ನವದೆಹಲಿ: ಭಾರತ ತಂಡವು ಫೆಬ್ರವರಿ 20 ರಂದು ಬಾಂಗ್ಲಾದೇಶದ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.ನಾಯಕ ರೋಹಿತ್ ಶರ್ಮಾ ತಂಡವನ್ನು ತಮ್ಮ ದಾಖಲೆಯ ಮೂರನೇ ಗೆಲುವಿನತ್ತ ಮುನ್ನಡೆಸಲು ಎದುರು ನೋಡುತ್ತಿದ್ದಾರೆ. ಅಷ್ಟೇ ಅಲ್ಲದೆ ಧೋನಿ ನಂತರ ಅತಿ ಹೆಚ್ಚು ಐಸಿಸಿ ಟ್ರೋಫಿ ಗೆದ್ದ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲು ರೋಹಿತ್ ಸ್ವತಃ ಉತ್ಸುಕರಾಗಿದ್ದಾರೆ.
ಇದನ್ನೂ ಓದಿ: ಈ ದಿನ ಖಾತೆ ಸೇರಲಿದೆ ಪಿಎಂ ಕಿಸಾನ್ 19 ನೇ ಕಂತಿನ ಹಣ!ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಈ ರೀತಿ ಪರಿಶೀಲಿಸಿ
ಇದರ ಜೊತೆಗೆ ಈಗ ಈ ಟೂರ್ನಿಯಲ್ಲಿ ಇನ್ನೂ ಕೇವಲ 183 ರನ್ ಗಳಿಸಿದರೆ ನೂತನ ವಿಶ್ವ ದಾಖಲೆಯೊಂದನ್ನು ರೋಹಿತ್ ಶರ್ಮಾ ನಿರ್ಮಿಸುವ ಹಾದಿಯಲ್ಲಿದ್ದಾರೆ. ಹೌದು, ಈಗ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದ್ದು, ಉಳಿದ ಪಂದ್ಯಾವಳಿಗಳು ಪಾಕ್ ನಲ್ಲಿ ನಡೆಯಲಿವೆ.ರೋಹಿತ್ ಶರ್ಮಾ ಪ್ರಸ್ತುತ ದುಬೈನಲ್ಲಿ 317 ರನ್ ಗಳಿಸಿದ್ದು ಮತ್ತು 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಸ್ಥಳದಲ್ಲಿ 5 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಹೊಂದಿರುವುದರಿಂದ ಅವರು ಈ ಪಂದ್ಯಾವಳಿಯಲ್ಲಿ 183 ರನ್ ಗಳನ್ನು ಗಳಿಸಿದರೆ, ರೋಹಿತ್ ದುಬೈನಲ್ಲಿ 500 ಏಕದಿನ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನ್ನುವ ಕೀರ್ತಿಗೆ ಪಾತ್ರರಾಗಲಿದ್ದಾರೆ.
ಇದನ್ನೂ ಓದಿ- Railway New Rules: ರೈಲ್ವೆ ಕೌಂಟರ್ ಟಿಕೆಟ್ ಸಂಬಂಧಿಸಿದಂತೆ ಮಹತ್ವದ ಆದೇಶ, ನಿಮಿಷಗಳಲ್ಲೇ ಹಣ ರಿಟರ್ನ್
ಈಗ ಈ ದಾಖಲೆ ಸ್ಕಾಟ್ಲೆಂಡ್‌ನ ರಿಚಿ ಬೆರಿಂಗ್ಟನ್ ಅವರ ಹೆಸರಿನಲ್ಲಿದೆ.ಅವರು ದುಬೈನಲ್ಲಿ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಬ್ಯಾಟ್ಸ್‌ಮನ್ (424) ದಾಖಲೆಯನ್ನು ಹೊಂದಿದ್ದಾರೆ, ಇನ್ನು ಭಾರತದ ಪರವಾಗಿ ಶಿಖರ್ ಧವನ್ ಆ ಸ್ಥಳದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ (342) ಎನ್ನುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
ರೋಹಿತ್ ಶರ್ಮಾ ಅವರ ಕೊನೆಯ ಐಸಿಸಿ ಟೂರ್ನಿ?
ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅವರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಕೊನೆಯ ಐಸಿಸಿ ಈವೆಂಟ್ ಆಗಿರಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಭಾರತ ಭಾಗವಹಿಸಲಿರುವ ಮುಂದಿನ ಐಸಿಸಿ ಈವೆಂಟ್ 2026 ರ ಟಿ 20 ವಿಶ್ವಕಪ್, ಮತ್ತು ಈ ಮೂವರು ಟಿ 20 ಐಗಳಿಂದ ನಿವೃತ್ತರಾಗಿರುವುದರಿಂದ, ಅವರು ಭಾಗವಹಿಸಬಹುದಾದ ಮುಂದಿನ ಈವೆಂಟ್ ಎಂದರೆ ಅದು 2027 ರ ಏಕದಿನ ವಿಶ್ವಕಪ್. ಎರಡು ವರ್ಷಗಳ ನಂತರ ಪಂದ್ಯಾವಳಿ ಪ್ರಾರಂಭವಾಗುವ ಸಮಯದಲ್ಲಿ ಮೂವರು ಸೂಪರ್‌ಸ್ಟಾರ್‌ಗಳು ಆಡದೇ ಇರಬಹುದು ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.