Valentine’s Day 2025: ಪ್ರೀತಿ ಮಧುರ, ತ್ಯಾಗ ಅಮರ, ಬದುಕು ಭ್ರಮರ.. ಈ ಸಾಲುಗಳು ಶತ ಸಾರಿ ಸತ್ಯ ಎನ್ನಿಸುತ್ತೆ.. ಮಿಥ್ಯವೂ ಅನ್ನಿಸುತ್ತೆ.. ಒಬ್ಬೊಬ್ಬರ ಬದುಕಿನಲ್ಲೂ ಒಂದೊಂದು ರೀತಿ ಈ ಪವಿತ್ರ ಪ್ರೀತಿ.. ಇದಕ್ಕೆ ರೂಪವಿಲ್ಲ ಆದರೆ ಇತ್ತೀಚಿನ ಯುವ ಪೀಳಿಗೆ ಇದಕ್ಕೆ ನಾನಾ ರೀತಿಯ ರೂಪ ನೀಡಿ ಕುರೂಪ ಮಾಡಿದ್ದಾರೆ.. ಲವ್ ಎಂದ್ರೆ ದೂರ ಓಡುವ ಗುಂಪೊಂದಿದೆ, ಇನ್ನೂ ಈ ಪ್ರೀತಿ ಪ್ರೇಮ ನಾಲ್ಕೈದು ದಿನ ಅಷ್ಟೇ ಬಳಿಕ ಎಲ್ಲಾವು ಹೈಲುಪೈಲು ಅನ್ನೋ ಇನ್ನೊಂದು ವರ್ಗವೂ ಇದೆ.. ಇನ್ನೂ ಈ ಲವ್ ಗಿವ್‌ಗೂ ನಮ್ಗೂ ಯಾವುದೇ ಸಂಬಂಧನೇ ಇಲ್ಲಪ್ಪ ನಾವೇ ಬೇರೆ ನಮ್ಮ ಸ್ಟೈಲೇ ಬೇರೆ ಎಂದು ತಮ್ಮ ಪಾಡಿಗೆ ತಾವು ಹಳೇ ಋಷಿಗಳ ರೀತಿ ವೇದಾಂತ ಹೇಳುವ ಗುಂಪುಗಳು ಇವೆ.. ಮತ್ತೊಂದು ವರ್ಗ ಪವಿತ್ರ ಪ್ರೇಮದಲ್ಲಿ ಮಿಂದೆದ್ದು ʻನನಗೆ ನೀನು ನಿನಗೆ ನಾನುʼ ಎಂದು ಕೈ ಕೈಹಿಡಿದು ಸುತ್ತಿ ʻಖಾಲಿʼದಾಸ(ಸಿ]ಯರದ ವರ್ಗವೂ ಬೇರೆ ಇದೆ..
ಇತ್ತೀಚಿನ ದಿನಗಳಲ್ಲಿ ಕೆಲಸ, ಊಟ ನಿದ್ದೆ ಇಲ್ಲದೆ ಬಳಲುತ್ತಿರುವರಿಗಿಂತ ನಿಜವಾದ ಪ್ರೀತಿಯ ಹಂಬಲದಲ್ಲಿ ಬೆಂದ ಮನೆಗಳೇ ಹೆಚ್ಚು.. ಇದು ತಂದೆ ತಾಯಿ ಪ್ರೀತಿ ಆಗಿರಬಹುದು, ಅಣ್ಣ ತಮ್ಮಂದಿರ ಪ್ರೀತಿ ಆಗಿರಬಹುದು, ಅಕ್ಕ-ತಂಗಿ, ಸ್ನೇಹ ಸಂಬಂಧಗಳು ಇರಬಹುದು.. ಇನ್ನೂ ʻನೀನೆ ಎಲ್ಲ ನೀನ್ ಬಿಟ್ರೆʼ ಬೇರೆ ಇಲ್ಲ ಎನ್ನುವ ಪವಿತ್ರ ಪ್ರೀತಿ ಸಿಗದೆ, ಕೆಲವು ದಿನ ಸಿಕ್ಕಿ, ಬಳಿಕ ಆಕಾಶದ ಚುಕ್ಕಿ ಕಂಡವರೇ ಹೆಚ್ಚು.. ಈ ಪ್ರೀತಿ-ಪ್ರೇಮ ಉಳಿಸಿಕೊಳ್ಳುವ ಜವಾಬ್ದಾರಿ ಪ್ರೇಯಸಿ-ಪ್ರಿಯಕರ ಇಬ್ಬರ ನಡುವೆಯೂ ಸಮಪಾಲು ಇರುತ್ತದೆ.. ಈ ಲವ್ವಯಾಣ ಕೆಲವರ ಬದುಕಿನಲ್ಲಿ ಚೌ ಚೌ ಬಾತ್ ಆಗಿ, ಹಲವರ ಬಾಳಿನಲ್ಲಿ ಖಾರಬಾತಾಗಿ ಕಾಡಿದ್ದೆ ಹೆಚ್ಚು.. ಪುಣ್ಯವಂತರು ಅಂತೀವ್ ಅಲ್ಲ ಅದೇ ಈಗೀನ ಭಾಷೆಯಲ್ಲಿ ಪಾಪವಂತರು ಬಾಳಿನಲ್ಲಿ ಪ್ರೀತಿ ಫುಲ್ ಮಿಲ್ಸ್ ಆಗಿ ಬದುಕಿನಲ್ಲಿ ಸತಿ-ಪತಿಗಳಾಗಿ ಜೀವನದ ಉದ್ದಕ್ಕೂ ಪ್ರೀತಿ ಹಂಚುವವರು...
ಇದನ್ನೂ ಓದಿ- ಸುಂದರ ಸಂಸಾರ ಹಾಳು ಮಾಡುತ್ತಿದೆ ಹಳೆ ಲವ್ ಸ್ಟೋರಿ...!
20ನೇ ಶತಮಾನದಲ್ಲಿ ಪ್ರೀತಿ ʻಕಾಮʼನ್ ಆಗಿದೆ, ಒಂದೇ ಸೈಟ್‌ನಲ್ಲಿ ಲವ್ವು, ಎರಡನೇ ಮೀಟಿಂಗ್‌ನಲ್ಲಿ ಡೇಟಿಂಗ್, ಮೂರೇ ದಿನಕ್ಕೆ ಮನೆಗೆ... ಇದು ವ್ಯಂಗ್ಯ ಅನ್ನಿಸಿದ್ರು ಈ ಕಾಲದಲ್ಲಿ ಶೇಕಡ 80 ರಷ್ಟು ಪ್ರೀತಿಗಳು ಇದೇ ರೀತಿ ಸಾಗುತ್ತಿವೆ.. ಪ್ರೀತಿ ಎಂಬುವುದು ನಂಬಿಕೆ ಎನ್ನುತ್ತಾರೆ ಈಗೀನ ಯುವ ಪೀಳಿಗೆಯಲ್ಲಿ ಈ ಪದಕ್ಕೆ ಅರ್ಥ ಹುಡುಕುವುದು ಕಷ್ಟ ಅನ್ನಿ.. ಪ್ರೀತಿಗಾಗಿ ಅಪಅಪಿಸೋ ಮನಸುಗಳು ಅದೆಷ್ಟೋ.. ಪ್ರೀತಿಯಿಂದ ಮೋಸ ಹೋದ ನೊಂದ ಮನಗಳು ಅದೆಷ್ಟೋ.. ಪ್ರೀತಿ ಪ್ರೇಮದಿಂದ ಜೀವ ಕಳೆದುಕೊಂಡ ಜೋಡಿಗಳೆಷ್ಟೋ... ಪ್ರೀತಿಯನ್ನೇ ನಂಬಿ ಮನದರಸನ ನಂಬಿ ತಂದೆ ತಾಯಿ ಪ್ರೇಮದಿಂದ ವಂಚಿತರಾದವರೆಷ್ಟೋ...? ಪ್ರೀತಿಸಿ ಒಪ್ಪಿಸಿ ಒಲಿಸಿಕೊಂಡವರು ಬೆರಳಕೆ ಅಷ್ಟೇ ಎಂದು ಹೇಳಬಹುದು.. ಮದುವೆ ಬಳಿಕ ಕಟಕಟೆಗೆ ಹೋದವರು ಎಷ್ಟು ಮಂದಿ.. ಮದುವೆ ಮುಂಚೆಯೇ ಮನೆ ಸೇರಿದ ಮನಗಳೆಷ್ಟೋ... ನೀನೊಂದು ತೀರ ನಾನೊಂದು ತೀರ ಎಂದು ದೂರ ಉಳಿದವರೆಷ್ಟೋ. ಮಂದಿ.. ಪ್ರೀತಿಗೆ ಬೇಕಾಗಿರೋದು ಪರಿಪೂರ್ಣ ನಂಬಿಕೆ.. ಪ್ರೀತಿಯ ಪ್ರೇಮಸಾಗರಕ್ಕೆ ನಂಬಿಕೆಯೇ ಸೇತುವೆ..
ಇದನ್ನೂ ಓದಿ- ಸುಂದರ ಸಂಸಾರ ಹಾಳು ಮಾಡುತ್ತಿದೆ ಹಳೆ ಲವ್ ಸ್ಟೋರಿ...!
ಇದು ಪ್ರೀತಿಗೆ ಸರಿಯಾದ ಕಾಲವಲ್ಲವಾ..? ಇಲ್ಲ ಪ್ರೀತಿನೇ ಸರಿ ಇಲ್ವ..? ಇಲ್ಲ ಪ್ರೀತ್ಸೋರೆ ಸರಿ ಇಲ್ವ..? ಇಲ್ಲ ಪ್ರೀತಿಯ ಪದದ ಅರ್ಥವೇ ಗೊತ್ತಿಲ್ವ..? ಇವು ನಮ್ಮಲ್ಲಿ ಕಾಡುವ ಬಹಳ ಗೊಂದಲದ ಪ್ರಶ್ನೆಗಳು.. ಮನುಷ್ಯ ಸಂಘಜೀವಿ ಎನ್ನುತ್ತಾರೆ.. ಮನುಷ್ಯ ಅವಲಂಬಿತ ಜೀವಿ.. ಇನ್ನೊಬ್ಬರ ಮೇಲೆ ಅಥವಾ ಇನ್ನೊಂದು ಜೀವಿಯ ಮೇಲೆ ಬದುಕಲು ಅವಲಂಬಿತನಾಗಿರುತ್ತಾನೆ.. ಮನದ ಬಯಕೆಗಾಗಿಯೋ ದೇಹದ ಕೋರಿಕೆಗಾಗಿಯೋ ಅಥವಾ ಮನಸಿನ ನೆಮ್ಮದಿಗಾಗಿಯೇ ಸಂಗಾತಿಯನ್ನು ಹುಡುಕುತ್ತಾರೆ.. ಇದಕ್ಕೆ ನಾವು ಪ್ರೀತಿ, ಇತ್ಯಾದಿ ಎಂದು ಹೆಸರಿಡುತ್ತೇವೆ.. ತಾನಾಗದ ನೋವನ್ನು, ನಲಿವನ್ನು ಹಂಚಿಕೊಳ್ಳುವ ಮನ ಇರಬೇಕು, ತಲೆ ಹೊರಗಿಕೊಳ್ಳಲು ಒಂದು ಭುಜ ಇರ್ಬೇಕು, ಆ ಭುಜ, ಮನಸು ನನ್ನಾಕೆ(ವನು)ದಾಗಿರಬೇಕು ಎಂಬುವುದು ಹೆಬ್ಬಯಕೆ..
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.