಂದು ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿತ್ತು.
IBPS PO ನೇಮಕಾತಿ 2021: ಈ ಹುದ್ದೆಗಳಿಗೆ ಅರ್ಹತೆ ಪಡೆಯಲು ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪದವಿಯನ್ನು ಹೊಂದಿರಬೇಕು ಅಥವಾ ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟ ಯಾವುದೇ ಸಮಾನ ಅರ್ಹತೆಯನ್ನು ಹೊಂದಿರಬೇಕು. ಆನ್ಲೈನ್ ಪ್ರಿಲಿಮ್ಸ್ ಪರೀಕ್ಷೆಗಳು(Preliminary Examination) ಇದೇ ವರ್ಷದ ಡಿಸೆಂಬರ್ 4 ಮತ್ತು 11ರಂದು ನಡೆಯಲಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ 3 ಸುತ್ತುಗಳಿರುತ್ತವೆ. ಮೊದಲಿಗೆ ಪ್ರಿಲಿಮ್ಸ್ ಪರೀಕ್ಷೆ, ನಂತರ ಮುಖ್ಯ ಪರೀಕ್ಷೆ ಮತ್ತು ಅಂತಿಮವಾಗಿ ಸಂದರ್ಶನವಿರುತ್ತದೆ. ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 20 ರಿಂದ 30 ವರ್ಷ ವಯಸ್ಸಿನವರಾಗಿರಬೇಕು.
ಇದನ್ನೂ ಓದಿ: Hindu Temple: ಪಾಕಿಸ್ತಾನದಲ್ಲಿ ಮತ್ತೆ ಹಿಂದೂಗಳ ವಿರುದ್ಧ ತಾರತಮ್ಯ
ಅರ್ಜಿ ಶುಲ್ಕ: ಇತರೆ ಎಲ್ಲಾ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 850 ರೂ. ಪಾವತಿಸಬೇಕಾಗುತ್ತದೆ. SC/ST/PWBD ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 175 ರೂ. ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ.
IBPS PO ನೇಮಕಾತಿ 2021: ಅರ್ಜಿ ಸಲ್ಲಿಸಲು ಕ್ರಮಗಳು
- ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ನ ಅಧಿಕೃತ ವೆಬ್ಸೈಟ್ಗೆ ಹೋಗಿ - ibps.in.
- ಮುಖಪುಟದಲ್ಲಿ IBPS PO ನೇಮಕಾತಿ 2021 ಲಿಂಕ್ ಅನ್ನು ಕ್ಲಿಕ್ ಮಾಡಿ
- ಹೊಸ ವಿಂಡೋ ತೆರೆಯುತ್ತದೆ. ಹೊಸ ನೋಂದಣಿಯ ಮೇಲೆ ಕ್ಲಿಕ್ ಮಾಡಿ ಅಥವಾ ಮೊದಲೇ ನೋಂದಣಿ ಪ್ರಕ್ರಿಯೆ ಹೊಂದಿದ್ದರೆ ಲಾಗಿನ್ ಮಾಡಿ
- ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಸಲ್ಲಿಸಿ (Submit)
- ದೃಢೀಕರಣವನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ
ಒಟ್ಟು 11 ಬ್ಯಾಂಕ್ಗಳು ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿವೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅತಿ ಹೆಚ್ಚು ಅಂದರೆ ಒಟ್ಟು 912 ಖಾಲಿ ಹುದ್ದೆಗಳಿವೆ.
ಇದನ್ನೂ ಓದಿ: Devendra Fadnavis PC: Nawab Malik ಹಾಗೂ Dawood Ibrahim ನಂಟಿನ ಕುರಿತು ಸಾಕ್ಷಾಧಾರ ಬಹಿರಂಗ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ